ಕನ್ನಡ ಸಿನಿಮಾ ರಂಗದಲ್ಲಿ ಭಗವಾನ್ ಅವರ ಹೆಸರು ಚಿರಪರಿಚಿತ. ಇವರ ಹೆಸರಲ್ಲಿವೆ ಹಲವು ದಾಖಲೆಗಳು, ಸ್ಯಾಂಡಲ್ ವುಡ್ ನ ‘ನಡೆದಾಡುವ ವಿಶ್ವಕೋಶ’ ಎಂದೇ ಕರೆಯಲ್ಪಡುತ್ತಿದ್ದ ಇವರಿನ್ನು ಕೇವಲ ನೆನಪು ಮಾತ್ರ.
ಸದಭಿರುಚಿಯ ಹತ್ತಾರು ಚಲನಚಿತ್ರಗಳನ್ನು ಕನ್ನಡಕ್ಕೆ ನೀಡಿದ ಎಸ್.ಕೆ.ಭಗವಾನ್ (S. K. Bhagavan) 1933ರ ಜುಲೈ 5ರಂದು ಮೈಸೂರಿ (Mysore) ನಲ್ಲಿ ಜನಿಸಿದರು. ಎಸ್.ಕೃಷ್ಣಯ್ಯಂಗಾರ್ ಇವರ ತಂದೆ. ಬ್ಯಾಂಕ್ ಅಕೌಂಟೆಂಟ್ ವೃತ್ತಿಯಲ್ಲಿದ್ದರು. ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ. ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಬೆಂಗಳೂರಿನಲ್ಲಿ ನಡೆಯಿತು. ಶಾಲಾ -ಕಾಲೇಜಿನಲ್ಲಿಯೇ ನಾಟಕದ ಬಗ್ಗೆ ಆಸಕ್ತರಾಗಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು. ಬೇರೆ ಬೇರೆ ನಾಟಕ ತಂಡಗಳು ನೀಡುತ್ತಿದ್ದ ನಾಟಕಗಳಿಂದ ಭಗವಾನ್ ಆಕರ್ಷಿತರಾದರು. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ (Hirannaiah Mitra Mandali) `ದೇವದಾಸಿ` ನಾಟಕದ ವಿಮಲೆ ಪಾತ್ರ ಮಾಡಿದರು. `ಕರ್ನಾಟಕ ನಾಟಕ ಸಭಾ` ಕಂಪನಿ ಪ್ರದರ್ಶಿಸುತ್ತಿದ್ದ ವಿಶ್ವಾಮಿತ್ರ, ಗುಲೇಬಕಾವಲಿ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದರು.
ಚಲನಚಿತ್ರ ರಂಗದಿಂದ ಆಕರ್ಷಿತಗೊಂಡ ಭಗವಾನ್, ಜಿ.ವಿ.ಅಯ್ಯರ್ (G. V. Iyer) , ಬಾಲಕೃಷ್ಣ (Balakrishna), ನರಸಿಂಹರಾಜು (Narasimharaju) ಅವರ ಪರಿಚಯ ಮಾಡಿಕೊಂಡರು. ಜಿ.ವಿ.ಅಯ್ಯರ್, ಬಾಲಕೃಷ್ಣ ನಾಟಕಗಳಿಗೆ ಬರವಣಿಗೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರು.
ಸೂಪರ್ ಹಿಟ್ ಚಿತ್ರ `ಭಾಗ್ಯೋದಯ’ ಸಿನಿಮಾಗೆ ಕಣಗಾಲ್ ಪ್ರಭಾಕರ್ ಶಾಸ್ತಿಗಳು ಚಿತ್ರ ಸಾಹಿತ್ಯ ರಚಿಸುವಾಗ ಭಗವಾನ್ ಅವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಈ ವೇಳೆ ಭಗವಾನ್ ಅವರಿಗೆ ದೊರೈರಾಜ್ ಪರಿಚಯವಾಯಿತು. ಇಲ್ಲಿಂದ ಶುರುವಾದ ಸ್ನೇಹ ತುಂಬಾ ದೂರ ಹೋಯಿತು. ದೊರೈರಾಜ್ ತಮ್ಮ ಛಾಯಾಗ್ರಹಣದ `ಜಗಜ್ಯೋತಿ ಬಸವೇಶ್ವರ` ಚಿತ್ರಕ್ಕೆ ಭಗವಾನ್ ಅವರನ್ನು ಸಹಾಯಕ ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲು ಶಿಫಾರಸ್ಸು ಮಾಡಿದರು. ಹೀಗೆ ದೊರೈರಾಜ್-ಭಗವಾನ್ ಒಂದಾದರು. ನಂತರದಲ್ಲಿ ದೊರೈ-ಭಗವಾನ್ ಎಂಬ ಹೆಸರು ಕನ್ನಡ ಸಿನೆಮಾ ರಂಗದಲ್ಲಿ ಹೊಸದೊಂದು ಅಧ್ಯಾಯವನ್ನು ಆರಂಭಿಸಿತು.
ಕನ್ನಡಕ್ಕೆ ಬಾಂಡ್ ಶೈಲಿಯ ಚಿತ್ರಗಳನ್ನು ಪರಿಚಯಿಸಿದವರಲ್ಲಿ ನಿರ್ದೇಶಕ ದೊರೈ-ಭಗವಾನ್ ಜೋಡಿ ಮೊದಲಿಗರು. ಈ ಇಬ್ಬರೂ ಸೇರಿ ನಿರ್ದೇಶಿಸಿದ ಮೊದಲ ಚಿತ್ರ `ಜೇಡರ ಬಲೆ` ಚಿತ್ರದಲ್ಲಿ ರಾಜಕುಮಾರ್-ಜಯಂತಿ ಪ್ರಮುಖ ಪಾತ್ರದಲ್ಲಿದ್ದರು. ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999 ಚಿತ್ರಗಳನ್ನು ಈ ಜೋಡಿ ನಿರ್ದೇಶಿಸಿತು.
ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸಬೆಳಕು, ಬೆಂಕಿಯ ಬಲೆ, ಸಮಯದ ಗೊಂಬೆ, ಯಾರಿವನು?, ಗಗನ, ನೀನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ ಮುಂತಾದವು ಭಗವಾನ್ ಅವರು ದೊರೈ ಅವರೊಂದಿಗೆ ನಿರ್ದೇಶಿಸಿದ ಪ್ರಮುಖ ಚಿತ್ರಗಳು.
`ಮಾಂಗಲ್ಯ ಬಂಧನ` ಭಗವಾನ್ ಒಬ್ಬರೇ ನಿರ್ದೇಶಿಸಿರುವ ಚಿತ್ರ. ಇವರು ನಿರ್ದೇಶಿಸಿದ ಮುನಿಯನ ಮಾದರಿ ಹಾಗೂ ಜೀವನ ಚೈತ್ರ ಚಿತ್ರಗಳು ರಾಜ್ಯ ಸರ್ಕಾರದಿಂದ ಪ್ರಶಸ್ತಿಗೆ ಪುರಸ್ಕೃತವಾಗಿವೆ. ರಾಜಕುಮಾರ್ ಅಭಿನಯದ ಹಲವು ಸದಭಿರುಚಿಯ ಚಿತ್ರಗಳು ಹಾಗೂ ಕಾದಂಬರಿ ಆಧರಿಸಿದ ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿ ಇವರದು. ಇವರು ನಿರ್ದೇಶನ ಮಾಡಿರುವ ಸುಮಾರು 40 ಚಿತ್ರಗಳಲ್ಲಿ 30 ಚಿತ್ರಗಳು ಕಾದಂಬರಿ ಆಧರಿಸಿದ ಚಿತ್ರಗಳಾಗಿವೆ ಎನ್ನುವುದು ಗಮನಾರ್ಹ.
ಆದರ್ಶ ಚಲನಚಿತ್ರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಭಗವಾನ್ ಅವರಿಗೆ ಸಾಲಿನಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
23 Comments
where to get cheap clomiphene tablets order generic clomid without rxРіРѕРІРѕСЂРёС‚: clomiphene for men clomiphene without insurance buy generic clomid tablets cost cheap clomiphene without rx order cheap clomiphene tablets
I am in point of fact happy to coup d’oeil at this blog posts which consists of tons of useful facts, thanks towards providing such data.
This is the description of content I get high on reading.
order azithromycin 250mg generic – buy azithromycin 250mg sale buy generic metronidazole online
buy inderal 20mg pills – clopidogrel 150mg ca methotrexate 5mg brand
amoxil uk – order amoxicillin without prescription buy combivent paypal
augmentin 1000mg usa – at bio info buy generic ampicillin for sale
purchase esomeprazole pills – https://anexamate.com/ order nexium generic
order coumadin 2mg online cheap – blood thinner cozaar online order
buy meloxicam pill – tenderness buy generic mobic 15mg
prednisone uk – adrenal prednisone pill
natural pills for erectile dysfunction – pills for ed buy best erectile dysfunction pills
order amoxil pill – combamoxi amoxicillin usa
buy diflucan 100mg generic – https://gpdifluca.com/ purchase fluconazole pill
purchase cenforce generic – generic cenforce 50mg cenforce usa
cialis price walmart – ciltad generic cialis side effect
how long before sex should you take cialis – https://strongtadafl.com/# which is better cialis or levitra
More articles like this would remedy the blogosphere richer. online
sildenafil citrate tablets ip 50 mg – https://strongvpls.com/# sildenafil 50 mg pill
This website absolutely has all of the low-down and facts I needed adjacent to this participant and didn’t know who to ask. purchase cenforce without prescription
Thanks for sharing. It’s outstrip quality. https://buyfastonl.com/gabapentin.html
I am in truth delighted to glance at this blog posts which consists of tons of of use facts, thanks representing providing such data. https://prohnrg.com/product/rosuvastatin-for-sale/
More peace pieces like this would urge the web better. https://aranitidine.com/fr/ivermectine-en-france/