Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಇವನು ಮನುಷ್ಯನೇ ಅಲ್ಲ!
    ಅಪರಾಧ

    ಇವನು ಮನುಷ್ಯನೇ ಅಲ್ಲ!

    vartha chakraBy vartha chakraNovember 17, 2022Updated:November 17, 2022No Comments4 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ನವದೆಹಲಿ,ನ.16-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಲ್ಕರ್ ಮರ್ಡರ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಜೀವನ ಪೂರ್ತಿ ಸಂಗಾತಿಯಾಗಿ ಸುಖ ಜೀವನ ನಡೆಸಲು ಪೋಷಕರಿಂದ ಜಗಳವಾಡಿಕೊಂಡು ದೂರವಾಗಿದ್ದ ಶ್ರದ್ಧಾ ತನ್ನ ಪ್ರಿಯತಮನ ಕೈಯಿಂದಲೇ 35 ತುಂಡುಗಳಾಗಿದ್ದಾಳೆ. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಪೊಲೀಸರು ಬಂಧಿಸಿ ಶ್ರದ್ಧಾಳ ಮೃತದೇಹದ ತುಂಡುಗಳನ್ನ ಎಸೆದ ಅರಣ್ಯ ಪ್ರದೇಶಕ್ಕೆಲ್ಲ ಕರೆದುಕೊಂಡು ಹೋಗಿ ಮಹಜರು ಮಾಡಿಸಿ ನಡೆಸುತ್ತಿರುವ ವಿಚಾರಣೆಯಲ್ಲಿ ಪ್ರಕರಣದ ಬಗೆಗಿನ ಭಯಾನಕ ಸಂಗತಿಗಳು ಬಯಲಾಗಿವೆ.
    ಆರೋಪಿ ಅಪ್ತಾಬ್ ಮನಸ್ಥಿತಿ ನೋಡಿದರೆ ಎಂತವರಿಗೂ ಶಾಕ್ ಆಗಲಿದೆ. ಈತ ತನ್ನ ಪ್ರೇಯಸಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ಗೆ ತುಂಬಿಸಿದರೂ ಕೊಂಚವೂ ಭಯವಿಲ್ಲದೆ ಮತ್ತೊಬ್ಬ ಯುವತಿಯ ಜೊತೆ ತನ್ನ ರೂಮಿನಲ್ಲೇ ಸರಸ ಸಲ್ಲಾಪವಾಡುತ್ತಿದ್ದ. ಶ್ರದ್ಧಾರನ್ನು ಭಯಾನಕ ವಾಗಿ ಕೊಲೆಗೈದು ತುಂಡರಿಸಿ ಬೇರೆ ಮಾಡಿದ ತಲೆಯನ್ನು ಪ್ರತಿದಿನ ಫ್ರಿಡ್ಜ್ ತೆರೆದು ಗಂಟೆಗಟ್ಟಲೆ ಶ್ರದ್ಧಾ ಮುಖವನ್ನೇ ದಿಟ್ಟಿಸುತ್ತಿದ್ದ ಅಫ್ತಾಬ್ ಬ್ರಿಫ್ರಿಡ್ಜ್ ಬಾಗಿಲು ತೆಗೆದು ಪದೆ ಪದೆ ಶ್ರದ್ಧಾ ಮುಖ ನೋಡುತ್ತಿದ್ದ.
    ತಲೆ ಕಾಡಿಗೆ ಎಸೆದಿದ್ದ:
    ಅಷ್ಟೇ ಅಲ್ಲ ಶ್ರದ್ಧಾ ಗುರುತು ಅಳಿಸಲು ಕೈ ಬೆರಳು ಸೇರಿದಂತೆ ದೇಹದ ಹಲವು ಭಾಗಗಳನ್ನು ಮೆಹ್ರೌಲಿ ಮಾರುಕಟ್ಟೆಯಿಂದ ಬ್ಲೋವರ್ ಖರೀದಿಸಿ ತಂದು ಸುಟ್ಟು ಹಾಕಿ ಕೊನೆಯದಾಗಿ ಶ್ರದ್ಧಾಳ ತಲೆಯನ್ನು ಕಾಡಿಗೆ ಎಸೆದಿದ್ದಾನೆ.
