ಸೌದಿ ಅರೇಬಿಯಾದಲ್ಲಿ (Saudi Arabia) ಆರಂಭವಾಗುತ್ತಿದೆ ದೇಶದ ಪ್ರಪ್ರಥಮ ಮಧ್ಯದ ಅಂಗಡಿ. ಸೌದಿ ದೇಶವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಆ ಪ್ರಭಾವಿ ನಾಯಕ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರು ಕೈಗೊಳ್ಳುತ್ತಿರುವ ಅನೇಕ ಆಧುನೀಕರಣ ಮತ್ತು ಸಮಾಜ ಪರಿವರ್ತನಾ ಕ್ರಮಗಳ ಭಾಗವಾಗಿ ಇದು ಇನ್ನೊಂದು ಹೊಸ ಆರಂಭವಾಗಿದೆ ಎಂದು ಹೇಳಲಾಗಿದೆ. ಆದರೆ ದೇಶದ ರಾಜಧಾನಿ ರಿಯಾದ್ ನಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಈ ಮದ್ಯದ ಅಂಗಡಿಯಲ್ಲಿ ಬರೀ ಮುಸ್ಲಿಮೇತರ ರಾಜತಾಂತ್ರಿಕ ಅಧಿಕಾರಿಗಳು ಮಾತ್ರ ಮದ್ಯ ಕೊಂಡುಕೊಳ್ಳಬಹುದು ಮತ್ತು ಅದಕ್ಕೂ ಅನೇಕ ಕ್ರಮಗಳು ಮತ್ತು ನಿರ್ಬಂಧಗಳನ್ನು ವಿಧಿಸಲಾಗಿದೆ.
ಅತ್ಯಂತ ಕಟ್ಟುನಿಟ್ಟಾಗಿ ಇಸ್ಲಾಂ ಪಾಲಿಸುತ್ತಿದ್ದ ಸೌದಿ ಅರೇಬಿಯಾ ಹಾಗೆಯೇ ಮದ್ಯ ಸೇವನೆಯನ್ನು ಅತ್ಯಂತ ಕಠೋರವಾಗಿ ಶಿಕ್ಷಿಸುತ್ತಿದ್ದ ಅಲ್ಲಿನ ಸರ್ಕಾರ ಈಗ ಆ ದೇಶದಲ್ಲಿ ಪ್ರಪ್ರಥಮ ಮದ್ಯದ ಅಂಗಡಿ ಆರಂಭಿಸಲು ಹೊರಟಿರುವುದು ಆಶ್ಚರ್ಯಕರವಾಗಿ ಕಂಡುಬಂದಿದೆ. ಆದರೆ ಈ ಮದ್ಯದ ಅಂಗಡಿಯಲ್ಲಿ ಸೌದಿ ಅರೇಬಿಯಾದ ನಾಗರಿಕರು ಮತ್ತು ರಾಜತಾಂತ್ರಿಕ ವರ್ಗಕ್ಕೆ ಸೇರದ ವ್ಯಕ್ತಿಗಳು ಮದ್ಯವನ್ನು ಖರೀದಿಸಲು ಅವಕಾಶವಿರುವುದಿಲ್ಲ.
ಈಗಾಗಲೇ ದೇಶದ ದೇಶವನ್ನು ಅನೇಕ ರೀತಿಯಲ್ಲಿ ಧರ್ಮದ ಕಟ್ಟುಪಾಡುಗಳಿಂದ ಮುಕ್ತಗೊಳಿಸಿ ಬಹಳಷ್ಟು ಬದಲಾವಣೆಗಳನ್ನು ತಂದು ಸೌದಿ ಅರೇಬಿಯಾ ಅಭಿವೃದ್ಧಿ ಹೊಂದಿರವು ಮುಕ್ತ ವ್ಯವಸ್ಥೆ ಇರುವ ಪಾಶ್ಚಾತ್ಯ ರಾಷ್ಟ್ರಗಳ ಹಾಗೆ ಮಾಡಲು ಪ್ರಯತ್ನ ಮಾಡುತ್ತಿರುವ ಮಹಮದ್ ಬಿನ್ ಸಲ್ಮಾನ್ ಅವರ ಅನೇಕ ಪ್ರಯತ್ನಗಳು ಸೌದಿ ಅರೇಬಿಯಾದಲ್ಲಿ ಅನುಷ್ಠಾನಗೊಂಡಿರುವುದು ನಿಜವಾದರೂ ಈ ಮಧ್ಯದ ಅಂಗಡಿಯ ಆರಂಭವನ್ನು ಅಲ್ಲಿನ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.