ಪಾಟ್ನಾ(ಬಿಹಾರ),ಜು.14-ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನಗರದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಉಗ್ರರು ಸಂಚು ಮಾಡಿದ್ದನ್ನು ಬೇಧಿಸಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಪೊಲೀಸರ ದಾಳಿ ಇಬ್ಬರು ಉಗ್ರರನ್ನು ನಡೆಸಿದ ಕಾರ್ಯಾಚರಣೆ ವೇಳೆ 8 ಪುಟಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಬೇಕೆಂಬುದರ ಬಗ್ಗೆ ಬರೆಯಲಾಗಿದೆ.
ಬಂಧಿತ ಶಂಕಿತ ಉಗ್ರರಾದ ಮೊಹಮ್ಮದ್ ಜಲಾವುದ್ದೀನ್ ಹಾಗು ಅತ್ತರ್ ಪರ್ವೇಜ್ ನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಬಂಧಿತರಾಗಿರುವ ಜಲಾವುದ್ದೀನ್ ಜಾರ್ಖಂಡ್ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಈ ಉಗ್ರರ ತಂಡ ಗುರಿಯಾಗಿಸಿಕೊಂಡಿತ್ತು, ಮೋದಿಯವರ ಹತ್ಯೆಗೆ ಸಂಚು ರೂಪಿಸಿತ್ತು ಎನ್ನಲಾಗಿದೆ.
ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತರನ್ನು ಬಂಧಿಸಲಾಗಿದೆ. ಬಿಹಾರ ರಾಜಧಾನಿ ಪಾಟ್ನಾದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಜುಲೈ 12ರಂದು ಬಿಹಾರಕ್ಕೆ ಮೋದಿ ಭೇಟಿ ವೇಳೆ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜುಲೈ 6, 7ರಂದು ಸಂಚು ರೂಪಿಸಲು ಸಭೆ ಕರೆದಿದ್ದರು. ಬಂಧಿತ ಶಂಕಿತರಿಂದ ಪಿಎಫ್ಐಗೆ ಸೇರಿದ 25 ಕರಪತ್ರ ವಶಕ್ಕೆ ಪಡೆಯಲಾಗಿದೆ.
ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಮಾಡುವ ಸಂಚು ಮಾಡಿದ್ದ ಉಗ್ರರು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಅತ್ತರ್ ಪರ್ವೇಜ್ ಮತ್ತು ಎಂಡಿ ಜಲಾಲುದ್ದೀನ್ ಎಂದು ಗುರುತಿಸಲಾಗಿದೆ. ಬಿಹಾರಕ್ಕೆ ಪ್ರಧಾನಿ ಮೋದಿ ಅವರ ಭೇಟಿಗೆ 15 ದಿನಗಳ ಮೊದಲು ಶಂಕಿತ ಭಯೋತ್ಪಾದಕರಿಗೆ ಫುಲ್ವಾರಿ ಷರೀಫ್‌ನಲ್ಲಿ ತರಬೇತಿ ನೀಡಲಾಗುತ್ತಿತ್ತು. ಅವರು ಜುಲೈ 6 ಮತ್ತು 7ರಂದು ಪ್ರಧಾನಿ ಮೋದಿಯನ್ನು ಗುರಿಯಾಗಿಸಲು ಸಂಚು ರೂಪಿಸಲು ಸಭೆಗಳನ್ನು ನಡೆಸಿದ್ದರು. ಶಂಕಿತ ಉಗ್ರರು ಫುಲ್ವಾರಿ ಷರೀಫ್ ಕಚೇರಿ ಮೇಲೆ ಬಿಹಾರ ಪೊಲೀಸರು ದಾಳಿ ನಡೆಸಿದ್ದಾರೆ.