ಬೆಂಗಳೂರು – ರಾಜ್ಯದ ವಾಣಿಜ್ಯ ಸಂಕಿರಣಗಳು ಅಂಗಡಿ ಮುಂಗಟ್ಟುಗಳು ಮತ್ತು ಕಚೇರಿಗಳ ಮುಂಭಾಗದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಜೈಲು ಪಾಲಾಗಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಎಲ್ಲರಲ್ಲೂ ಆತಂಕ ಸೃಷ್ಟಿಯಾಗಿದೆ
ಕನ್ನಡ ನಾಮಫಲಕ ಅಳವಡಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ವೇಳೆ ಕೆಲವು ಅಂಗಡಿ ಮುಂಗಟ್ಟು ಮತ್ತು ವಾಣಿಜ್ಯ ಸಂಕೀರ್ಣಗಳ ಮೇಲೆ ಹಾಕಿದ್ದ ನಾಮಫಲಕಗಳನ್ನು ಕಿತ್ತು ಹಾಕಲಾಗಿತ್ತು ಇದರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ನಾರಾಯಣ ಗೌಡ (Narayan Gowda) ಮತ್ತು ಅವರ ಆಪ್ತರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಇದನ್ನು ಪರಿಶೀಲಿಸಿದವಕೋರ್ಟ್ ಎಲ್ಲರಿಗೂ ನ್ಯಾಯಾಂಗ ವಶಕ್ಕೆ ನೀಡಿತ್ತು.ಈ ಹಿನ್ನೆಲೆಯಲ್ಲಿ ಅವರನ್ನು ಜೈಲಿಗೆ ವರ್ಗಾಯಿಸಲಾಗಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನಾರಾಯಣ ಗೌಡ (Narayan Gowda) ಅವರು ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಜೈಲಿನಲ್ಲಿನ ಊಟೋಪಚಾರ ಸೇರಿದಂತೆ ಹಲವು ಕಾರಣಗಳಿಗಾಗಿ ಅವರ ಆರೋಗ್ಯದ ಬಗ್ಗೆ ತೀವ್ರ ಚಿಂತೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ನಾರಾಯಣಗೌಡ ಅವರ ಆಪ್ತರು ಹೋರಾಟಗಾರರು ಮತ್ತು ಕುಟುಂಬ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಪ್ರಮುಖರನ್ನು ಭೇಟಿಯಾಗಿ ಜೈಲಿನಲ್ಲಿರುವ ನಾರಾಯಣ ಗೌಡರ ಆರೋಗ್ಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಈ ಕಳವಳಕ್ಕೆ ಸ್ಪಂದಿಸಿರುವ ಸರ್ಕಾರ, ನಾರಾಯಣಗೌಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲು ಸೂಚಿಸಲಾಗಿದೆ ಅಲ್ಲದೆ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಅದಕ್ಕೆ ಹೊಂದುವಂತೆ ಊಟಪಚಾರಗಳನ್ನು ಒದಗಿಸುವಂತೆ ಸೂಚಿಸಿದ್ದು ಕೊಂಚಮಟ್ಟಿಗೆ ಆತಂಕ ನಿವಾರಣೆಯಾಗಿದೆ.


1 Comment
?Celebremos a cada arquitecto de la abundancia !
muestra estas facilidades.
la experiencia es mГЎs fluida y directa.
Opciones ilimitadas en casinos sin licencia en EspaГ±ola – https://caponesaurora.es/#
?Que la fortuna te favorezca con que disfrutes de asombrosos jackpots destacados!