ಬಿಗ್ ಬಾಸ್ ಕನ್ನಡ ಸೀಸನ್ 9 ಆಗಸ್ಟ್ ಮೊದಲ ಅಥವ ಎರಡನೇ ವಾರದಲ್ಲಿ ಶುರುವಾಗುವುದು. ಒಂದಲ್ಲ ಎರಡು ಬಿಗ್ ಬಾಸ್ ಶೋ ನಡೆಯುವುದು. ಆಗಸ್ಟ್‌ನಲ್ಲಿ ಶುರುವಾದ ಮಿನಿ ಸೀಸನ್ ಅಕ್ಟೋಬರ್‌ನಲ್ಲಿ ಮುಕ್ತಾಯವಾಗುವುದು. ಆದರೆ ಇದು ಕೇವಲ 42 ದಿನಗಳ ಕಾಲ ನಡೆಯುವುದು. ಈ ಶೋ ಮೊದಲು ವೂಟ್‌ನಲ್ಲಿ ಪ್ರಸಾರವಾಗುವುದು. ಅದಾದ ನಂತರದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀಸನ್ ಪ್ರಸಾರವಾಗುವುದು. ದೊಡ್ಡ ಸೀಸನ್ 100 ದಿನಗಳ ಕಾಲ ನಡೆಯುತ್ತದೆ. ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕೆಲ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಅವರು ಆಮೇಲೆ ಟಿವಿ ಶೋಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಜ್ಯದ ವಿವಿಧ ರಂಗದ ಕೆಲ ಸೆಲೆಬ್ರಿಟಿಗಳು ಕೂಡ ಭಾಗವಹಿಸಲಿದ್ದಾರೆ. ಈ ಎರಡೂ ಸೀಸನ್‌ನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ ಎಂದು ಹೇಳಲಾಗಿದೆ.