ಬೆಂಗಳೂರು,ಅ.17-ಬೆಳಕಿನ ಹಬ್ಬ ದೀಪಾವಳಿಯ ಸಮಯದಲ್ಲಿ ಪಟಾಕಿ ಸುಡುವುದರಿಂದ ಆಗುವ ಅನಾಹುತಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು ಅವುಗಳ ಪಾಲನೆ ಕಡ್ಡಾಯಗೊಳಿಸಿದೆ
ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮಾಲಿನ್ಯ ಹೆಚ್ಚಾಗದಂತೆ ಗಮನ ಹರಿಸಿರುವ ಮಂಡಳಿ ಈ ಬಾರಿ ಹಸಿರು ಪಟಾಕಿಯನ್ನಷ್ಟೇ ಮಾರಾಟ ಅವಕಾಶ ಕಲ್ಪಿಸಿದೆ. ಒಂದು ವೇಳೆ ಹಸಿರು ಪಟಾಕಿಯನ್ನ ಹೊರೆತು ಪಡಿಸಿ ಬೇರೆ ಪಟಾಕಿ ಮಾರಾಟಕ್ಕಿಟ್ಟಿರುವುದು ಕಂಡುಬಂದಲ್ಲಿ ಮುಲಾಜಿಲ್ಲದೇ ಅವುಗಳನ್ನು ವಶಕ್ಕೆ ಪಡೆದು ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ, ಅಗ್ನಿ ಶಾಮಾಕ ಇಲಾಖೆ,
ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಾಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ.ಇದನ್ನು ಉಲ್ಲಂಘನೆ ಮಾಡುವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ.
ಸ್ಥಳೀಯ ಸಂಸ್ಥೆಗಳು ಪರಿಸರ ಸ್ನೇಹಿ ಪಟಾಕಿಗಳನ್ನ ಹೊಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.
ಮಕ್ಕಳಿಗೆ ಪಟಾಕಿ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಮಾಡಲಾಗುವುದು ಪರಿಸರ ಮಾಲಿನ್ಯ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ದೀಪಾವಳಿ ಹಬ್ಬಕ್ಕೂ ಮುಂಚೆ ಹಾಗೂ ನಂತರ ರಾಜಾಧಾನಿ ಬೆಂಗಳೂರು ಹಾಗೂ ರಾಜ್ಯದ ಇತರ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಎಷ್ಟೇಷ್ಟು ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಆಗಲಿದೆ ಎನ್ನುವುದನ್ನ ಪತ್ತೆ ಮಾಡಲು ಮಾಪನ ಅಳವಡಿಕೆ ಮಾಡಲಾಗಿದೆ.
ಪಟಾಕಿ ಸ್ಟಾಲ್ಗಳ ಮೇಲೆ ಹದ್ದಿನ ಕಣ್ಣಿಡಲು ಪೋಲಿಸ್ ಇಲಾಖೆಯಗೂ ಸೂಚನೆ ನೀಡಲಾಗಿದೆ. ಪಾಟಾಕಿಯಿಂದಾಗುವ ತ್ಯಾಜ್ಯವನ್ನ ಹೊರಹಾಕಲು ಘನತ್ಯಾಜ್ಯ ವಾಹನಗಳ ನೇಮಕಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಪಟಾಕಿಗಳಿಂದಾಗುವ ಹಾನಿಯನ್ನ ತಪ್ಪಿಸಲು ಅಗ್ನಿಶಾಮಕ ಇಲಾಖೆಯೊಂದಿಗೂ ಚರ್ಚೆ ಮಾಡಿದ್ದು, ವಾಯುಮಾಲಿನ್ಯ ಹೆಚ್ಚಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಿವರಿಸಿದೆ.
Previous ArticleSpecial Report : ಎಲ್ಲರಿಗೂ ಪ್ರಿಯ ಈ ಮೀಸಲಾತಿ!
Next Article ದೀಪಾವಳಿಗೆ No Halal