ಬೆಂಗಳೂರು: ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಯತ್ನಿಸುತ್ತಿರುವ ರಾಜ್ಯ ಕಾಂಗ್ರೆಸ್ ಇದಕ್ಕಾಗಿ ಸಾಕಷ್ಟು ಮಾಸ್ಟರ್ ಪ್ಲಾನ್ಗಳನ್ನು ಮಾಡುತ್ತಿದೆ. ದೇವನಹಳ್ಳಿಯಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರದಲ್ಲಿ ಡಿ.ಕೆ ಶಿವಕುಮಾರ್ ಪಕ್ಷಕ್ಕಾಗಿ ತಾವು ಯಾವುದೇ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ ಎನ್ನಲಾಗಿದೆ.
ಚಿಂತನಾ ಶಿಬಿರ ಮುಕ್ತಾಯಗೊಳ್ಳುತ್ತಿದ್ದಂತೆಯೇ ಸಿದ್ದರಾಮಯ್ಯ ಜೊತೆ ರಹಸ್ಯ ಮಾತುಕತೆ ನಡೆಸಿದ ಡಿಕೆಶಿ ನಮ್ಮ ನಮ್ಮಲ್ಲೇ ಸಿಎಂ ಸ್ಥಾನಕ್ಕಾಗಿ ಜಟಾಪಟಿ ಬೇಡ. ನಾವು ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದರೆಡೆಗೆ ಮಾತ್ರ ಗಮನಹರಿಸೋಣ. ಆಮೇಲೇ ಬೇಕಿದ್ದರೆ ನೀವೆ ಸಿಎಂ ಆಗಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಒಂದು ಒಪ್ಪಂದದ ಪ್ರಕಾರ, ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 2.5 ವರ್ಷ ಸಿದ್ದರಾಮಯ್ಯ ಹಾಗೂ 2.5 ವರ್ಷ ಡಿಕೆ ಶಿವಕುಮಾರ್ ರಾಜ್ಯದ ಸಿಎಂ ಆಗುವ ಸಾಧ್ಯತೆಯಿದೆ.
2023ರಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಭಾರೀ ಪ್ಲ್ಯಾನ್: ಮಹಾತ್ಯಾಗಕ್ಕೆ ಡಿಕೆಶಿ ಸಿದ್ಧ?
Previous Articleಪ್ರತಿ ಮಸೀದಿಯಲ್ಲಿ ನಾವು ಶಿವಲಿಂಗವನ್ನು ಯಾಕೆ ಹುಡುಕಬೇಕು?
Next Article Drug ಫೆಡ್ಲರ್ Arrest