ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ ಮಹತ್ವದ ಆದೇಶ ನೀಡಿದೆ. ಎಂಟು ವಾರಗಳೊಳಗೆ ವಾರ್ಡ್‌ಗಳ ಮರು ವಿಂಗಡಣೆ ಹಾಗು ಒಬಿಸಿ ಮೀಸಲಾತಿ ಅಂತಿಮಗೊಳಿಸಿ ಕಾರ್ಯ ಪೂರ್ಣಗೊಂಡ ಕೂಡಲೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಬಿಬಿಎಂಪಿ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ವಿಭಾಗೀಯ ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದ ರಾಜ್ಯ ಸರ್ಕಾರ ಎಂಟು ತಿಂಗಳಲ್ಲಿ ವಾರ್ಡ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗಧಿ ಪಡಿಸಲಿದೆ ಎಂದು ತಿಳಿಸಿತು.
ಇದನ್ನು ಪರಿಗಣಿಸಿದ ನ್ಯಾಯಪೀಠ ನೂತನ ವಾರ್ಡ್ ಹಾಗೂ ಮೀಸಲಾತಿ ಆಧರಿಸಿ ಒಂಬತ್ತು ವಾರಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಆಯೋಗಕ್ಕೆ ಸೂಚಿಸಿತು.
Previous Articleಬೆಂಗಳೂರಲ್ಲಿ ಚಂಬಲ್ ದರೋಡೆಕೋರರು!!
Next Article ಐವರು ಮಹಿಳೆಯರು ಸೇರಿ 9 ಮಂದಿ ನೀರುಪಾಲು