    ದೆಹಲಿ ಪೊಲೀಸರ ಎದುರು ಅಫ್ತಾಬ್ ಪೂನಾವಾಲಾ ಆಘಾತಕಾರಿ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ಧಾ ಕೊಲೆ ಮಾಡುವ ವಾರದ ಹಿಂದೆಯೇ ಆಕೆಯನ್ನು ಮುಗಿಸಲು ಅಫ್ತಾಬ್ ಪ್ಲಾನ್ ಮಾಡಿಕೊಂಡಿದ್ದ. “ನನಗೂ ಶ್ರದ್ಧಾಗೂ ತಿಂಗಳಾನುಘಟ್ಟಲೆ ಆಗಾಗ ಜಗಳ ಆಗುತ್ತಿದ್ದಂತೆ ನಾನು ಅವಳನ್ನು ಕೊಲ್ಲಲು ಕಾರಣ” “ನಾನು ಬೇರೆ ಯುವತಿಯರ ಜೊತೆ ಮಾತನಾಡುವುದು ಶ್ರದ್ಧಾ ವಾಲ್ಕರ್ ಗೆ ಇಷ್ಟ ಪಡದೇ ಪದೇ ಪದೇ ಜಗಳ ಮಾಡುತ್ತಿದ್ದಳು “ನಾನು ಬೇರೆ ಹುಡುಗಿಯರೊಂದಿಗೆ ಫೋನ್ ನಲ್ಲಿ ಮಾತಾಡಲು ಶ್ರದ್ಧಾ ಬಿಡ್ತಿರಲಿಲ್ಲ.
    ವಾರದ ಮುನ್ನ ಸ್ಕೆಚ್:
    ನಾನು ಬೇರೆ ಹುಡುಗಿಯರೊಂದಿಗೆ ಮಾತಾಡ್ತಿದ್ದನ್ನು ಅನುಮಾನಿಸಿ, ಕೋಪಗೊಳ್ಳುತ್ತಿದ್ದಳು.ಕೊಲೆಯಾದ ಒಂದು ವಾರದ ಮುನ್ನವೇ ಅವಳನ್ನು ಕೊಲ್ಲಬೇಕಿತ್ತು, ಆದರೆ ಮಿಸ್ ಆಯ್ತು” ಎಂದು ದೆಹಲಿ ಪೊಲೀಸ್ ಅಧಿಕಾರಿಗಳ ಮುಂದೆ ಅಫ್ತಾಬ್ ಪೂನಾವಾಲಾ ಬಾಯ್ಬಿಟ್ಟಿದ್ದಾನೆ.
    ಜಗಳ ಮಾಡ್ತಾ ಮಾಡ್ತಾ ಎಮೋಷನ್ ಆದ್ಳು, ಅಳೋದಕ್ಕೆ ಶುರು ಮಾಡಿದ್ಳು..ಅದಕ್ಕೆ ಬಿಟ್ಟಿದ್ದೆ” ಆದರೆ ಕೊನೆಗೂ ಪ್ರಾಣ ತೆಗೆದೆ ಎಂದು ಒಪ್ಪಿಕೊಂಡಿದ್ದಾನೆ.
    ಮಾತಿಗೆ ಮಾತು ಬೆಳೆದಿದ್ದರಿಂದ ಶ್ರದ್ಧಾಳ ಕಥೆ ಮುಗಿಸಿದೆ”. ನಾನೇ ಶ್ರದ್ಧಾ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ.
    ಕತ್ತು ಹಿಸುಕಿ ಕೊಲೆ:
    ಕೊಲೆ ನಂತರ ಅಫ್ತಾಬ್ ಬಚಾವಾಗಲು ಸಿನಿಮೀಯ ಶೈಲಿಯಲ್ಲಿ ಆಪರೇಷನ್ ಮಾಡಿದ್ದಾನೆ. ಶ್ರದ್ಧಾಳ ಮೇಲೆ ಕುಳಿತು ಕತ್ತು ಹಿಸುಕಿ ಅಮಾನುಷವಾಗಿ ಕೊಂದ ನಂತರ ಆತ ಶ್ರದ್ಧಾ ಶವವನ್ನು ಹಾಗೆಯೇ ಎಲ್ಲಿಯಾದರೂ ಬಿಸಾಡಿದರೆ, ತಾನು ಸಿಕ್ಕಿಬೀಳುವ ಭಯದಲ್ಲಿ ಸಾಕ್ಷಿ ಸಿಗದಂತೆ ಮಾಡಲು ಗೂಗಲ್ ನಲ್ಲಿ ಪದೇ ಪದೇ ಹುಡುಕಾಟ ನಡೆಸಿದ್ದಾನೆ.
