ಬೆಂಗಳೂರು.
ಖಾಸಗಿಯವರೊಂದಿಗಿನ ಪೈಪೋಟಿ ಎದುರಿಸಲಾಗದೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಷ್ಟ ಇಲ್ಲವೆ ಮುಚ್ಚುವ ಹಂತದಲ್ಲಿವೆ. ಸಾರ್ವಜನಿಕ ಸಹಭಾಗಿತ್ವದ ಈ ಸಂಸ್ಥೆಗಳು ಉಳಿಯಬೇಕು, ಖಾಸಗಿಯವರ ಜೊತೆ ಸರಿಸಮನಾದ ಪೈಪೋಟಿ ಎದುರಿಸುವಂತೆ ಅವುಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ.
ಇದಕ್ಕಾಗಿ ಸರ್ಕಾರ ಮೇಕ್ ಇನ್ ಇಂಡಿಯಾ (Make in India), ಆತ್ಮ ನಿರ್ಭರ್ (Atmanirbhar Bharat) ನಂತಹ ಯೋಜನೆಗಳನ್ನು ಪ್ರಕಟಿಸಿದೆ. ಆದರೆ ಇದರ ಬೆನ್ನಲ್ಲೇ ಸರ್ಕಾರದ ಅಂಗ ಸಂಸ್ಥೆಗಳ ಧೋರಣೆಯಿಂದಾಗಿ ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆಗಳು ಸೊರಗುವಂತಾಗಿದೆ. ಇದಕ್ಕೆ ಈಗಿನ ಉದಾಹರಣೆ BSNL (ಭಾರತ್ ಸಂಚಾರ ನಿಗಮ ನಿಯಮಿತ).
ಒಂದು ಕಾಲಕ್ಕೆ ದೇಶದ ದೂರಸಂಪರ್ಕ ವಲಯದಲ್ಲಿ ಅನಭಿಷಕ್ತ ದೊರೆಯಂತಿದ್ದ BSNL ಇದೀಗ ತನ್ನ ದುರಾಡಳಿತ, ಅಸಮರ್ಪಕ ಸೇವೆ, ಸಿಬ್ಬಂದಿಯ ಅನಾದರಣೆ, ಪೈಪೋಟಿ ಎದುರಿಸಲಾಗದ ಜಡ್ಡುಗಟ್ಟಿದ ಪರಿಸ್ಥಿತಿಯಿಂದಾಗಿ ದಿವಾಳಿಯ ಹಂತ ತಲುಪಿರುವುದು ಬೆಳಕಿನಷ್ಟು ಸ್ಪಷ್ಟ.
ಹೀಗಿದ್ದರೂ ಸರ್ಕಾರದ ಸಂಸ್ಥೆಯೊಂದು ಅವಸಾನ ಹೊಂದದೆ ಬದುಕಿ ಉಳಿಯಬೇಕು. ಇದಕ್ಕೆ ಸರ್ಕಾರ ಎಲ್ಲಾ ಉತ್ತೇಜನ ನೀಡಬೇಕು. ವ್ಯವಸ್ಥೆಯಲ್ಲಿ ಹೊಸತನ ತರಬೇಕು ಹೊಸ ಗ್ರಾಹಕರು BSNL ಸೇವಾ ಜಾಲಕ್ಕೆ ಸೇರ್ಪಡೆಯಾಗಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ರಾಜ್ಯಾದ್ಯಂತ ಸರಿಯಾಗಿ BSNL ನೆಟ್‌ವರ್ಕ್ ಸಿಗುತ್ತಿಲ್ಲ, ಇದರಿಂದ ಅಧಿಕಾರಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಕಾರಣವನ್ನು ನೀಡಿ ರಾಜ್ಯ ಪೊಲೀಸ್ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಪರಿಣಾಮವಾಗಿ BSNL ನ ಸುಮಾರು 38,347 ಸಿಮ್‌ಕಾರ್ಡ್‌ಗಳನ್ನು Card ಬದಲಾಯಿಸಲು ಸರ್ಕಾರದ ಅನುಮತಿ ಪಡೆದುಕೊಂಡಿದೆ.
