ನವದೆಹಲಿ,ಜು.23-ಸುಮಾರು 50 ವರ್ಷದ ವ್ಯಕ್ತಿಯ ಶವ ಆತನ ಮನೆಯ ರೆಫ್ರಿಜರೇಟರ್ನಲ್ಲಿ ಪತ್ತೆಯಾಗಿರುವ ಘಟನೆ ಈಶಾನ್ಯ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಝಾಕಿರ್ ಎಂದು ಗುರುತಿಸಲಾಗಿದ್ದು, ನಿನ್ನೆ ರಾತ್ರಿ 7.15 ರ ಸುಮಾರಿಗೆ ಆತನ ಮೊಬೈಲ್ಗೆ ಸಂಬಂಧಿಯೊಬ್ಬರು ಕರೆ ಮಾಡಿದ್ದಾರೆ. ಆದರೆ ಎಷ್ಟು ಬಾರಿ ಕರೆ ಮಾಡಿದರೂ, ಝಾಕಿರ್ ಕರೆ ಸ್ವೀಕರಿಸದ ಹಿನ್ನೆಲೆ ಸಂಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಝಾಕಿರ್ ಮನೆಗೆ ತಲುಪಿ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿ ಶವ ರೆಫ್ರಿಜರೇಟರ್ನಲ್ಲಿ ಕಂಡು ಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ವ್ಯಕ್ತಿ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ದೂರದ ಪ್ರದೇಶವೊಂದರಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಕೃತ್ಯವನ್ನು ಎಸಗಿದ ಆರೋಪಿಯ ಸುಳಿವು ಸಿಕ್ಕಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Previous Articleಬಾಂಗ್ಲಾ ಪ್ರಜೆಗಳ ಬಂಧನ
Next Article ನಿವೇದಿತಾ ಗೌಡಗೆ ಮಿಸೆಸ್ ಇಂಡಿಯಾ ಪ್ರಶಸ್ತಿ