ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ರ ಚುನಾವಣೆಯನ್ನು ರದ್ದುಗೊಳಿಸಿ ತಮ್ಮನ್ನುನ್ನು ಅಧ್ಯಕ್ಷರನ್ನಾಗಿ ಸ್ಥಾಪಿಸಲು ತೊಡಕಾಗಿರುವ ಎಲ್ಲಾ ನಿಯಮ ಕಾನೂನುಗಳನ್ನು ರದ್ದು ಮಾಡಬೇಕು ಮತ್ತು ತೊಡಕಾಗಿರುವ ಅಂಶಗಳು ದೇಶದ ಸಂವಿಧಾನದಲ್ಲೇ ಇದ್ದರೂ ಅದನ್ನೂ ರದ್ದು ಮಾಡಬೇಕು ಎಂದು ತಮ್ಮ ಸಾಮಾಜಿಕ ಜಾಲ ವೇದಿಕೆ ಟ್ರುಥ್ ಸೋಶಿಯಲ್ ನಲ್ಲಿ ಹೇಳಿದ್ದಾರೆ.
“ನೀವು 2020 ರ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳನ್ನು ಹೊರಹಾಕುತ್ತೀರಾ ಮತ್ತು ಸರಿಯಾದ ವಿಜೇತರನ್ನು ಘೋಷಿಸುತ್ತೀರಾ ಇಲ್ಲ ನೀವು ಹೊಸ ಚುನಾವಣೆ ವಿಧಾನವನ್ನು ಹೊಂದಿದ್ದೀರಾ? ಈ ಪ್ರಮಾಣದ ಬೃಹತ್ ಚುನಾವಣಾ ವಂಚನೆಯು ಸಂವಿಧಾನದಲ್ಲಿ ಕಂಡುಬರುವ ಎಲ್ಲಾ ನಿಯಮಗಳು, ನಿಬಂಧನೆಗಳು ಮತ್ತು ಲೇಖನಗಳನ್ನು ಮುಕ್ತಾಯಗೊಳಿಸಲು ಅನುವು ಮಾಡಿಕೊಡುತ್ತದೆ” ಎಂದು ಟ್ರಂಪ್ ಬರೆದಿದ್ದಾರೆ ಮತ್ತು “ಬಿಗ್ ಟೆಕ್” ಇದೆಲ್ಲದರಲ್ಲು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಆರೋಪಿಸಿದ್ದಾರೆ. “ನಮ್ಮ ದೇಶದ ಮಹಾನ್ ‘ಸ್ಥಾಪಕರು’ ಸುಳ್ಳು ಮತ್ತು ಮೋಸದ ಚುನಾವಣೆಗಳನ್ನು ಬಯಸಲಿಲ್ಲ ಮತ್ತು ಕ್ಷಮಿಸುವುದಿಲ್ಲ!” ಎಂದೂ ಹೇಳಿದ್ದಾರೆ.
ಅಧ್ಯಕ್ಷ ಬೈಡೆನ್ ಪುತ್ರ ಹಂಟರ್ ಬಿಡೆನ್ ಅವರ ಲ್ಯಾಪ್‌ಟಾಪ್‌ನಲ್ಲಿ ಕಂಡುಬಂಡ ವಿಷಯಗಳ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿಯ ಕುರಿತ 2020 ರಲ್ಲಿ ನಡೆದ ಮಾಹಿತಿ ವಿನಿಮಯದಲ್ಲಿ ತೋರಿಸಲಾದ ಆಂತರಿಕ ಟ್ವಿಟರ್ ಇಮೇಲ್‌ಗಳನ್ನು ಬಿಡುಗಡೆ ಮಾಡಿದ ನಂತರ ಟ್ರಂಪ್ ಅವರ ಈ ಪೋಸ್ಟ್ ಬಂದಿದೆ.
ಶನಿವಾರ ಶ್ವೇತಭವನದ ವಕ್ತಾರ ಆಂಡ್ರ್ಯೂ ಬೇಟ್ಸ್, ಟ್ರಂಪ್ ಅವರ ಹೇಳಿಕೆಗಳು “ನಮ್ಮ ರಾಷ್ಟ್ರದ ಆತ್ಮಕ್ಕೆ ಇದು ಅಸಹ್ಯಕರವಾಗಿದೆ ಮತ್ತು ಇದನ್ನು ಸಾರ್ವತ್ರಿಕವಾಗಿ ಖಂಡಿಸಬೇಕು” ಎಂದು ಹೇಳಿದರು.
“ನೀವು ಗೆದ್ದಾಗ ಮಾತ್ರ ನೀವು ಅಮೇರಿಕಾವನ್ನು ಪ್ರೀತಿಸಲು ಸಾಧ್ಯವಿಲ್ಲ” ಎಂದು ಬೇಟ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಅಮೆರಿಕನ್ ಸಂವಿಧಾನದಿಂದಾಗಿ 200 ವರ್ಷಗಳಿಂದ ನಮ್ಮ ಮಹಾನ್ ದೇಶದಲ್ಲಿ ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯು ಚಾಲ್ತಿಯಲ್ಲಿದೆ ಮತ್ತು ಅದನ್ನು ಖಾತರಿಪಡಿಸುವ ಒಂದು ಪವಿತ್ರ ದಾಖಲೆ ಅದಾಗಿದೆ. ಸಂವಿಧಾನವು ಅಮೆರಿಕಾದ ಜನರನ್ನು ಒಟ್ಟಿಗೆ ಸೇರಿಸುತ್ತದೆ – ತಮ್ಮ ಪಕ್ಷವನ್ನು ಲೆಕ್ಕಿಸದೆ ಚುನಾಯಿತ ನಾಯಕರು ಅದನ್ನು ಎತ್ತಿಹಿಡಿಯಲು ಪ್ರತಿಜ್ಞೆ ಮಾಡುತ್ತಾರೆ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಮೂಲಭೂತ ಹಕ್ಕುಗಳನ್ನು ತುಳಿಯುವ ನಿರಂಕುಶಾಧಿಕಾರಿಗಳನ್ನು ಸೋಲಿಸಲು ತಮ್ಮ ಪ್ರಾಣವನ್ನು ನೀಡಿದ ಎಲ್ಲ ಅಮೆರಿಕನ್ನರಿಗೆ ಇದು ಅಂತಿಮ ಸ್ಮಾರಕವಾಗಿದೆ.’ ಎಂದೂ ಬೇಟ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.