ಬೆಂಗಳೂರು – ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ನಿಗಮ- ಮಂಡಳಿ ನೇಮಕಾತಿ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ.ಪ್ರಮುಖ ನಿಗಮ ಮತ್ತು ಮಂಡಳಿಗಳಿಗೆ 32 ಮಂದಿ ಶಾಸಕರನ್ನು ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಲೋಕಸಭಾ Election ಸನಿಹದಲ್ಲಿರುವ ಸಮಯದಲ್ಲಿ ಈ ನೇಮಕಾತಿ ಮಾಡಲಾಗಿದ್ದು, ಮಂತ್ರಿ ಸೇರಿದಂತೆ ಯಾವುದೇ ಅಧಿಕಾರ ಸಿಗದೆ ಬೇಸರಗೊಂಡಿದ್ದ ಹಿರಿಯ ಶಾಸಕರನ್ನು ನೇಮಕ ಮಾಡುವ ಮೂಲಕ ಅವರ ಅಸಮಾಧಾನ ಶಮನ ಮಾಡುವ ಪ್ರಯತ್ನ ಮಾಡಲಾಗಿದೆ.
ಅತ್ಯಂತ ಹಿರಿಯ ಶಾಸಕರಾದ ಅಪ್ಪಾಜಿ ನಾಡಗೌಡ ಅವರನ್ನು ಕೆಎಸ್ ಅಂಡ್ ಡಿಎಲ್ ಗೆ ,ಮಹಾಂತೇಶ ಕೌಜಲಗಿ ಅವರನ್ನು ಕೆಎಸ್ ಎಫ್ ಸಿ ಹ್ಯಾರೀಸ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇದರ ಜೊತೆಗೆ ಕಾರ್ಯಕರ್ತರನ್ನು ಕೂಡ ಕೆಲವು ನಿಗಮಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಲಾಗುತ್ತದೆ ಎನ್ನಲಾಗಿತ್ತಾದರೂ ಕೆಲವು ಹೆಸರುಗಳ ಕುರಿತು ಗೊಂದಲ ಉಂಟಾಗಿದ್ದು,ಅದು ಬಗೆಹರಿದ ತಕ್ಷಣವೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಹಂಪನಗೌಡ ಬಾದರ್ಲಿ – ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
ಅಪ್ಪಾಜಿ ಸಿಎಸ್ ನಾಡಗೌಡ – ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್
ಭರಮಗೌಡ ಅಲಗೌಡ ಕಾಗೆ – ಹುಬ್ಬಳ್ಳಿ ಸಾರಿಗೆ ನಿಗಮ
ಯಮುನಪ್ಪ ವೈ ಮೇಟಿ – ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
ಎಸ್ ಆರ್ ಶ್ರೀನಿವಾಸ್ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಬಸವರಾಜ್ ನೀಲಪ್ಪ ಶಿವಣ್ಣನವರ್ – ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ
ಬಿಜಿ ಗೋವಿಂದಪ್ಪ – ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಹೆಚ್ ಸಿ ಬಾಲಕೃಷ್ಣ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
ಜಿಎಸ್ ಪಾಟೀಲ್ – ಕರ್ನಾಟಕ ಖನಿಜ ನಿಗಮ ಅಭಿವೃದ್ಧಿ ನಿಯಮಿತ
ಎನ್ ಎ ಹ್ಯಾರೀಸ್ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಕೌಜಲಗಿ ಮಹಾಂತೇಶ್ ಶಿವಾನಂದ – ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
ಪುಟ್ಟರಂಗಶೆಟ್ಟಿ – ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್
ಜೆಟಿ ಪಾಟೀಲ್ – ಹಟ್ಟಿ ಚಿನ್ನದಗಣಿ
ರಾಜಾ ವೆಂಕಟಪ್ಪ ನಾಯಕ್ – ಕರ್ನಾಟಕ ರಾಜ್ಯ ಉಗ್ರಾಹಣ ನಿಗಮ
ಬಿಕೆ ಸಂಗಮೇಶ್ – ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ, ಲ್ಯಾಂಡ್ ಆರ್ಮಿ
ಕೆಎಂ ಶಿವಲಿಂಗೇಗೌಡ – ಕರ್ನಾಟಕ ಗೃಹ ಮಂಡಳಿ
ಅಬ್ಬಯ್ಯ ಪ್ರಸಾದ್ – ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ
ಬಿಕೆ ಗೋಪಾಲಕೃಷ್ಣ ಬೇಳೂರು – ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ
ಎಸ್ ಎನ್ ನಾರಾಯಣಸ್ವಾಮಿ – ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಮಕಾಸು ನಿಗಮ ನಿಯಮಿತ
ಪಿಎಂ ನರೇಂದ್ರಸ್ವಾಮಿ – ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಟಿ ರಘುಮೂರ್ತಿ – ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ
ಎ ಬಿ ರಮೇಶ್ ಬಂಡಿ ಸಿದ್ದೇಗೌಡ – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ
ಬಿ ಶಿವಣ್ಣ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಎಸ್ ಎನ್ ಸುಬ್ಬಾರೆಡ್ಡಿ – ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
ವಿನಯ್ ಕುಲಕರ್ಣಿ- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಅನಿಲ್ ಚಿಕ್ಕಮಾದು – ಜಂಗಲ್ ಲಾಡ್ಜಸ್
ಬಸವನಗೌಡ ದದ್ದಲ್ – ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
ಕನೀಜ್ ಫಾತಿಮಾ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ – ಕರ್ನಾಟಕ ಕ್ರೀಡಾ ಪ್ರಾಧಿಕಾರ
ಶ್ರೀನಿವಾಸ ಮಾನೆ – ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು
ಟಿಡಿ ರಾಜೇಗೌಡ – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ
ರೂಪಕಲಾ ಎಂ – ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