ಮಂಡ್ಯ,ಜೂ.27- ನಾಗಮಂಗಲ ತಾಲೂಕಿನ ತೊಳಲಿ ಬಳಿ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ರೈತರೊಬ್ಬರ ಕಾಲು ಮುರಿದಿದೆ.
ತೊಳಲಿ ಗ್ರಾಮದ ರೈತ ಸುರೇಶ್ ಕಾಲು ಮೂಳೆ ಮುರಿದು ಗಾಯಗೊಂಡಿದ್ದು ಅವರನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಮೀನಿನಿಂದ ಜಾನುವಾರುಗಳಿಗೆ ಮೇವು ಸಾಗಿಸುತ್ತಿದ್ದ ರೈತ ಸುರೇಶ್ ಅವರ ಟಿವಿಎಸ್ ಎಕ್ಸೆಲ್ ಸೂಪರ್ ಸ್ಕೂಟರ್ ಗೆ ಮೈಸೂರಿನಿಂದ ತುಮಕೂರು ಕಡೆಗೆ ಸಾಗುತ್ತಿದ್ದ ತುಮಕೂರು ಗ್ರಾಮಾಂತರ ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡರ ಫಾರ್ಚೂನರ್ ಕಾರು ಡಿಕ್ಕಿಯಾಗಿದೆ.
ಮಾಜಿ ಶಾಸಕ ಅಪಘಾತ ಮಾಡಿ, ಗಾಯಾಳು ರೈತನ ಮೇಲೆ ರೆಗಾಡಿದ್ದಾರೆ. ಬಳಿ ಜನರು ಜಮಾಯಿಸುತ್ತಿದ್ದಂತೆ ಮೌನಕ್ಕೆ ಶರಣಾಗಿ, ತನ್ನ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನಾಗಮಂಗಲ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
Previous Articleಕೊರೋನಾ ಪ್ರಮಾಣ ಏರಿಕೆ: 17,073 ಜನರಿಗೆ ಸೋಂಕು, 21 ಮಂದಿ ಸಾವು
Next Article ಮತ್ತೆ ತೆರೆ ಮೇಲೆ ರಾಜಣ್ಣ! “ಭಾಗ್ಯವಂತರು”ರೀ ರಿಲೀಸ್