ಹೈದರಾಬಾದ್ – ಕರ್ನಾಟಕದ ನೆರೆಯ ತೆಲಂಗಾಣ ವಿಧಾನಸಭೆ ಚುನಾವಣೆ (Telangana Elections) ದೇಶದ ಗಮನ ಸೆಳೆದಿದೆ.ಮುಂಬರುವ ಲೋಕಸಭಾ ಚುನಾವಣೆಯ ರಿಹರ್ಸಲ್ ಮಾದರಿಯ ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ,ಕಾಂಗ್ರೆಸ್ ನೇತೃತ್ವದ ಇಂಡಿಯಾ ಮತ್ತು ಬಿಆರ್ ಎಸ್ ನೇತೃತ್ವದ ತೃತೀಯ ರಂಗದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವ ಎನಿಸಿದೆ.
ರಾಜ್ಯದ ಒಟ್ಟು119 ಸ್ಥಾನಗಳ ತ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು,
ಅಬ್ಬರದ ಪ್ರಚಾರ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಮತಯಾಚನೆಯ ನಡುವೆಯೇ ಮೂರೂ ಪಕ್ಷದ ನಾಯಕರು ಆರೋಪ, ಪ್ರತ್ಯಾರೋಪಗಳು, ವಾಕ್ಸಮರ ತಾರಕಕ್ಕೇರಿದೆ.
ಕಳೆದ 10 ವರ್ಷಗಳ ಅವಧಿಯಲ್ಲಿ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕೆ.ಸಿ.ಆರ್ .ತನ್ನ ಪ್ರಜೆಗಳಿಗಾಗಿ ಏನೂ ಮಾಡಿಲ್ಲ. ಬದಲಿಗೆ ತನ್ನ ಪುತ್ರ ಕೆಟಿ ರಾಮರಾವ್ ಅವರಿಗಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದನೆ ಮಾಡಲು ಸಹಾಯ ಮಾಡಿದ್ದಾರೆ ಎಂಬ ಆರೋಪವೂ ಸೇರಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಆರೋಪ- ಪ್ರತ್ಯಾರೋಪ ಕೇಳಿ ಬರುತ್ತಿರುವುದು ಚುನಾವಣಾ ಅಖಾಡಕ್ಕೆ ರಂಗು ಬರುವಂತೆ ಮಾಡಿದೆ.
ಮೇಲ್ನೋಟಕ್ಕೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದೆ ಎಂಬಂತೆ ಕಾಣುತ್ತಿದೆ. ಆದರೆ,ಬಿಜೆಪಿಗೆ ತೆಲಂಗಾಣದಲ್ಲಿ ಹೇಳಿಕೊಳ್ಳುವಂತಹ ಬೆಂಬಲ ಸಿಗುತ್ತಿಲ್ಲ. ಆದರೂ ಧೃತಿಗೆಡದೆ ತನ್ನ ಪ್ರಯತ್ನವನ್ನು ಮುಂದುವರಿಸಿದ್ದು ಸದ್ದಿಲ್ಲದೆ ಮತದಾರರ ಮನವೊಲಿಸುವ ಕಸರತ್ತನ್ನು ಮುಂದುವರಿಸಿದೆ.
ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ.
ಅಧಿಕಾರ ಚುಕ್ಕಾಣಿ ಹಿಡಿಯಬಹುದು ಎಂಬ ಭಾರಿ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಭರ್ಜರಿ ಪ್ರಚಾರದ ಮೂಲಕ ಆಡಳಿತ ರೂಡ ಬಿಎಸ್ ಆರ್ ಗೆ ಸೆಡ್ಡು ಹೊಡೆದಿದೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಖಾನ್, ಬೋಸರಾಜು ಮೊದಲಾದ ಕರ್ನಾಟಕದ ನಾಯಕರು ಇಲ್ಲಿ ತಮ್ಮ ಪ್ರಭಾವ ಹೊಂದಿದ್ದು,ಅವರೆಲ್ಲರೂ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಬೆವರು ಹರಿಸುತ್ತಿದ್ದಾರೆ.
ಕ್ಷೇತ್ರದ ಬಹುತೇಕ ಕಡೆ ಕಾಣುತ್ತಿರುವ ಆಡಳಿತ ವಿರೋಧಿ ಅಲೆ,ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ತೆಲುಗುದೇಶಂ ನಡೆ ಮತ್ತು ವೈ.ಎಸ್.ಆರ್.ನ ಶರ್ಮಿಳಾ ಬೆಂಬಲ ಕಾಂಗ್ರೆಸ್ ಅನ್ನು ಗೆಲುವಿನ ಸನಿಹ ಕೊಂಡೊಯ್ಯಬಹುದು ಎನ್ನಲಾಗುತ್ತಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ಉಂಟಾದ ಗೊಂದಲ, ನಾಯಕರ ನಡುವಿನ ಜಟಾಪಟಿ,ನಾಯಕತ್ವದ ಕೊರತೆ ಜನರಲ್ಲಿ ವಿಶ್ವಾಸ ಮೂಡಿಸಿಲ್ಲ ಎಂಬ ಅಂಶದೊಂದಿಗೆ ಸ್ಥಿರ ಸರ್ಕಾರ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನ ಆಡಳಿತ ಬಿಎಸ್ ಆರ್ ಗೆ ಅನುಕೂಲ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.
ಆದರೆ ಒಟ್ಟಾರೆ ಚಿತ್ರಣ ಅವಲೋಕಿಸಿದಾಗ ಕಾಂಗ್ರೆಸ್ ಎಲ್ಲರಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆ ಇದೆ.ಅದರಲ್ಲೂ ಹೈದರಾಬಾದ್ ಪ್ರದೇಶದ ಮತದಾರರು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಭವಿಷ್ಯವನ್ನು ನಿರ್ಧಿಸುತ್ತಾರೆ. ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಾರೋ ಅವರು ವಿಧಾನಸಭೆಯಲ್ಲಿ ಆಡಳಿತ ನಡೆಸುತ್ತಾರೆ.ಹೀಗಾಗಿ ಈ ಪ್ರದೇಶದ ಮೇಲೆ ಎರಡೂ ಪಕ್ಷಗಳ ನಾಯಕರು ಕಣ್ಣಿಟ್ಟಿದ್ದಾರೆ.ಕೆಲವು ಖಾಸಗಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ 55 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದ್ದು ಬಿಆರ್ ಎಸ್ 51ರಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಇದಕ್ಕೆ ಉತ್ತರ ಸಿಗಬೇಕಾದರೆ ಡಿಸೆಂಬರ್ 3ರಂದು ನಡೆಯಲಿರು ಮತ ಎಣಿಕೆಯವರೆಗೆ ಕಾಯಬೇಕು.


5 Comments
betmgmontario betmgmpa betmgm РћРљ
Dive into the thrilling world of online gambling with 1ace and enjoy an unforgettable gaming experience!
One notable aspect of 1ace is its versatility.
pas88
Discover the excitement of online gaming with alpha66 live, your ultimate destination for thrilling slots and live action.
Such adaptability contributes to its increasing global popularity.
Experience thrilling wins every day at 777bet, your ultimate destination for online betting excitement.
A major attraction of 777bet is the extensive selection of sports betting markets.
—
The site employs advanced encryption technology to safeguard personal and financial information.