ಬೆಂಗಳೂರು.ಆ,29. – ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ರಾಜ್ಯದ ನೂತನ ಕಾಂಗ್ರೆಸ್ ಸರಕಾರವು ನೂರು ದಿನ ಪೂರ್ಣಗೊಳಿಸಿದೆ.ಈ ಅವಧಿ ಸರ್ಕಾರದ 5 ವರ್ಷಗಳ ದಿಕ್ಸೂಚಿ ಆಗಬೇಕಿತ್ತು. ಆದರೆ,ಇದು ದಿಕ್ಕು ತಪ್ಪಿದ ಸರಕಾರವಾಗಿದೆ ಎಂದು ಬಿಜೆಪಿ ಆಪಾದಿಸಿದೆ.
ಗುತ್ತಿಗೆದಾರರ ಬಿಲ್ ಬಾಕಿ ಪಾವತಿಗೆ ಕಮೀಷನ್, ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚ,ಅಭಿವೃದ್ಧಿ ಯೋಜನೆಗಳ ಸ್ಥಗಿತ ಸೇರಿದಂತೆ ಹಲವು ಅರೋಪಗಳ ಚಾರ್ಜ್ ಶೀಟ್ ಹೆಸರಿನ ಕಿರು ಹೊತ್ತಿಗೆ ಬಿಡುಗಡೆ ಮಾಡಿದೆ.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿದರು.
ನೂರು ದಿನಗಳ ಆಡಳಿತ ಅವಧಿಯಲ್ಲಿ ರಾಜ್ಯದ ಹಣಕಾಸಿನ ವ್ಯವಸ್ಥೆಯನ್ನು ಹಳಿ ತಪ್ಪಿಸಿದ್ದಾರೆ. ನಾವು ಫೆಬ್ರವರಿಯಲ್ಲಿ ಮಿಗತೆ ಬಜೆಟ್ ಕೊಟ್ಟಿದ್ದೆವು. ಆದರೆ, ಇವರು ಬಂದ ಬಳಿಕ 8 ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಸುಮಾರು 35 ಸಾವಿರ ಕೋಟಿ ಅಧಿಕ ತೆರಿಗೆ ವಿಧಿಸಿದ್ದಾರೆ ಎಂದು ಟೀಕಿಸಿದರು. ಮೋಟಾರು ವಾಹನ ತೆರಿಗೆ, ಅಬಕಾರಿ ಸುಂಕ ಹೆಚ್ಚಳ ಮೊದಲಾದವು ಇದ್ದರೂ 12 ಸಾವಿರ ಕೋಟಿ ರೂ. ಕೊರತೆ ಬಜೆಟ್ ನೀಡಿದ್ದಾರೆ. ನಮ್ಮ ಆಡಳಿತದ ಅವಧಿಯಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ಕೋವಿಡ್ ವೇಳೆ 14 ಸಾವಿರ ಕೋಟಿ ಕೊರತೆ ಇದ್ದುದನ್ನು ನಾವು ಸರಿದೂಗಿಸಿ ಮಿಗತೆ ಬಜೆಟ್ ಮಂಡಿಸಿದ್ದೇವೆ. ಇವರು ಕೋವಿಡ್ ಇಲ್ಲದಿದ್ದರೂ ಮತ್ತೆ ಕೋವಿಡ್ ಸ್ಥಿತಿಗೆ ಹಣಕಾಸಿನ ಸ್ಥಿತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದರು ಸರಕಾರಿ ನೌಕರರ ವೇತನ ವಿಳಂಬವಾಗುತ್ತಿದೆ. ಇವರು ಅಧಿಕಾರಕ್ಕೆ ಬಂದ ಬಳಿಕ ಒಂದು ಕಿಮೀ ರಸ್ತೆಯನ್ನೂ ಮಾಡಿಲ್ಲ ಬರಗಾಲ ಬಂದಾಗ ರೈತರಿಗೆ ಕನಿಷ್ಠ ಸಹಾಯ ಮಾಡಿಲ್ಲ. 2 ಬಾರಿ ಬಿತ್ತನೆ ಮಾಡಿ ಬೀಜ ಗೊಬ್ಬರ ಹಾಕಿ ರೈತರು ಕಂಗಾಲಾಗಿದ್ದಾರೆ. ಸಾಲವೂ ಸಕಾಲದಲ್ಲಿ ಸಿಗುತ್ತಿಲ್ಲ. ನಾಲ್ಕು ದಿಕ್ಕಿನಲ್ಲಿ ಗಮನಿಸಿದರೂ ಸರಕಾರ ವಿಫಲವಾಗಿದೆ ಎಂದು ದೂರಿದರು.