    ಸಾಕ್ಷಿನೇ ಸಿಗದಂತೆ ಮಾಡಲು ಹೇಗೆಲ್ಲಾ ಶವ ಕತ್ತರಿಸಬೇಕು ಗೂಗಲ್, ಯೂಟ್ಯೂಬ್ ನಲ್ಲೂ ತಲಾಶ್ ಮಾಡಿದ್ದಾನೆ. “ನಾನು ಹೆಚ್ಚಾಗಿ ಕ್ರೈಮ್ ಸೀರಿಯಲ್ಸ್ ನೋಡುತ್ತಿದ್ದರಿಂದ ಮೃತದೇಹವನ್ನು ವಿಲೇವಾರಿ ಹೇಗೆಂದು ಸಂಚು ಮಾಡಿದೆ”. ಶ್ರದ್ಧಾ ದೇಹ ತುಂಡು ತುಂಡಾಗಿ ನಾನೇ ಕತ್ತರಿಸಿ ಹಾಕಿದ್ದೆ ಎಂದು ಹಂತಕ ಅಫ್ತಾಬ್ ಒಪ್ಪಿಕೊಂಡಿದ್ದಾನೆ.
    ಇನ್ಸ್ಟಾಗ್ರಾಮ್ ಅಪರೇಟ್:
    ಕೊಲೆ ಮಾಡಿದ ನಂತರದ ದಿನಗಳಲ್ಲಿ ಶ್ರದ್ಧಾ ಇನ್ಸ್ಟಾಗ್ರಾಮ್ ಅಕೌಂಟ್ ಆಪರೇಟ್ ಮಾಡುತ್ತಿದ್ದೆ. ಶ್ರದ್ಧಾ ಫ್ರೆಂಡ್ಸ್ ಜತೆಗೂ ಚಾಟಿಂಗ್ ಮಾಡುತ್ತಿದ್ದೆ. ಶ್ರದ್ಧಾ ಬದುಕಿದ್ದಾಳೆ ಎಂದು ಬಿಂಬಿಸಲು ಶ್ರದ್ಧಾ ಅಕೌಂಟ್ ಆಪರೇಟ್ ಮಾಡುತ್ತಿದ್ದೆ ಎಂದಿದ್ದಾನೆ.
    ಮೃತದೇಹ ವಾಸನೆ ಬರದಂತೆ ನೋಡಿಕೊಳ್ಳಲು ಹಂತಕ ಅಫ್ತಾಬ್ ಛತ್ತರ್ ಪುರ ನ್ಯೂ ಬಸ್ ಸ್ಟ್ಯಾಂಡ್ ಬಳಿಯ ತಿಲಕ್ ಎಲೆಕ್ಟ್ರಾನಿಕ್ಸ್ ಶೋರೂಮ್ ನಲ್ಲಿ ಎರಡು ಬಾಗಿಲಿನ ಹೊಸ ಫ್ರಿಡ್ಜ್ ಖರೀದಿಸಿದ್ದ. ಮೇ 18ಕ್ಕೆ ಶ್ರದ್ಧಾ ಕೊಲೆ ಮಾಡಿ ಬಾತ್ ರೂಮ್​ನಲ್ಲಿ ಡೆಡ್ ಬಾಡಿ ಬಚ್ಚಿಟ್ಟಿದ್ದ. ಮೇ 19ರಂದೇ ಹೋಗಿ ಕ್ರೆಡಿಟ್ ಕಾರ್ಡ್ ಮೂಲಕ 22 ಸಾವಿರ ರೂಪಾಯಿ ಕೊಟ್ಟು ಡಬಲ್ ಡೋರ್ ಫ್ರಿಡ್ಜ್ ಖರೀದಿಸಿದ್ದ.
