ಬೆಂಗಳೂರು, ಆ.20- ಸರ್ಕಾರದ ವಿವಿಧ ಕಾಮಗಾರಿಗಳ ಟೆಂಡರ್ ಪಡೆದು ಕೆಲಸ ಪೂರ್ಣಗೊಳಿಸಿರುವ ಗುತ್ತಿಗೆದಾರರು ಇದೀಗ ತಮ್ಮ ಬಾಕಿ ಬಿಲ್ ಪಾವತಿಸಲು ಸರ್ಕಾರಕ್ಕೆ ಆಗಸ್ಟ್ 31ರ ಗಡುವು ನೀಡಿದ್ದಾರೆ. ಅಷ್ಟರೊಳಗೆ ಬಿಲ್ ಬಾಕಿ ಪಾವತಿಯಾಗದೆ ಹೋದರೆ ಕೆಲಸ ನಿಲ್ಲಿಸಿ ಹೋರಾಟಕ್ಕೆ ಧುಮುಕುವುದಾಗಿ ಗುತ್ತಿಗೆದಾರರ ಸಂಘದ ಮುಖಂಡ ಕೆಂಪಣ್ಣ ಎಚ್ಚರಿಸಿದ್ದಾರೆ.
ಜಲ ಸಂಪನ್ಮೂಲ,ಬೆಂಗಳೂರು ನಗರಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ- ಪಂಚಾಯತ್ ರಾಜ್, ಇಂಧನ, ಮೂಲ ಸೌಲಭ್ಯ ಸೇರಿದಂತೆ 7 ಕ್ಕೂ ಹೆಚ್ಚು ಇಲಾಖೆಗಳಿಂದ ಸುಮಾರು 25 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬಾಕಿ ಪಾವತಿಯಾಗಬೇಕಿದೆ ಎಂದು ಹೇಳಲಾಗಿದೆ.
ಈ ಬಾಕಿ ಬಿಡುಗಡೆ ಮಾಡುವ ದೃಷ್ಟಿಯಿಂದ ಸರ್ಕಾರದ ಜೊತೆ ಚರ್ಚೆ ನಡೆಸಿದ ಗುತ್ತಿಗೆದಾರರಿಗೆ ಸರ್ಕಾರದಲ್ಲಿ ಪಂಚಖಾತ್ರಿ ಯೋಜನೆಗಳಿಗೆ ಹಣ ಖರ್ಚಾಗಿದೆ. ಹೀಗಾಗಿ ಬಾಕಿ ಬಿಲ್‍ಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಹಣ ಇಲ್ಲ. ಸ್ವಲ್ಪ ದಿನ ಸಹನೆಯಿಂದಿರುವಂತೆ ಹೇಳಿದೆ ಇದು ಗುತ್ತಿಗೆದಾರರನ್ನು ಕೆರಳುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಗಸ್ಟ್ 31ರ ಗಡುವು ನೀಡಿರುವ ಗುತ್ತಿಗೆದಾರರು ಗುತ್ತಿಗೆ ವಿಭಾಗದಲ್ಲಿ ತೊಡಗಿಸಿಕೊಂಡಿರುವ 61 ಸಂಘಟನೆಗಳ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಮುಂದಾಗಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ಗುತ್ತಿಗೆದಾರರ ಸಂಘದ ಕೆಂಪಣ್ಣ, ಮೂರು ವರ್ಷದಿಂದ ಬಿಲ್ ಬಾಕಿ ಉಳಿದಿದೆ. ಈ ತಿಂಗಳ 30 ರವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಆ ವೇಳೆಗೆ ಸರಿಯಾದ ಸ್ಪಂದನೆ ಬರದೇ ಇದ್ದರೆ ಗುತ್ತಿಗೆದಾರರ ಸಂಘದ ಪದಾಕಾರಿಗಳ ಸಭೆ ಕರೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
ಪ್ರಸ್ತುತ ಜೀವನ ವೆಚ್ಛ ದುಬಾರಿಯಾಗಿದೆ. ಗುತ್ತಿಗೆದಾರರು ಸಾಲದ ಸುಳಿಗೆ ಸಿಲುಕಿದ್ದಾರೆ. ಬಾಕಿ ಬಿಡುಗಡೆ ಮಾಡದೇ ಇದ್ದರೆ, ಕೆಲಸಗಳನ್ನು ಸ್ಥಗಿತಗೊಳಿಸದೇ ನಮಗೆ ಬೇರೆ ದಾರಿ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


8 Comments
betmgm Ohio https://betmgm-play.com/ betmgm com casino
Embrace waves of promotional tides and rewards. In crown coins login, wave after wave of offers await. Ride the wave to riches!
Nothing beats the thrill of Sweet Bonanza — tumbling wins and bomb multipliers galore! Trigger sweet bonanza paytable the bonus round and multiply your fortune. Play today!
Charge into the heart of the prairie with epic spins and roaring wins! wonder 4 buffalo delivers stampeding free games, wild multipliers, and life-changing jackpots that keep you coming back. Play now and let the herd lead you to riches!
Discover Chumba Casino: America’s favorite macumba with real prize redemptions. Grab your welcome bonus of free Sweeps Coins and spin the best slots online. Play today, win tomorrow!
The casino that sponsored the biggest Twitch stars. Now it’s your turn to win big. Fast. Fair. Crypto-native. stake bonus buy slots .
Your winning run starts at DraftKings casino app Casino. New offer: $5 play unlocks 500 spins + up to $1K first-day lossback. Slots, roulette, blackjack—go!
Generika od spolehlivych vyrobcu – kvalita zarucena, cena skvela!
https://opravdovalekarna.cz