ಸರ್ಕಾರ ಹಲವು ಗೊಂದಲಗಳಲ್ಲಿ ಸಿಲುಕಿ ಹಾಕಿಕೊಂಡಿದೆ. ಇದರ ಒಟ್ಟು ಪರಿಣಾಮವೆಂಬಂತೆ ಜನರಿಗೆ ಕೊಟ್ಟ ಮಾತಿಗೆ ಅದು ತಪ್ಪಿ ನಡೆದಿದೆ .ರೈತರ ಆತ್ಮಹತ್ಯೆ ನಡೆದಿದ್ದರೂ ತಿರುಗಿ ನೋಡುತ್ತಿಲ್ಲ…
ಕಳೆದ 2 ತಿಂಗಳಿನಲ್ಲಿ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆತ್ಮಹತ್ಯೆ ನಡೆದಿದ್ದರೂ ತಿರುಗಿ ನೋಡುತ್ತಿಲ್ಲರೈತರ ಸಾಲ ವಸೂಲಿ ನಿಲ್ಲಿಸಿ. ಹೊಸ ಸಾಲ, ಬೀಜ- ಗೊಬ್ಬರಕ್ಕೆ ಹೊಸ ಅನುದಾನ ನೀಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.
ಕೃಷಿ ಇಲಾಖೆಯಲ್ಲಿ ಇನ್ನೂ ಟ್ರಾನ್ಸ್‍ಫರ್ ಸುಗ್ಗಿ ನಡೆದಿದೆ. ಪಿಡಬ್ಲುಡಿ ಸೇರಿ ಎಲ್ಲ ಇಲಾಖೆಯಲ್ಲಿ ವರ್ಗಾವಣೆಯದೇ ಸುಗ್ಗಿ ನಡೆದಿದೆ. ರೈತ ವಿದ್ಯಾನಿಧಿ, ಭೂಸಿರಿ, ಜೀವನ ಜ್ಯೋತಿ ರೈತರ ವಿಮೆ ಸೇರಿ ನಮ್ಮ ಕಾಲದ ರೈತರ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಆದಾಯ ಹೆಚ್ಚಳ ಕಾರ್ಯಕ್ರಮಗಳು ನಿಂತಿವೆ ನಾವು ಆರಂಭಿಸಿದ 100 ಅಂಬೇಡ್ಕರ್ ಹಾಸ್ಟೆಲ್‍ಗಳಿಗೆ ಅನುದಾನ ಕೊಟ್ಟಿಲ್ಲ. 50 ಕನಕದಾಸ ಹಾಸ್ಟೆಲ್‍ಗೆ ಅನುದಾನ ಬಿಡುಗಡೆಗೊಳಿಸಿಲ್ಲ. 5 ಮೆಗಾ ಹಾಸ್ಟೆಲ್ ಮಂಜೂರು ಮಾಡಿದ್ದು, ಅನುದಾನ ಸಿಕ್ಕಿಲ್ಲ. ನಾವು ನಿರ್ಮಿಸಿದ 8 ಸಾವಿರ ಶಾಲಾ ಕೊಠಡಿಗೆ ಹಣಕಾಸು ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಿಕ್ಷಣ, ಆರೋಗ್ಯ, ಕೃಷಿ, ಹಿಂದುಳಿದ ವರ್ಗ, ಮಹಿಳೆಯರ ಆರ್ಥಿಕ ಸಂಕಷ್ಟ ನಿವಾರಿಸುವ ಯೋಜನೆಗಳನ್ನು ಕಡೆಗಣಿಸಲಾಗಿದೆ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ತಬ್ದವಾಗಿದೆ ಎಂದ ಅವರು, ಹಗಲುದರೋಡೆ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳ ಮಧ್ಯೆ ಗಲಾಟೆ, ಮಂತ್ರಿಗಳು- ಸಿಎಂ ಕಚೇರಿ ಮಧ್ಯೆ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದೆ ಎಂದು ವಿವರಿಸಿದರು.
ಪ್ರಮುಖ ಹುದ್ದೆಗಳ ಹರಾಜು..
