ಬೆಂಗಳೂರು,ಏ.9: ಈ ಬಾರಿ ರಾಜ್ಯದ ಎಲ್ಲಾ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಪಕ್ಷ ದೊಡ್ಡ ಸವಾಲೊಡ್ಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿಗಳು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿವೆ.
ಮೊದಲ ಹಂತದ Election ನಡೆಯುತ್ತಿರುವ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಈ ವಿಷಯವಾಗಿ ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ ಇದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಮಾಡಿದರೆ ಗೆಲುವಿಗೆ ಸಹಕಾರಿಯಾಗಲಿದೆ ಎಂದು ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಸಚಿವಾಲಯ ರಾಜ್ಯ ಬಿಜೆಪಿ ನಾಯಕರನ್ನು ಸಂಪರ್ಕಿಸಿ ಮೊದಲ ಹಂತದ ಚುನಾವಣೆ ನಡೆಯುವ ಯಾವ ಯಾವ ಕ್ಷೇತ್ರಗಳಲ್ಲಿ ಪ್ರಧಾನಿ ಅವರ ಪ್ರಚಾರ ಮತ್ತು ರೋಡ್ ಶೋ ಅಗತ್ಯವಿದೆ ಎಂಬ ಬಗ್ಗೆ ತಿಳಿಸುವಂತೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ರಾಜನಾಯಕರು ಕೇಂದ್ರ ಬಿಜೆಪಿಗೆ ಮನವಿಯೊಂದನ್ನು ಸಲ್ಲಿಸಿದ್ದು, ಮೊದಲ ಹಂತದ ಚುನಾವಣೆ ನಡೆಯುತ್ತಿರುವ ರಾಜ್ಯದ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಧಾನಿ ಅವರ ಬಹಿರಂಗ ಸಭೆಗಳಿಗಿಂತಲೂ ರೋಡ್ ಶೋಗಳು ಹೆಚ್ಚು ಪರಿಣಾಮಕಾರಿಯಾಗಿರಲಿವೆ. ಇದರಿಂದ ಸಮಯದ ಉಳಿತಾಯವು ಆಗಲಿದೆ ಜೊತೆಗೆ ಹೆಚ್ಚು ಜನರನ್ನು ತಲುಪಬಹುದಾಗಿದೆ ಎಂದು ಹೇಳಿ ರೋಡ್ ಶೋಗಳ ಅಗತ್ಯವನ್ನು ಪ್ರತಿಪಾದಿಸಿದೆ.
ಬೆಂಗಳೂರು ನಗರವನ್ನು ಒಳಗೊಳ್ಳುವ ನಾಲ್ಕು ಕ್ಷೇತ್ರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಗರದಲ್ಲಿ ಎರಡು ಕಡೆ ರೋಡ್ ಶೋ ನಡೆಸಬೇಕು ಒಂದೇ ದಿನ ಕನಿಷ್ಠ ಮೂರರಿಂದ ಐದು ಕಿಲೋ ಮೀಟರ್ ವರೆಗೆ ರೋಷ ನಡೆಸುವ ಮೂಲಕ ಬೆಂಗಳೂರು ಉತ್ತರ ದಕ್ಷಿಣ ಕೇಂದ್ರ ಮತ್ತು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡಬಹುದಾಗಿದೆ ಎಂದು ಹೇಳಿದೆ.
ಅದೇ ರೀತಿಯಲ್ಲಿ ಮೈಸೂರು ಮತ್ತು ಮಂಗಳೂರಿನಲ್ಲೂ ರೋಡ್ ಶೋ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದು ಇದಕ್ಕಾಗಿ ಒಂದು ರೂಟ್ ಮ್ಯಾಪ್ ಕೂಡ ಸಿದ್ಧಪಡಿಸಿ ಅದನ್ನು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ತಲುಪಿಸಲಾಗಿದೆ ಇದಾದ ನಂತರ ಕೆಲವು ಪ್ರದೇಶಗಳಲ್ಲಿ ಬಹಿರಂಗ ಸಭೆ ನಡೆಸಬಹುದು ಎಂದು ಹೇಳಿದೆ.
ರಾಜ್ಯ ನಾಯಕರು ರೋಡ್ ಶೋ ಮತ್ತು ಕೆಲವು ಕಡೆ ಬಹಿರಂಗ ಸಭೆಗಳ ಬಗ್ಗೆ ಮನವಿ ಮಾಡಿದ್ದು ಈ ಕುರಿತಂತೆ ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಪ್ರಧಾನಿ ಸಚಿವಾಲಯ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಬಿಜೆಪಿ ಈ ಚುನಾವಣೆಯನ್ನು ಪ್ರಧಾನಿ ಮೋದಿ ಅವರ ಅಲೆಯ ಮೇಲೆ ಎದುರಿಸಲು ಸಿದ್ಧತೆ ನಡೆಸಿದ್ದು ಅದಕ್ಕಾಗಿಯೇ ಈ ಕಾರ್ಯತಂತ್ರವನ್ನು ರೂಪಿಸಿದೆ. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸದೇ ಹೋದರೆ ಬೆಂಗಳೂರಿನಲ್ಲಿ ಅಭ್ಯರ್ಥಿಗಳು ದೊಡ್ಡ ಪ್ರಮಾಣದ ಹಿನ್ನಡೆ ಅನುಭವಿಸಬೇಕಾದ ಸಾಧ್ಯತೆ ಇದೆ ಎಂದು ಹೇಳಿದ್ದು ಏಪ್ರಿಲ್ 14ರಂದು ಬಹುತೇಕ ಪ್ರಧಾನಿಗಳು ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.