ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಲ್ಲಿ ಹಿಬಾಬ್ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿ,ಇನ್ನು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಈ ಹಿಂದೆ ವಿವಿ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ ಹೈ ಕೋರ್ಟ್ ಆದೇಶದ ಬಳಿಕವೂ ನಾವು ಹಿಜಾಬ್ ಹಾಕಿಕೊಂಡು ಹೋಗಿದ್ದೇವೆ.
ಆದರೆ ಕೆಲ ದಿನಗಳ ಬಳಿಕ ರಾತ್ರೋರಾತ್ರಿ ಈ ಸಮಸ್ಯೆ ಆರಂಭವಾಗಿದೆ. ಈ ವಿಚಾರದಲ್ಲಿ ನಾವು ಹಲವು ಬಾರಿ ವಿವಿ ಕುಲಪತಿ ಬಳಿಗೆ ಹೋಗಿದ್ದೆವು. ಆಗ ವಿಸಿಯವರು ಡಿಸಿ ಬಳಿ ಕೋರ್ಟ್ ಆದೇಶದ ಸ್ಪಷ್ಟನೆ ಲೆಟರ್ ತನ್ನಿ ಅಂದ್ರು, ಹೀಗಾಗಿ ನಾವು ಡಿಸಿ ಬಳಿಗೆ ಹೋಗಿದ್ದೆವು, ಆದರೆ ಅವರು ಮೊದಲಿಗೆ ಸಿಗಲಿಲ್ಲ ಆ ಬಳಿಕ ಮತ್ತೆ ಕಾಲೇಜಿಗೆ ಹೋದಾಗ ನಮ್ಮನ್ನ ಹೊರಗೆ ಹಾಕಿದ್ದಾರೆ. ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವ ಬೆದರಿಕೆ ಹಾಕಿದ್ದರು., ಆಗ ಪ್ರಾಂಶುಪಾಲರು ನಮ್ಮ ಪ್ರವೇಶ ನಿರ್ಬಂಧ ಮಾಡಿ ಆದೇಶ ಮಾಡಿದ್ರು. ಹೀಗಾಗಿ ನಾವು ಲೈಬ್ರೆರಿಗೆ ಹೋಗಿ ಹೊರಗೆ ಕೂತೆವು. ಆ ಬಳಿಕ ನಮ್ಮನ್ನ ಹಿಜಾಬ್ ಧರಿಸಿ ಕ್ಯಾಂಪಸ್ ಪ್ರವೇಶಕ್ಕೂ ಅನುಮತಿ ನಿರಾಕರಿಸಲಾಯ್ತು. ಎಬಿವಿಪಿ ಪ್ರತಿಭಟನೆ ಬಳಿಕ ನಮ್ಮನ್ನ ಕ್ಯಾಂಪಸ್ ನಿಂದಲೂ ಹೊರಗೆ ಹಾಕಿದ್ರು, ಆ ಬಳಿಕ ನಾವು ಸೋಮವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾದೆವು. ನಮ್ಮ ಜೊತೆಗೆ ನಮ್ಮ ಪೋಷಕರು ಕೂಡ ಮನವಿ ಮಾಡಿದ್ದಾರೆ, ನಮ್ಮ ಮನವಿ ಇಷ್ಟೇ, ಕಾಲೇಜಿನ ಹಳೆಯ ವಸ್ತ್ರ ಸಂಹಿತೆ ಮುಂದುವರೆಸಿ ಈ ಶೈಕ್ಷಣಿಕ ವರ್ಷ ಹಳೆಯ ವಸ್ತ್ರ ಸಂಹಿತೆ ದಯವಿಟ್ಟು ಮುಂದುವರೆಸಿ ನಾವು ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಬರ್ತಾ ಇದೀವಿ ಕಾಲೇಜಿನ ಈ ಆದೇಶದ ಹಿಂದೆ ಹೈ ಕೋರ್ಟ್ ಆದೇಶ ಇಲ್ಲ ಬದಲಾಗಿ ಎಬಿವಿಪಿ ಒತ್ತಡಕ್ಕೆ ಬಿದ್ದು ಈ ಆದೇಶ ಹೊರಡಿಸ್ತಾ ಇದ್ದಾರೆ. ಇದರ ಬಗ್ಗೆ ಕಾನೂನು ಹೋರಾಟ ಮಾಡಿದ್ರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವ ಯಾವುದೇ ಉದ್ದೇಶ ಇಲ್ಲ ಎಂದಿದ್ದಾರೆ.
ಎಬಿವಿಪಿ ಒತ್ತಡದಿಂದಲೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ. ಎರಡು ದಿನ ಕಾಯುತ್ತೇವೆ ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹಿಜಾವ್ ವಿದ್ಯಾರ್ಥಿ ಗೌಸಿಯಾ ಹೇಳಿಕೆ.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022