    ಕತ್ತರಿಸುವಾಗ ಕೈಗೆ ಗಾಯ:
    ಬಳಿಕ ಅಲ್ಲೇ ತಿಲಕ್ ಎಲೆಕ್ಚ್ರಾನಿಕ್ಸ್ ಎದುರುಗಡೆ ಅಂಗಡಿಯಲ್ಲಿ ಮೃತದೇಹವನ್ನು ಕಟ್ ಮಾಡಲು ಚಾಕು ಖರೀದಿಸಿದ್ದ. ಬಾಡಿ ಕಟ್ ಮಾಡಲು ಚಾಕು, ಕಟ್ ಮಾಡಿದ ಪೀಸ್ ಗಳನ್ನು ತುಂಬಲು ಚೀಲಗಳನ್ನೂ ಖರೀಸಿದ್ದಾನೆ. ಈ ಬಗ್ಗೆ ಪೊಲೀಸರು ಅಂಗಡಿ ಮಾಲೀಕರು, ಸಿಬ್ಬಂದಿಗಳ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.
    ಶ್ರದ್ಧಾ ಡೆಡ್ ಬಾಡಿ ಕಟ್ ಮಾಡುವಾಗ ಬೆರಳಿಗೆ ಗಾಯ ಮಾಡಿಕೊಂಡಿದ್ದ ಹಂತಕ ಅಫ್ತಾಬ್ ಶ್ರಾದ್ಧಾ ದೇಹ ಕತ್ತರಿಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ. ಬಳಿಕ ಛತ್ತರ್ ಪುರದಲ್ಲಿ ಡಾ.ಅನಿಲ್ ಸಿಂಗ್ ಬಳಿ ಚಿಕಿತ್ಸೆಗೆ ತೆರಳಿದ್ದ. ಆ ವೇಳೆ ಗಾಯ ಹೇಗೆಯ್ತು ಎಂಬ ವೈದ್ಯರ ಪ್ರಶ್ನೆಗೆ ಹಣ್ಣು ಕೊಯ್ಯುವಾಗ ಬೆರಳಿಗೆ ಗಾಯ ಆಯ್ತು ಎಂದಿದ್ದ.
    ವೈದ್ಯರ ಬಳಿ ಚಿಕಿತ್ಸೆ:
    ಅಫ್ತಾಬ್ ಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಅನಿಲ್ ಸಿಂಗ್ ಹೇಳಿಕೆಯನ್ನು ಕೂಡ ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದಾರೆ. ತುಂಬಾ ಅವಸರದಲ್ಲೇ ಬಂದವನಂತೆ ಕಂಡರೂ ಸಹ ಬಹಳ ಅಗ್ರೆಸಿವ್ ಹಾಗೂ ಕಾನ್ಫಿಡೆಂಟಾಗಿದ್ದನಂತೆ ಅಫ್ತಾಬ್ ನಾನು ಮುಂಬೈನವನು ಆದರೆ ನೋಯ್ಡಾದ ಗುರುಗ್ರಾಮದಲ್ಲಿ ಐಟಿ ಸೆಕ್ಟರ್ ನಲ್ಲಿ ಉದ್ಯೋಗಸ ಅವಕಾಶ ಹೆಚ್ಚಿವೆ ಎಂದು ಇಲ್ಲಿಗೆ ಬಂದೆ.
    ಕೈಬೆರಳಿಗೆ ಚಿಕಿತ್ಸೆಗೆ ಹೋಗಿ ಡಾಕ್ಟರ್ ಮುಂದೆ ಡ್ರಾಮಾ ಮಾಡಿದ್ದನಂತೆ. ಬಳಿಕ ಶ್ರದ್ಧಾ ಶವ ಪೀಸ್ ಪೀಸ್ ಮಾಡಲು ಹೊಸ ಚಾಕು, 35 ಪೀಸ್ ತುಂಬಲು ಹೊಸ ಬ್ಯಾಗ್ ಖರೀದಿಸಿರುವುದಾಗಿ ಪೊಲೀಸರಿಗೆ ತನಿಖೆ ವೇಳೆ ಮಾಹಿತಿ ಸಿಕ್ಕಿದೆ.
