ಬೆಂಗಳೂರು,ಡಿ.23:
ಮಹಾನಗರ ಬೆಂಗಳೂರಿನ ಬಸವನಗುಡಿ ಠಾಣೆ ಪೊಲೀಸರು ಐನಾತಿ ಕಳ್ಳಿಯೊಬ್ಬಳನ್ನು ಬಂಧಿಸಿದ್ದಾರೆ
ಈಕೆ ಅಂತಿಂಥ ಕಳ್ಳಿ ಅಲ್ಲ. ವಾರಪೂರ್ತಿ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡುತ್ತಿದ್ದ ಪ್ರೊಫೆಸರ್ ಈಕೆ. ಆದರೆ ವಾರಾಂತ್ಯದಲ್ಲಿ ಮಾತ್ರ ಈಕೆ ಕಳ್ಳಿ.
ಬೆಂಗಳೂರು ನಗರದ ಕಲ್ಯಾಣ ಮಂಟಪಗಳಲ್ಲಿ ಇತ್ತೀಚೆಗೆ ಚಿನ್ನಾಭರಣಗಳ ಕಳ್ಳತನ ಪ್ರಕರಣ ಹೆಚ್ಚಾಗಿತ್ತು ಈ ಬಗ್ಗೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು ಅದರಂತೆ ಬಸವನಗುಡಿಯ ದ್ವಾರಕಾನಾಥ ಕಲ್ಯಾಣ ಮಂಟಪದಲ್ಲಿ ಕಳೆದ ನವೆಂಬರ್ 25 ರಂದು ಕಳ್ಳತನ ಒಂದು ನಡೆದಿತ್ತು ಈ ಬಗ್ಗೆ ದಾಖಲಾದ ದೂರನ್ನು ಸ್ವೀಕರಿಸಿ ತನಿಖೆ ನಡೆಸಿದ ಪೊಲೀಸರು ಕಲ್ಯಾಣ ಮಂಟಪದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಈ ಕಳ್ಳಿ ಪತ್ತೆಯಾಗಿದ್ದಾಳೆ.
ಈಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪೊಲೀಸರೇ ವಿಷಯ ಕೇಳಿ ಅಚ್ಚರಿಗೊಳಗಾಗಿದ್ದಾರೆ. ಈಕೆಯ ಹೆಸರು ರೇವತಿ, ಶಿವಮೊಗ್ಗ ಮೂಲದವರು ಈಕೆ ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದಾರೆ.
ವಾರಪೂರ್ತಿ ಕನ್ನಡ ಪ್ರೊಫೆಸರ್ ಆಗಿ ಕಾಲೇಜಿನಲ್ಲಿ ಪಾಠ ಮಾಡುವ ಈಕೆ ವಾರಾಂತ್ಯದ ಭಾನುವಾರದಂದು ರೇಷ್ಮೆ ಸೀರೆ ಧರಿಸಿ ಕಲ್ಯಾಣ ಮಂಟಪಗಳಿಗೆ ಹೋಗುತ್ತಿದ್ದರು ಅಲ್ಲಿ ವಧು ಅಥವಾ ವರನ ಕಡೆಯ ಸಂಬಂಧಿಕರು ಎಂಬಂತೆ ವರ್ತಿಸುತ್ತಿದ್ದ ಈಕೆ ಕಲ್ಯಾಣ ಮಂಟಪದಲ್ಲಿ ಊಟ ಮಾಡಿ ವಧು ಅಥವಾ ವರನ ಇಲ್ಲವೇ ಅವರ ಸಂಬಂಧಿಕರ ಚಿನ್ನಾಭರಣಗಳನ್ನು ಕ್ಷಣ ಮಾತ್ರದಲ್ಲಿ ಎಗರಿಸಿ ಪರಾರಿ ಯಾಗುತ್ತಿದ್ದರು.
ತುಂಬಾ ನಾಜೂಕಾಗಿ ಡ್ರಸ್ ಮಾಡಿಕೊಂಡು ವಿದ್ಯಾವಂತಳಾಗಿರುವ ಈಕೆ ಕಲ್ಯಾಣ ಮಂಟಪಗಳಲ್ಲಿ ಅತ್ಯಂತ ವಿನಯದಿಂದ ನಡೆದುಕೊಳ್ಳುತ್ತಿದ್ದರು ಈಕೆಯ ನಡವಳಿಕೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ ಹೀಗಾಗಿ ಈಕೆ ವಾರಾಂತ್ಯಗಳಲ್ಲಿ ವೃತ್ತಿಪರ ಕಳ್ಳಿಯಾಗಿ ಪರಿವರ್ತನೆಯಾಗಿದ್ದಳು.
ಬಸವನಗುಡಿಯ ದ್ವಾರಕನಾಥ್ ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದಿರುವ ಈಕೆ ಪೊಲೀಸ್ ವಿಚಾರಣೆ ವೇಳೆ ತನ್ನ ಕಳ್ಳತನದ ಕುರಿತಂತೆ ಮಾಹಿತಿ ನೀಡಿದ್ದಾಳೆ ಈಕೆಯಿಂದ ಸುಮಾರು 32 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Previous Articleಬ್ರೆಡ್ ನಲ್ಲಿ ಕೊಕೇನ್ ಸಾಗಾಟ
Next Article ಜ.29ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ


8 Comments
AccessBridge: pharmacy delivery – AccessBridge
SteadyMeds pharmacy: SteadyMeds – drugs from canada
SteadyMeds: SteadyMeds – SteadyMeds pharmacy
safe online pharmacies: Online medicine order – trustworthy online pharmacy
safe online pharmacies: FormuLine Pharmacy – legit online pharmacy
pharmacy online: buy medicines online in india – us pharmacy no prescription
buy online medicine: FormuLine Pharmacy – online pharmacies
SteadyMeds: SteadyMeds – maple leaf pharmacy in canada