ಮೈಸೂರು.
ಅರಮನೆ ನಗರಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರ ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನ ಸೆಳೆಯುತ್ತಿದೆ.
ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಒಕ್ಕಲಿಗ ಸಮುದಾಯದವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದೆ. (G T Devegowda)
ಜೆಡಿಎಸ್ ನ ಜಿ.ಟಿ. ದೇವೇಗೌಡ (G T Devegowda), ಕಾಂಗ್ರೆಸ್ಸಿನ ಮಾವಿನಹಳ್ಳಿ ಸಿದ್ದೇಗೌಡ, ಮತ್ತು ಬಿಜೆಪಿಯ ಕವೀಶ್ ಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಕ್ಕಲಿಗರ ಮತಗಳು ಈ ಮೂವರ ನಡುವೆ ವಿಭಜನೆಯಾಗುವುದರಿಂದ ಇತರ ಸಮುದಾಯಗಳ ಮತಗಳು ನಿರ್ಣಾಯಕವಾಗಲಿವೆ
ಮಾಜಿ ಸಚಿವ ಜೆಡಿಎಸ್ ನ ಹಿರಿಯ ನಾಯಕ ಜಿಟಿ ದೇವೇಗೌಡಕಣದಲ್ಲಿರುವ ಎಲ್ಲರಿಗಿಂತಲೂ ಭಾರಿ ಅನುಭವ ಹೊಂದಿರುವವರು. ಅವರು ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಬಯಸಿದ್ದಾರೆ. ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್‌ನ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಬಿಜೆಪಿಯ ಕವೀಶ್ ಗೌಡ ಅವರಿಗೆ ಇದು ಮೊದಲನೇ ಸಾರ್ವತ್ರಿಕ Election. ಇವರಿಗೆ ಕಾರ್ಯಕರ್ತರ ಪಡೆಯೇ ಬೆನ್ನೆಲುಬು. ದೇವೇಗೌಡರಿಗೆ ಜೆಡಿಎಸ್ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದು ದೊಡ್ಡ ಲಾಭವಾಗಲಿದೆ. (G T Devegowda)
ಅನೇಕ ಕಾರಣಗಳಿಂದಾಗಿ ಜಿಟಿ ದೇವೇಗೌಡ (G T Devegowda) ಅವರು ಕೆಲವು ವರ್ಷ ಪಕ್ಷದಲ್ಲಿ ತಟಸ್ಥವಾಗಿದ್ದ ಹಿನ್ನೆಲೆಯಲ್ಲಿ ದೂರ ಸರಿದಿದ್ದವರನ್ನು ಮತ್ತೆ ಸೆಳೆಯಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.
ಕ್ಷೇತ್ರಕ್ಕೆ 143 ಹಳ್ಳಿಗಳು, ನಗರದ ರಾಮಕೃಷ್ಣನಗರ, ದಟ್ಟಗಳ್ಳಿ, ಚಾಮುಂಡಿ ಬೆಟ್ಟ, ಬೋಗಾದಿ ಸೇರುತ್ತವೆ. ಇಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮತದಾರರು ಹೆಚ್ಚಿದ್ದಾರೆ. ಕುರುಬ, ನಾಯಕ, ದಲಿತರ, ವೀರಶೈವ ಲಿಂಗಾಯತರು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಎಲ್ಲರ ವಿಶ್ವಾಸದೊಂದಿಗೆ ಜಿ ಟಿ ದೇವೇಗೌಡ ಮುನ್ನಡೆಯುತ್ತಿದ್ದಾರೆ.
ಕಾಂಗ್ರೆಸ್ಸಿನ ಮಾಜಿ ಶಾಸಕ ವಾಸು ಅವರ ಪುತ್ರ ಪಕ್ಷ ತೊರದು ಬಿಜೆಪಿಗೆ ಸೇರ್ಪಡೆಯಾಗಿ ಕಣಕ್ಕಿಳಿದಿದ್ದಾರೆ. ಇವರು ತಮ್ಮ ಸಾಂಪ್ರದಾಯಿಕ ಮತಗಳೊಂದಿಗೆ ಕಾಂಗ್ರೆಸ್ನ ಕೆಲವು ಮತಗಳನ್ನು ಸೆಳೆಯುವುದರಿಂದ ಜಿ.ಟಿ. ದೇವೇಗೌಡರ ಗೆಲುವಿನ ಹಾದಿ ಮತ್ತಷ್ಟು ಸುಗಮವಾಗಿದೆ (G T Devegowda)
Also read.