ಬೆಂಗಳೂರು,ಆ.16- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್ ಇದೀಗ ಪಕ್ಷದ ಪರ ಮತದಾರರ ಒಲವು ಗಳಿಸಲು ವಿಭಿನ್ನ ಕಾರ್ಯತಂತ್ರ ರೂಪಿಸಿದೆ.
ಈ ನಿಟ್ಟಿನಲ್ಲಿ ಮತದಾರರ ಮನವೊಲಿಕೆಗೆ ಮುಂದಾಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಇದೇ 19ರಿಂದ ಸೆ. 7ರವರೆಗೆ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಪ್ರವಾಸದ ವೇಳೆ ಮಂದಿರ, ಮಠ, ದರ್ಗಾ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡಲಿರುವ ಅವರು, ಎಲ್ಲ ಸಮುದಾಯಗಳ ವಿಶ್ವಾಸಗಳಿಸುವ ಪ್ರಯತ್ನ ಮಾಡಲಿದ್ದಾರೆ.
ಬರುವ ಶುಕ್ರವಾರ ಕಲಬುರಗಿಯಿಂದ ಪ್ರವಾಸ ಆರಂಭವಾಗಲಿದ್ದು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು, ಕರಾವಳಿ ಭಾಗಗಳಿಗೆ ಭೇಟಿ ನೀಡಿ, ಪಕ್ಷದ ಸಮಾವೇಶಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಮುರುಘಾಮಠ, ಮೂರು ಸಾವಿರ ಮಠ, ಸಿರಿಗೆರೆ ಮಠ, ಮಾದಾರ ಚೆನ್ನಯ್ಯ ಪೀಠ, ಭಗೀರಥ ಪೀಠ, ಭೋವಿ ಗುರುಪೀಠ, ಬೆಕ್ಕಿನಕಲ್ಮಠ, ವಾಲ್ಮೀಕಿ ಪೀಠ, ಹೊಸಹಳ್ಳಿ ರೆಡ್ಡಿ ಪೀಠ, ನಂದಿದುರ್ಗದ ನೊಳಂಬ ಪೀಠ, ಶ್ರೀಕೃಷ್ಣ ಮಠ, ಬಾಳೆಹೊನ್ನೂರು ಮಠ, ಶೃಂಗೇರಿ ಶಾರದಾಂಬೆ ಮಠ, ರಂಭಾಪುರ, ಷಡಕ್ಷರಿ ಮಠ, ದೇವನೂರು ಗುರುಮಲ್ಲೇಶ್ವರ ಮಠ, ಚಾಮರಾಜನಗರ ವಿರಕ್ತ ಮಠ, ಗವಿಮಠ, ಯಾದಗಿರಿಯ ಕೋರಿ ಸಿದ್ದೇಶ್ವರ ಮಠ ಭೇಟಿ ಅವರ ಪ್ರವಾಸ ಪಟ್ಟಿಯಲ್ಲಿದೆ. ಅಲ್ಲದೆ, ಖಾಜಾ ಬಂದೇನವಾಜ್ ದರ್ಗಾ, ಪತ್ತೇಸಾಬ ದರ್ಗಾ, ಉಲ್ಲಾಳದ ದರ್ಗಾಕ್ಕೂ ಅವರು ಭೇಟಿ ನೀಡಲಿದ್ದಾರೆ. ಮಂಗಳೂರು ಆರ್ಚ್ ಬಿಷಪ್ ಅವರನ್ನೂ ಭೇಟಿ ಮಾಡಲಿದ್ದಾರೆ.
Previous Articleಕುಡಿತದ ಚಟಕ್ಕಾಗಿ ಬೈಕ್ ಕಳವು..
Next Article ಕ್ರೀಡಾಪಟುಗಳಿಗೆ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ…