ಬೆಂಗಳೂರು – ಚುನಾವಣಾ ಅಕ್ರಮಗಳ ಮೇಲೆ ತೀವ್ರ ನಿಗಾ ವಹಿಸಿರುವ ಚುನಾವಣಾ ಆಯೋಗದ (Election Commission) ಅಧಿಕಾರಿಗಳು ಅಕ್ರಮಗಳ ವಿರುದ್ಧ ಸಮರ ಸಾರಿದ್ದಾರೆ.
Electionಯಲ್ಲಿ ಹಣದ ವಹಿವಾಟಿನ ಬಗ್ಗೆ ನಿಗ ವಹಿಸಿರುವ ಅಧಿಕಾರಿಗಳು ಬೆಂಗಳೂರಿನಲ್ಲಿ ಅಳವಡಿಸಿರುವ ಫ್ಲಕ್ಸ್ ಗಳು ಬ್ಯಾನರ್ಗಳು ಬಂಟಿಂಗ್ಸ್ ಗಳನ್ನು ಮಾಡುತ್ತಿದ್ದಾರೆ ಇದರಿಂದ ನಗರದ ಆಟೋ ಚಾಲಕರು ಕಷ್ಟದಲ್ಲಿ ಸಿಗುವಂತಾಗಿದೆ.ಅಲ್ಪ ಹಣದ ಆಸೆಗೆ ಬಿದ್ದು ಇದೀಗ ದುಬಾರಿ ಮೊತ್ತದ ದಂಡ ತೆರುವಂತಾಗಿದೆ.
ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ತಮ್ಮ ಪರ ಪ್ರಚಾರದ ಫಲಕಗಳನ್ನು ಆಟೋಗಳ ಹಿಂಭಾಗದಲ್ಲಿ ಅಳವಡಿಸಿದ್ದು ಅವುಗಳು ಇದೀಗ ಆಯೋಗದ ಕೆಂಗಣ್ಣಿಗೆ ಕಾರಣವಾಗಿವೆ.
ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳು ಆಟೋ ಚಾಲಕರಿಗೆ ಉಡುಗೊರೆ ಅಥವಾ ಸಣ್ಣ ಪ್ರಮಾಣದ ಹಣ ನೀಡಿ ಆಟೋ ಹಿಂಬಾಗದಲ್ಲಿ ತಮ್ಮ ಪರವಾಗಿ ಪ್ರಚಾರದ ಪಾಲಕಗಳನ್ನು ಅಳವಡಿಸಿದ್ದರು.ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಇವುಗಳನ್ನು ಇದೀಗ ತೆರವುಗೊಳಿಸುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ಆಟೋ ಚಾಲಕರಿಗೆ ಸೂಚನೆ ನೀಡಿದ್ದಾರೆ.
ಇದರಿಂದಾಗಿ ಇವುಗಳನ್ನು ತೆರವುಗೊಳಿಸಲು ಆಟೋ ಚಾಲಕರು ಇದೀಗ ದುಬಾರಿ ಮೊತ್ತ ಇರುವಂತಾಗಿದೆ ಆಟೋಗಳ ರಕ್ಷಾ ಕವಚದ ಮೇಲೆ ಪ್ರಚಾರದ ಫಲಕಗಳನ್ನು ಅಳವಡಿಸಲಾಗಿದೆ ಇವುಗಳನ್ನು ತೆರವು ಮಾಡಬೇಕೆಂದರೆ ಆಟೋದ ರಕ್ಷಾ ಕವಚವನ್ನೇ ತೆರವು ಮಾಡಬೇಕಾಗುತ್ತದೆ ಹೀಗಾಗಿ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲ್ಪಮೊತ್ತ ಅಥವಾ ಸಣ್ಣ ಉಡುಗೊರೆ ನೀಡಿ ತಮ್ಮ ಪರವಾಗಿ ಪ್ರಚಾರದ ಫಲಕ ಅಳವಡಿಸಿದವರು ಇದೀಗ ಆಟೋ ಚಾಲಕರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಫಲಕಗಳನ್ನು ತೆರವು ಮಾಡದೆ ಹೋದರೆ ಚುನಾವಣಾ ಆಯೋಗದ ಅಧಿಕಾರಿಗಳು ಆಟೋಗಳನ್ನ ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ ಅಲ್ಲದೆ ಪ್ರಕರಣಗಳನ್ನು ಕೂಡ ದಾಖಲಿಸುತ್ತಿದ್ದಾರೆ ಇದರಿಂದಾಗಿ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕು ಉಂಟಾಗಿದೆಸಾರಿಗೆ ಅಧಿಕಾರಿಗಳು ರಾಜಕೀಯ ನಾಯಕರ ಭಾವಚಿತ್ರ ಹಾಗೂ ಪಕ್ಷಗಳ ಚಿಹ್ನೆ ಹೊಂದಿರುವ ಆಟೋಗಳ ಮೇಲೆ ದಾಳಿ ನಡೆಸಿ ಬ್ಯಾನರ್, ಸ್ಟಿಕ್ಕರ್ ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸುವ ಕಾರ್ಯಾಚರಣೆ ಮಾಡಿದ್ದು, ಈವರೆಗೆ ಬೆಂಗಳೂರು ನಗರದಲ್ಲಿರುವ 11 ಆರ್ ಟಿಒ ವಲಯಗಳಲ್ಲಿ 450 ಕ್ಕೂ ಹೆಚ್ಚು ಪ್ರಕರಣಗಳನ್ನು ಸಾರಿಗೆ ಅಧಿಕಾರಿಗಳು ದಾಖಲಿಸಿದ್ದಾರೆ.