ಬೆಂಗಳೂರು, ಜೂ.2-ಖಾರದಪುಡಿ ಎರಚಿ ಸರ ಕಸಿಯಲು ಯತ್ನಿಸಿದ್ದ ಯುವತಿ ಹಾಗು ಆಕೆಯ ಪ್ರಿಯಕರನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಂಧಿತ ಯುವತಿಯು ಪ್ರಿಯಕರನ ಜೊತೆ ಬ್ಯಾಂಕ್ ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದಿರುವುದು ಪತ್ತೆಯಾಗಿದೆ.
ಆನ್ಲೈನ್ ಇನ್ಸ್’ಟಾಂಟ್ ಲೋನ್ ಅಪ್ಲಿಕೇಷನ್ ನಲ್ಲಿ 15 ಸಾವಿರ ಸಾಲ ಪಡೆದಿದ್ದ ಬಂಧಿತ ಯುವಕ ಅದನ್ನು ಯುವತಿಗೆ ಖರ್ಚು ಮಾಡಿದ್ದು ಸಾಲ ಕಟ್ಟಲಾಗದೇ ಸರಗಳ್ಳತನಕ್ಕೆ ಸಂಚು ರೂಪಿಸಿದ್ದರು.
ಅದರಂತೆ ನಂದಿನಿ ಲೇಔಟ್ ನ ಪಾರ್ಕ್ ಬಳಿ ಒಂಟಿ ವೃದ್ದೆ ಗಾಯತ್ರಿ ವಾಕಿಂಗ್ ಮಾಡುವಾಗ ಸರ ಕಸಿಯಲು ಕಳೆದ ಮೇ 28 ರ ಬೆಳಗ್ಗೆ ಯತ್ನ ನಡೆಸಿ ಹಿಂಬದಿಯಿಂದ ಬಂದು ಗಾಯತ್ರಿಯವರ ಮುಖಕ್ಕೆ ಖಾರದಪುಡಿ ಎರಚಿದ್ದ ಯುವತಿ ಆದರೆ ಕೆಳಗೆ ಬಿದ್ದು ಚೀರಾಡಿದ್ದ ವೃದ್ದೆ ಗಾಯತ್ರಿ ಸ್ಥಳೀಯರು ಧಾವಿಸುತ್ತಿದ್ದಂತೆ ಬೈಕ್ ಹತ್ತಿ ಗೆಳೆಯನ ಜೊತೆ ಪರಾರಿಯಾಗಿದ್ದಳು.
ಘಟನೆ ನಂತರ ಮಹಿಳೆ ಗಾಯತ್ರಿ ಕುಟುಂಬಸ್ಥರಿಂದ ನಂದಿನಿ ಲೇಔಟ್ ಠಾಣೆಗೆ ದೂರು ನೀಡಲಾಗಿದ್ದು ಅದನ್ನು ಆಧರಿಸಿ ಸರ ಕಸಿಯಲು ಯತ್ನಿಸಿದ್ದ ಯುವಕ ಯುವತಿ ಬಂಧಿಸಲಾಗಿದೆ. ಬ್ಯಾಂಕ್ ಸಾಲ ಕಟ್ಟಲಿಕ್ಕೆ ಹಣವಿಲ್ಲದಿದ್ದರಿಂದ ಕೃತ್ಯ ಎಸಗಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Previous ArticleRSS ಕಂಡ್ರೆ ನನಗೆ ಭಯ!
Next Article ಕಾಂಗ್ರೆಸ್ ನಿಂದ ನವ ಸಂಕಲ್ಪ ಸಮಾವೇಶ ಶಿಬಿರ…