ಬೆಂಗಳೂರು,ಜು.1-ಎಟಿಎಂ ಗೆ ಹಣ ತುಂಬಲು ತಂದಿದ್ದ ವಾಹನ ಸಮೇತ 44 ಲಕ್ಷ ರೂ. ನಗದು ದರೋಡೆ ಮಾಡಿದ್ದ ಐವರು ಆರೋಪಿಗಳಿಗೆ 52 ನೇ ಸಿಸಿಹೆಚ್ ನ್ಯಾಯಾಲಯವು 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗು ತಲಾ 20 ಸಾವಿರ ರೂಗಳ ದಂಡ ವಿಧಿಸಲಾಗಿದೆ.
ಗಂಗಮ್ಮಗುಡಿಯ ರಾಮಚಂದ್ರಪುರ ಮುಖ್ಯರಸ್ತೆಯ ಎಸ್ ಬಿಐ ಬ್ಯಾಂಕಿನ ಎಟಿಎಂಗೆ ಸಿಎಂಎಸ್ ಏಜೆನ್ಸಿ ರವರು 2012 ರ ಜು.37 ರಂದು ಮಧ್ಯಾಹ್ನ 3-30 ಗಂಟೆ ವೇಳೆ ಹಣ ತುಂಬಿಸಲು ಟಾಟಾ ಸುಮೋ ದಲ್ಲಿ ಬಂದಿದ್ದ ಆರೋಪಿಗಳು ವಾಹನ ಸಮೇತ 44 ಲಕ್ಷ ರೂಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಕಲಂ 395, 397 ಐಪಿಸಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಹಿಂದಿನ ಗಂಗಮ್ಮಗುಡಿ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್. ನಾಗರಾಜು ರವರು ತನಿಖೆಯನ್ನು ಕೈಗೊಂಡು ಪ್ರಕರಣದಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನಿಗಧಿತ ಸಮಯದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿಗಳ ವಿರುದ್ಧ ನಗರದ ಮಾನ್ಯ 52 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ದೋಷರೋಪಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ವಿಚಾರಣೆ ಕಾಲದಲ್ಲಿ ಪಿರ್ಯಾದಿ ಹಾಗು ಸಾಕ್ಷಿದಾರರ ವಿಚಾರಣೆ ನಡೆಸಿ ಸಾಕ್ಷ್ಯವನ್ನು ಸಂಗ್ರಹಿಸಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ತ್ಯಾಗರಾಜು ರವರು ಅಭಿಯೋಗದ ಪರವಾಗಿ ವಾದ ಮಂಡಿಸಿದ್ದರು.