ಚಿತ್ರದುರ್ಗ ನ.11- ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಬಳಿಯ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ಚಂದ್ರಶೇಖರ್ ಹಾಗೂ ತಮಿಳುನಾಡು ಮೂಲದ ಖಲೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಸೌದೆ Business ಮಾಡುವುದಾಗಿ ಹೇಳಿ ಬಬ್ಬೂರು ಗ್ರಾಮದ ಬಳಿ ನಾರಾಯಣಪ್ಪ ಎಂಬುವರ ಮನೆಯನ್ನು ಲೀಸ್ ಗೆ ಪಡೆದ್ದರು.
ಮನೆಯಲ್ಲಿ ಅಕ್ರಮವಾಗಿ ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು 3 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ ಎಂದು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ತಿಳಿಸಿದ್ದಾರೆ.
1 Comment
необычный бизнес необычный бизнес .