ಇಂದೋರ್(ಮಧ್ಯಪ್ರದೇಶ): ಇಲ್ಲಿನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿದ್ದು, ದಿಂಬಿನೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವಂತೆ ಕಿರಿಯ ವಿದ್ಯಾರ್ಥಿಗೆ ಬಲವಂತ ಮಾಡಿದ ಸಂಗತಿ ಬೆಳಕಿಗೆ ಬಂದಿದೆ.
ಹಿರಿಯ ವೈದ್ಯಕೀಯ ಪದವಿ ಮತ್ತು ಬ್ಯಾಚುಲರ್ ಆಫ್ ಸರ್ಜರಿ ವಿದ್ಯಾರ್ಥಿಗಳು ಕೆಲವು ಕಿರಿಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಹಿರಿಯ ಎಂಬಿಬಿಎಸ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳಿಗೆ ʻದಿಂಬಿನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮತ್ತು ತಮ್ಮ ಮಹಿಳಾ ಬ್ಯಾಚ್ಮೇಟ್ಗಳನ್ನು ನಿಂದಿಸುವಂತೆ ಒತ್ತಾಯಿಸಿದ್ದಾರೆʼ ಎಂದು ಆರೋಪಿಸಲಾಗಿದೆ.
ಈ ಸಂಕಷ್ಟ ಎದುರಿಸಿದ ಕಿರಿಯ ವಿದ್ಯಾರ್ಥಿಯೊಬ್ಬ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಆ್ಯಂಟಿ ರ್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಂಕಷ್ಟ ಹೇಳಿಕೊಂಡಿದ್ದಾನೆ.
ʻಹಿರಿಯ ವಿದ್ಯಾರ್ಥಿಗಳು ದಿಂಬಿನ ಜೊತೆ ಸೆಕ್ಸ್ ಮಾಡುವಂತೆ ಮತ್ತು ಬ್ಯಾಚ್ಮೇಟ್ಗಳ ವಿರುದ್ಧ ನಿಂದನೀಯ ಟೀಕೆ ಮಾಡಿಸಿದ್ದಾರೆ. ಬಲವಂತವಾಗಿ ಪರಸ್ಪರ ಕಪಾಳಮೋಕ್ಷ ಮಾಡಿಸಿದ್ದಾರೆʼ ಎಂದು ಕಿರಿಯ ವಿದ್ಯಾರ್ಥಿಗಳು ಪೊಲೀಸರಿಗೆ ದೂರಿದ್ದಾರೆ.
ರ್ಯಾಗಿಂಗ್: ದಿಂಬಿನೊಂದಿಗೆ ಲೈಂಗಿಕ ಚಟುವಟಿಕೆ ನಡೆಸಲು ಬಲವಂತ
Previous Articleದಕ್ಷಿಣ ಕನ್ನಡ ಉದ್ವಿಗ್ನ ಕಲ್ಲುತೂರಾಟ
Next Article ಕೆಂಪು ಕಸೂತಿ ಲೆಹೆಂಗಾದಲ್ಲಿ ಮಿಂಚಿದ ರಶ್ಮಿಕಾ