ಬೆಂಗಳೂರು,ಜೂ.20-ಹಲಸೂರಿನ ಐಷಾರಾಮಿ ಪಾರ್ಕ್ ಹೋಟೆಲ್‍ನಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಭಾಗಿಯಾಗಿದ್ದ ಮೋಜು ಮಸ್ತಿ ಪಾರ್ಟಿಯಲ್ಲಿದ್ದ ವಿದೇಶಿ ಮಾಡೆಲ್‍ಗಳಿಗೆ ಪೂರ್ವ ವಿಭಾಗದ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
ಪಾರ್ಟಿಯಲ್ಲಿ ಪಾಲ್ಗೊಂಡ ಕೆಲ ವಿದೇಶಿಗರ ವೀಸಾ ಅವಧಿ ಮುಗಿದಿದ್ದರೆ, ಮತ್ತೆ ಕೆಲ ಮಾಡೆಲ್‍ಗಳ ವ್ಯವಹಾರದ ಮೇಲೆ ಅನುಮಾನ ಮೂಡಿದ್ದರಿಂದ ಪೊಲೀಸರು ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಮುಂದಾಗಿದ್ದಾರೆ.
ಪಾರ್ಕ್ ಹೊಟೇಲ್‍ನ ಮೋಜು ಮಸ್ತಿ ಪಾರ್ಟಿಯಲ್ಲಿ ಡ್ರಗ್ಸ್ ಬಂದಿದ್ದಾದರೂ ಹೇಗೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದು ಕೂಡ ಪೊಲೀಸರಿಗೆ ತಲೆನೋವು ತಂದಿದೆ.
ಸುಮಾರು 150 ಮಂದಿಯಿದ್ದ ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಅತಿಥಿಗಳ ಪಟ್ಟಿ
(ಗೆಸ್ಟ್ ಲಿಸ್ಟ್)ಯನ್ನು ಪಡೆದಿದ್ದಾರೆ.
ಗೆಸ್ಟ್ ಲಿಸ್ಟ್‌ನಲ್ಲಿರುವ ವಿದೇಶಿ ಮಾಡೆಲ್ಸ್ ಹಾಗು ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸುಮಾರು 40 ಮಂದಿ ಮಾಡೆಲ್ಸ್‌ಗಳಿಗೆ ನೋಟಿಸ್ ನೀಡಿರುವ ಹಲಸೂರು ಪೊಲೀಸರು, ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಪೊಲೀಸರ ನೋಟಿಸ್ ಬೆನ್ನಲ್ಲೇ ಐವರು ವಿಚಾರಣೆಗೆ ಹಾಜರಾಗಿದ್ದು, ಸುಮಾರು 20 ಸಿಸಿಟಿವಿ ಫೋಟೇಜ್ ಪರಿಶೀಲನೆ ನಡೆಸಿ, ಡ್ರಗ್ಸ್ ತಂದ ವ್ಯಕ್ತಿ, ಅದನ್ನು ಕಸದ ತೊಟ್ಟಿ ಬಳಿ ಎಸೆದವರು ಯಾರು ಎಂದು ಪರಿಶೀಲನೆ ನಡೆಸಿದರು ಕೂಡ ಸ್ಪಷ್ಟತೆ ಸಿಕ್ಕಿಲ್ಲ.
ಡ್ರಗ್ಸ್ ರೇವ್ ಪಾರ್ಟಿಯಲ್ಲಿ ಖ್ಯಾತನಾಮ ಮಾಡೆಲ್‍ಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದು, ಎಲ್ಲಾ ಆಯಾಮಗಳಲ್ಲೂ ಸಹ ತನಿಖೆ ಮುಂದುವರೆಸಿದ್ದಾರೆ.
Previous Articleಹಿಜಾಬ್ ಬೇಡ ಅಂದ್ರೆ ಟೀಸಿ ಕೊಡಿ..!
Next Article ಪ್ರಧಾನಿ ಮೋದಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಸೈ ಸಾವು