    ವಿಲೇವಾರಿಗೆ ಸಂಚು:
    ಕ್ರೂರಿ ಅಫ್ತಾಬ್ ಶ್ರದ್ಧಾ ಮೃತದೇಹ ವಿಲೇವಾರಿಗೆ ಖತರ್ನಾಕ್ ಪ್ಲಾನ್ ಮಾಡಿದ್ದ. ಯಾವುದೇ ಕಾರಣಕ್ಕೂ ತಾನೂ ಪೊಲೀಸರಿಗೆ ಸಿಕ್ಕಿಬೀಳಬಾರದೆಂದು ಎಚ್ಚರಿಕೆ ವಹಿಸಿ ಮೃತದೇಹವನ್ನು 35 ತುಂಡು ಮಾಡಿ ಲಿವರ್, ಕರುಳು ವಿಲೇವಾರಿಗೆ ಬೇರೆ ಸಂಚು ಮಾಡಿದ್ದ.
    ಲಿವರ್ ಹಾಗೂ ಕರುಳನ್ನು ಕೈಮಾದಂತೆ ಸಣ್ಣ ಸಣ್ಣದಾಗಿ ಕತ್ತರಿಸಿದ. ಹಂತಕ ಅಫ್ತಾಬ್ ಅಮಾನುಷತೆ, ಕ್ರೂರತೆ ಕೃತ್ಯ ಕಂಡು ದೆಹಲಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಶವ ಕಟ್ ಮಾಡೋದು ಹೇಗೆ? ಶವ ವಿಲೇವಾರಿ ಹೇಗೆ? ಸಾಕ್ಷ್ಯ ಸಿಗದಂತೆ ಮಾಡೋದು ಹೇಗೆ? ಹೀಗೆ ಶ್ರದ್ಧಾ ಕೊಲೆಯಿಂದ ಪಾರಾಗಲೂ ಗೂಗಲ್, ಯೂಟ್ಯೂಬ್ ನಲ್ಲಿ ದಿನಗಟ್ಟಲೇ ಅಫ್ತಾಬ್ ಹುಡುಕಾಟ ನಡೆಸಿ ಮಾಹಿತಿ ಕಲೆ ಹಾಕಿದ್ದ. ಕೈಮಾದಂತೆ ಸಣ್ಣಗೆ ತುಂಡರಿಸಿದ ಲಿವರ್ ಹಾಗೂ ಕರುಳನ್ನು ಛತ್ತರ್ ಪುರ ಹಾಗೂ ಮೆಹ್ರೌಲಿ ಕಾಡಲ್ಲಿ ಬಿಸಾಡಿದ್ದಾನೆ.
    ಎಫ್ ಎಸ್ ಎಲ್ ಪರೀಕ್ಷೆ:
    ಪೊಲೀಸರು ಸದ್ಯ ಹಂತಕ ಅಫ್ತಾಬ್​ನನ್ನು ಕಾಡಿಗೆ ಕರೆದೊಯ್ದು ಮಹಜರ್ ಮಾಡಿಸಿದ್ದಾರೆ. ಮಹಜರು ವೇಳೆ ಸಿಕ್ಕಿರುವ ಮನುಷ್ಯ ದೇಹ ಹೋಲುವ 10 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಡಿಎನ್ಎಗೆ ಮ್ಯಾಚ್ ಆಗುತ್ತಾ ಎಂದು ವಿಧಿವಿಜ್ಞಾನ ತಜ್ಞರು ಪರೀಕ್ಷಿಸಲಿದ್ದಾರೆ.

    Verbattle
    Verbattle
    Verbattle
    ಕಲೆ ಕೊಲೆ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಹೀಗೆ ಸಿಕ್ಕಿಬಿದ್ದ ನೋಡಿ
    Next Article ಮಗು ಕೆರೆಗೆ ನೂಕಿ ಪರಾರಿಯಾಗಿದ್ದ ಟೆಕ್ಕಿ
    vartha chakra
    • Website

    Related Posts

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    February 14, 2026

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಜೋರಾಗಿ ಕೆಮ್ಮೋದು ತಪ್ಪಾ..?

    February 11, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • alpha66_goKr on ಧರೆಗುರುಳಿದ ಭಾರೀ ಗಾತ್ರದ ತೇರು | Anekal
    • LinwoodGah on ಅಖಾಡದಲ್ಲಿ ಝಣ ಝಣ ಕಾಂಚಾಣ! #karnatakaelections2023 #bangalore
    • Tracymix on ಡ್ರಗ್ಸ್ ಜಾಲದಲ್ಲಿ ಮಂತ್ರಿಗಳ ಆಪ್ತರು!
    Latest Kannada News

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    February 14, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.