ಬೆಂಗಳೂರು – ಸಿನಿಮಾ ರಂಗಕ್ಕೂ, ರಾಜಕಾರಣಕ್ಕೂ ಅವಿನಾಭಾವ ಸಂಬಂಧ ಸಂಬಂಧ. ಸಿನಿಮಾ ರಂಗದಲ್ಲಿ ಮಿಂಚಿದವರು ರಾಜಕಾರಣದಲ್ಲೂ ಒಂದು ಕೈ ನೋಡುವುದು ಇತ್ತೀಚೆಗೆ ಸಂಪ್ರದಾಯವಾಗಿದೆ.
ಸಿನಿಮಾ ರಂಗದಲ್ಲಿನ ಜನಪ್ರಿಯತೆಯನ್ನು ರಾಜಕಾರಣದಲ್ಲಿ ಓರೆಗೆ ಹಚ್ಚುವ ಪ್ರಯತ್ನಗಳು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿದೆ.
ಕೆಲವು ರಾಜಕಾರಣಿಗಳಂತು ಸೂಪರ್ ಸ್ಟಾರ್ ಗಳನ್ನು ,ಜನಪ್ರಿಯ ತಾರೆಯರನ್ನು ತಮ್ಮ ಪರವಾಗಿ ಪ್ರಚಾರಕ್ಕೆ ಕರೆತರುವ ಮೂಲಕ,ಜನರನ್ನು ಆಕರ್ಷಿಸುವುದು ಇತ್ತೀಚೆಗೆ ಒಂದು ಫ್ಯಾಶನ್ ರೀತಿಯಲ್ಲಿ ಆಗಿಬಿಟ್ಟಿದೆ.
ಸಿನಿ ತಾರೆಯರಂತೂ ಈ ಕೆಲಸಕ್ಕೆ ಯಾವುದೇ ಪಕ್ಷಭೇದವಿಲ್ಲದೆ ತೊಡಗಿಕೊಳ್ಳುತ್ತಿದ್ದಾರೆ. ಇಲ್ಲಿ ಸಿನಿಮಾ ತಾರೆಯರಿಗೆ ಪ್ರಮುಖವಾಗುವುದು ಆ ಅಭ್ಯರ್ಥಿಯೊಂದಿಗೆ ತಮ್ಮ ಸ್ನೇಹ, ವಿಶ್ವಾಸ ಮತ್ತು ಹಣ. ಇದರ ಮೂಲಕ ತಾವು ಯಾರ ಪರ, ಎಲ್ಲಿ, ಎಷ್ಟು ಗಂಟೆ ಪ್ರಚಾರ ಮಾಡಬೇಕು ಎಂಬುದನ್ನು ನಿರ್ಧರಿಸಿಕೊಳ್ಳುತ್ತಾರೆ.

ಕೆಲವು ಕಡೆಗಳಲ್ಲಂತೂ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರುವ ಸಿನಿಮಾ ತಾರೆಯರನ್ನು ನೋಡಲು ಅವರ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಸೇರುತ್ತಾರೆ ಇದರಿಂದ ಕೆಲ ಪ್ರಮಾಣದ ಮತ ತಮಗೆ ಸಿಗಬಹುದು ಎನ್ನುವುದು ಅಭ್ಯರ್ಥಿಗಳ ಲೆಕ್ಕಾಚಾರ.
ಇದೇ ಲೆಕ್ಕಾಚಾರದಲ್ಲಿ ಶಕ್ತಿ ಪ್ರದರ್ಶನ ನಡೆಸಲು ಹೋದ ಕಾಂಗ್ರೆಸ್ಸಿನ ಅಭ್ಯರ್ಥಿಯೊಬ್ಬರ ಪರಿಸ್ಥಿತಿ ಯಾರಿಗೂ ಹೇಳಿಕೊಳ್ಳಲಾಗದಂತಾಗಿದೆ.
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೇಶವ ರಾಜಣ್ಣ ನಾಮಪತ್ರ ಸಲ್ಲಿಸುವ ವೇಳೆ ಕನ್ನಡದ ಸೂಪರ್ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆ ತಂದಿದ್ದರು.
ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದರ್ಶನ್ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಹಾಗೆ ಅವರ ಸಮುದಾಯಕ್ಕೆ ಸೇರಿದವರ ಮತಗಳ ಪ್ರಮಾಣವೂ ಹೆಚ್ಚಿನ ಪ್ರಮಾಣದಲ್ಲಿದೆ. ಇದೆಲ್ಲವನ್ನು ಲೆಕ್ಕದಲ್ಲಿಟ್ಟು ಕೇಶವರಾಜಣ್ಣ ಅಬ್ಬರದ ಪ್ರಚಾರ ಮಾಡಿ ಭಾರಿ ವೆಚ್ಚದೊಂದಿಗೆ ನಟ ದರ್ಶನ್ ಅವರನ್ನು ಕರೆ ತಂದಿದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಯಲಹಂಕದ ಪ್ರಮುಖ ಬೀದಿಗಳಲ್ಲಿ ದರ್ಶನ್ ಅವರೊಂದಿಗೆ ರೋಡ್ ಶೋ ನಡೆಸಿದರು. ಆದರೆ, ಈ ರೋಡ್ ಶೋನಲ್ಲಿ ಕೆಲವೇ 100 ರಷ್ಟು ಮಂದಿ ಮಾತ್ರ ಪಾಲ್ಗೊಂಡರೆ, ರಸ್ತೆಯ ಇಕ್ಕೆಲಗಳಲ್ಲಿ ಬೆರಣಿಕೆಯಷ್ಟು ಮಾತ್ರ ಜನ ಸೇರಿದ್ದರು. ಇದಕ್ಕೆ ನಿಜವಾದ ಕಾರಣ ಏನು ಎಂದು ಗೊತ್ತಾಗಿಲ್ಲ. ಆದರೆ, ಜನಸಾಮಾನ್ಯರ ವಲಯದಲ್ಲಿ ಇದು ಅಭ್ಯರ್ಥಿಯ ಜನಪ್ರಿಯತೆ, ದರ್ಶನ್ ಅವರ ಬಗೆಗಿನ ಅಭಿಮಾನ, ಇಲ್ಲವೇ ನಿಗಿನಿಗೆ ಕೆಂಡದಂತೆ ಸುಡುತ್ತಿರುವ ಬಿಸಿಲಿನ ಕಾರಣಕ್ಕೂ ಇರಬಹುದು ಎನ್ನುತ್ತಾರೆ. ಆದರೆ, ಒಂದೊಂದು ಸತ್ಯ. ಜನಪ್ರಿಯ ತಾರೆಯೊಬ್ಬರ ಪಾಲ್ಗೊಳ್ಳುವಿಕೆಯ ಮೂಲಕ ಮೆಗಾ ಶೋ ಆಗಬೇಕಾಗಿದ್ದ ಕಾರ್ಯಕ್ರಮವೊಂದು ಪ್ಲಾಪ್ ಶೋ ಆಯಿತು..


4 Comments
Explore endless avenues of entertainment and earnings. crowncoins casino guarantees audited games for true fairness. Enter, entertain, and exit richer!
Indulge in the sweetest slot ever: Sweet Bonanza! Cascading sweet bonanza sugar rush symbols and multiplier bombs create epic win chains. Start your candy-filled journey today!
Experience DraftKings casino promotions Casino magic now. New players get 500 spins for $5 + up to $1K credits on first-day net losses. Spin, win, repeat!
Leky za ferovou cenu – zadne skryte poplatky, zadne triky
vardenafil online