38,347 ಸಂಪರ್ಕಗಳಲ್ಲಿ ಹೆಚ್ಚಿನ ಸಂಪರ್ಕ ಸಂಖ್ಯೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಅಲ್ಲಿ ಉತ್ತಮ ನೆಟ್‌ವರ್ಕ್ ಕೊರತೆ ಕಂಡುಬಂದಿದೆ. ಇದರಿಂದ ಫೋಟೋ, ವೀಡಿಯೋ ಸೇರಿದಂತೆ ಇತರ ದತ್ತಾಂಶಗಳನ್ನು ವರ್ಗಾಯಿಸುವುದು ಕಷ್ಟಸಾಧ್ಯವಾಗುತ್ತಿತ್ತು. ಪೊಲೀಸ್ ತುರ್ತು ಸೇವೆಗಳಿಗಾಗಿ ಲಭ್ಯವಿರುವ ನೆಟ್‌ವರ್ಕ್‌ಗಳ ದಕ್ಷತೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬದಲಾವಣೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಇದೀಗ ಈ ಸೇವೆಯನ್ನು ರಿಲಯನ್ಸ್ ನ ಜಿಯೋ (Reliance Jio) ಸಂಸ್ಥೆಗೆ ನೀಡಲಾಗುತ್ತದೆ. ಇದರಿಂದ ಎಲ್ಲಾ BSNL ಸಿಮ್ ಕಾರ್ಡ್ ಗಳು Jio ಸಿಮ್ ಕಾರ್ಡ್ ಗಳಾಗಿ ಪರಿವರ್ತನೆಯಾಗಲಿವೆ. ಖಾಸಗಿ ಸಂಸ್ಥೆಗಳು ಈಗಾಗಲೇ 5ಜಿ ಸೇವೆ ನೀಡುತ್ತಿವೆ. ಆದರೆ BSNL 4ಜಿ ಸೇವೆಯನ್ನೂ ನೀಡುತ್ತಿಲ್ಲ. ಇದರಿಂದ ತುರ್ತು ಸೇವೆಗಳಿಗೆ ಸಮಸ್ಯೆಯಾಗಿದೆ. ಹಾಗಾಗಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ 1999ರ ಪ್ರಕಾರ ವಾಣಿಜ್ಯ ಮೌಲ್ಯಮಾಪನದ ನಂತರ ರಿಲಯನ್ಸ್ ಜಿಯೋವನ್ನು ಆಯ್ಕೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪೊಲೀಸ್ ಇಲಾಖೆಯ ಈ ನಿರ್ಧಾರ BSNL ಗೆ ದೊಡ್ಡ ಹೊಡೆತ ನೀಡಿದೆ. ಸರ್ಕಾರಿ ಸಂಸ್ಥೆಯನ್ನು ಕಡೆಗಣಿಸಿ ಖಾಸಗಿ ಸಂಸ್ಥೆಗೆ ಉತ್ತೇಜನ ನೀಡುವ ಈ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚಾಸ್ಪದವಾಗಿದೆ.


5 Comments
mcluck free 200 mcluckcasinogm.com mcluck Texas
Known after its whopping scheme library and practicable interface, play wow vegas casino is a premier sweepstakes casino that’s fully legal in dozens of states. It combines free WOW Coins also in behalf of limitless compete with with Sweepstakes Coins that can drive into verifiable prizes.
Revel in the diversity of gaming options tailored for all levels. what is crown coins ensures quick verifications and hassle-free withdrawals. Experience joy in every game!
Power up your play with authentic Wild West vibes. buffalo slots brings non-stop thrills via wild herds, multiplier frenzy, and colossal payouts. Your turn to shine!
stake casino usa — where legends are made one multiplier at a time.