ಬೆಂಗಳೂರು,ಜು.4-ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೆಶಕ(ಎಡಿಜಿಪಿ) ಅಮೃತ್ ಪಾಲ್ ಅವರನ್ನು ಮತ್ತೆ ವಿಚಾರಣೆ ನಡೆಸಲಾಗಿದೆ.
ಪ್ರಕರಣದ ಸಂಬಂಧಿಸಿದಂತೆ ಈಗಾಗಲೇ ಮೂರು ಬಾರಿ ವಿಚಾರಣೆ ನಡೆಸಿದ ಅಮೃತ್ ಪಾಲ್ ಅವರನ್ನು ಇಂದು ನಾಲ್ಕನೇ ಬಾರಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಮೂರು ಬಾರಿ ವಿಚಾರಣೆಯ ಕೆಲ ದಿನಗಳ ಬಳಿಕ ಮತ್ತೆ ವಿಚಾರಣೆಗೆ ಸಿಐಡಿ ಅಧಿಕಾರಿಗಳು ಕರೆದಿದ್ದರು.
ಅದರಂತೆ ಬೆಳಗ್ಗೆ 11 ಕ್ಕೆ ವಿಚಾರಣೆಗೆ ಹಾಜರಾದ ಎಡಿಜಿಪಿ ಅಮೃತ್ ಪಾಲ್ ಅವರನ್ನು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Previous Articleಹರ್ಷಿಕಾ ಪೂಣಚ್ಚ ಗೆ ಮದರ್ ತೆರೆಸಾ ಪ್ರಶಸ್ತಿ
Next Article ಬುಕ್ ಸ್ಟಾಲ್ ನಲ್ಲಿ ಡ್ರಗ್ಸ್ ಮಾರಾಟ.. !