ಬೆಂಗಳೂರು ಜೂ 24.
ಕೃಷಿ ವಲಯದಲ್ಲಿ ಸ್ಥಾಪನೆಯಾದ ಎಲ್ಲ ನವೋದ್ಯಮಗಳ ಪ್ರೋತ್ಸಾಹ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಸದಾ ಸಿದ್ದ ಎಂದು ಕೃಷಿ ಸಚಿವ ಎನ್ .ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಪುಡ್ ಪಾರ್ಕ್ ಗಳ ಪುನಶ್ಚೇತನ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿತ ಕಾರ್ಯಾಚರಣೆಯಲ್ಲಿರುವ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಇಲಾಖೆ ಸಹಭಾಗಿತ್ವದಲ್ಲಿ ರೈತರೊಂದಿಗೆ ಸಂಪರ್ಕಿಸುವ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಸಭೆಯಲ್ಲಿ ಕೃಷಿ ನವೋದ್ಯಮಗಳ ಸ್ಥಿತಿಗತಿ, ಅವುಗಳು ಎದುರಿಸುತ್ತಿರುವ ಸವಾಲುಗಳು,
ಸಿರಿಧಾನ್ಯ ಆಧಾರಿತ ಉದ್ಯಮಗಳನ್ನು ಬಲ ಪಡಿಸಲು ಅಗತ್ಯ ಇರುವ ಸರ್ಕಾರದ ನೆರವಿನ ಕುರಿತು ಕೃಷಿ ಸಚಿವರು ಸ್ಟಾರ್ಟಪ್ ಉದ್ಯಮಿಗಳ ಅಭಿಪ್ರಾಯ ಆಲಿಸಿದರು.
ಸಿರಿ ಧಾನ್ಯ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕೊರತೆ ಇದೆ. ಹಾಗಾಗಿ ಪ್ರೋತ್ಸಾಹ ಧನ ಯೋಜನೆ ಮುಂದುವರೆಸುವ ಜೊತೆಗೆ ಉತ್ಪಾದನೆಯನ್ನು 30 ಸಾವಿರದಿಂದ 50 ಸಾವಿರ ಹೆಕ್ಟೇರ್ ಗೆ ಏರಿಕೆ ಮಾಡಲು ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರೊಂದಿಗೆ ಉದ್ದಿಮೆದಾರರ ನೇರ ಖರೀದಿ ವ್ಯವಸ್ಥೆ ಮಾಡಿಸುವ ಬಗ್ಗೆ ಚಿಂತನೆ ನಡೆಸಿ.
ರಾಜ್ಯಾದ್ಯಂತ ಇರುವ ಎಫ್ .ಪಿ.ಓ ಗಳ ಜೊತೆ ಉದ್ದಿಮೆದರರ ಸಂಪರ್ಕ ಕಲ್ಪಿಸಿ ಎಂದು ಅವರು ಹೇಳಿದರು.
ಪ್ರತಿ ಜಿಲ್ಲೆಯಲ್ಲೂ 2 ದಿನಗಳ ಸಿರಿಧಾನ್ಯ ಮೇಳ ಏರ್ಪಡಿಸುವ ಜೊತೆಗೆ ವಿದೇಶದಲ್ಲಿ ನಡೆಯುವ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದಿಂದ ಮಳಿಗೆ ಹಾಕಲು ಸಹ ನೆರವು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು .
ಪ್ರಸಕ್ತ ಮಿಲೆಟ್ ಪೌಡರ್ ಗಳಿಗೆ ಜಿ.ಎಸ್.ಟಿ ಯನ್ನು ಶೇ 18 ರಿಂದ 5 ಕ್ಕೆ ಇಳಿಕೆ ಮಾಡಿರುವಂತೆ ಇದನ್ನು ಇತರ ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳಿಗೂ ವಿಸ್ತರಿಸಬೇಕು ಎಂದು ನವೋದ್ಯಮಿಗಳು ಮನವಿ ಮಾಡಿದ್ದು ಈ ಬಗ್ಗೆ ಕೇಂದ್ರ ಸರ್ಕಾರರಕ್ಕೆ ಪೂರಕ ಪ್ರಸ್ತಾವನೆ ಕಳಿಸಲಾಗುವುದು ಎಂದು ತಿಳಿಸಿದರು.
ಮಿಲೆಟ್ ಆಹಾರ ಉತ್ಪಾದಕರಿಗೆ ತಂತ್ರಜ್ಞಾನ ವಿಸ್ತರಣೆ ಜೊತೆಗೆ ಧೀರ್ಘಾವದಿಗೆ ಆಹಾರ ಪದಾರ್ಥ ಸಂಸ್ಕರಣೆ ಗೆ ಸಿ.ಫ್ .ಟಿ ಆರ್ .ಐ ಮೂಲಕ ನೆರವು ಒದಗಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೃಷಿ ಇಲಾಖೆ ಮೂಲಕ ಶೀಘ್ರವೇ ಕೃಷಿ ನವೋದ್ಯಮಗಳು ಹಾಗೂ ಉತ್ಪಾದಕರು, ಪೂರೈಕೆದಾರರ ಸಂಪರ್ಕ ಬೆಸೆಯುವ ಕೆಲಸ ಮಾಡಲಾಗುವುದು ಜೊತೆಗೆ ಮಾರುಕಟ್ಟೆ ಉತ್ತೇಜನಕ್ಕೆ ಸರ್ಕಾರದ ನೆರವು ಸದಾ ಸಿಗಲಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು
ಇದೇ ವೇಳೆ ವಿವಿಧ ಆಧಾರಿತ ಸಿರಿಧಾನ್ಯ ಆಹಾರ ಪದಾರ್ಥಗಳ ಉತ್ಪಾದಕರು ಉದ್ಯಮದ ಯಶಸ್ಸು, ವ್ಯಾಪ್ತಿ ಬಗ್ಗೆ ವಿವರಿಸಿ, ನವೋದ್ಯಮಕ್ಕೆ ಸಹಕಾರ ನೀಡಿದ ಕೃಷಿ ಸಚಿವರು ಸರ್ಕಾರ ನೆರವಿಗೆ ಧನ್ಯವಾದ
ಸಮರ್ಪಿಸಿದರು.


3 Comments
mgm online gambling mgm bet app betmgm Connecticut
betmgm North Carolina online casino betmgm play betmgm MN
Ignite evenings with fiery leagues and tournaments. In what is ignation casino, rivalry fuels fun. Burn bright and triumph!