ಬೆಂಗಳೂರು ಗ್ರಾಮಾಂತರ ಡಿ.ಸಿ, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸಂಬಂಧಿಸಿ ದೊಡ್ಡ ಪೈಪೋಟಿ, ಹರಾಜು ನಡೆದಿದೆ. ಈ ಥರ ಪ್ರಮುಖವಾದ ಎಲ್ಲ ಹುದ್ದೆಗೆ ಹರಾಜು ಮೂಲಕ ಟ್ರಾನ್ಸ್‍ಫರ್ ನಡೆದಿದೆ. ಬೆಂಗಳೂರು ಎ.ಸಿ. ದರ 13.5 ಕೋಟಿ ಆಗಿದೆಯಂತೆ. ಭಯ ಭೀತಿ ಇಲ್ಲದೆ ಭ್ರಷ್ಟಾಚಾರ ನಡೆದಿದೆ. ಪ್ರಶ್ನಿಸಿದರೆ ಕೇಸು ಹಾಕುತ್ತಾರೆ ಎಂದು ಹೇಳಿದರು
ಕಮೀಷನ್ ಕೇಳುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ಕೊಟ್ಟ ಗುತ್ತಿಗೆದಾರರ ಮೇಲೆ ಕೇಸು ಹಾಕಲಾಗಿದೆ. ಭ್ರಷ್ಟಾಚಾರದ ವಿಷಯ ಕೈಬಿಟ್ಟಿದ್ದಾರೆ. ಕೆಲಸ ನಿಲ್ಲಿಸಿದ್ದ ಕೆಂಪಣ್ಣ ದೂರು ನೀಡಿದ್ದರು. ನಾವು ಅವರ ಮೇಲೆ ಕೇಸು ಹಾಕಿದ್ದೇವಾ ಎಂದು ಪ್ರಶ್ನಿಸಿದರು. ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಂಡಿದೆ. ಜೈಲಿಗೆ ಹಾಕುವ ಕೆಲಸ ಮುಂದುವರಿದಿದೆ ಎಂದು ಟೀಕಿಸಿದರು. ಇದೇರೀತಿ ಮುಂದುವರಿದರೆ ನಿಮ್ಮ ಜೈಲುಗಳಲ್ಲಿ ಸ್ಥಳ ಸಾಕಾಗದು ಎಂದು ನುಡಿದರು. ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದೆ. ಕರೆಂಟ್ ಕೊಡುತ್ತಿಲ್ಲ. ಕಲ್ಲಿದ್ದಲಿಗೆ ದುಡ್ಡಿಲ್ಲ. ಉಷ್ಣ ವಿದ್ಯುತ್ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗುತ್ತಿದೆ. ಝೀರೊ ಬಿಲ್ ಅಲ್ಲ; ಝೀರೋ ಕರೆಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ವೇಳೆಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಮಾಜಿ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು
23 Comments
Great goods from you, man. I’ve understand your stuff previous to and you’re just extremely wonderful. I actually like what you have acquired here, really like what you’re saying and the way in which you say it. You make it entertaining and you still take care of to keep it sensible. I can not wait to read far more from you. This is really a great site. Try to Visit My Web Site :KEPALASLOT
where to get generic clomid price can you get cheap clomid online can i order cheap clomiphene without a prescription can i purchase clomid pills clomiphene medication effects buy clomid no prescription can you get generic clomid for sale
More posts like this would bring about the blogosphere more useful.
The thoroughness in this section is noteworthy.
inderal 10mg ca – order methotrexate 5mg pills buy methotrexate 5mg without prescription
purchase amoxicillin sale – order combivent generic combivent medication
zithromax 250mg sale – buy zithromax 250mg order nebivolol 20mg online
clavulanate price – https://atbioinfo.com/ buy ampicillin cheap
nexium medication – https://anexamate.com/ order nexium generic
order warfarin without prescription – https://coumamide.com/ buy losartan 50mg for sale
mobic 15mg without prescription – mobo sin mobic 7.5mg cheap
buy erectile dysfunction drugs – gnc ed pills buy generic ed pills for sale
cheap amoxil online – combamoxi order amoxil pills
buy diflucan generic – https://gpdifluca.com/# forcan pills
cenforce 100mg generic – buy cenforce 50mg sale cenforce canada
cialis no prescription – https://ciltadgn.com/# best price on generic tadalafil
best price on generic cialis – https://strongtadafl.com/ tadalafil no prescription forum
Thanks on putting this up. It’s well done. https://gnolvade.com/
mail order viagra legitimate – where i can buy viagra in delhi cheap cialis and viagra
This is the compassionate of literature I rightly appreciate. https://ursxdol.com/cenforce-100-200-mg-ed/
More articles like this would remedy the blogosphere richer. gabapentin cost
ai mental health therapy ai mental health therapy .
I’ll certainly return to read more. https://prohnrg.com/product/lisinopril-5-mg/