ಬೆಂಗಳೂರು,ಜು.17- ಸ್ಯಾಂಡಲ್ವುಡ್ನ ನಶೆನಂಟು ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ನಟಿ ರಾಗಿಣಿ ಸ್ನೇಹಿತ ಮತ್ತೆ ವಂಚನೆ ಪ್ರಕರಣದಲ್ಲಿ ಉತ್ತರ ವಿಭಾಗದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಡ್ರಗ್ಸ್ ಕೇಸ್ನಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿ ಸದ್ದು ಮಾಡಿದ್ದ ಸ್ಯಾಂಡಲ್ವುಡ್ ನಟಿಯ ಆಪ್ತ, ಆರ್ ಟಿಒ ಎಸ್ಡಿಎ ರವಿಶಂಕರ್ ವಂಚನೆ ಪ್ರಕರಣದಲ್ಲಿ ಮಲ್ಲೇಶ್ವರಂ ಪೊಲೀಸರ ಅತಿಥಿಯಾಗಿದ್ದಾನೆ. ವಾಹನ ಮಾಲೀಕರ ಬಳಿ ಒಂದು ವರ್ಷದ ತೆರಿಗೆ ಹಣ ಪಡೆದು ಅದನ್ನು ಪಾವತಿಸದೇ ಲಕ್ಷಾಂತರ ರೂ ವಂಚನೆ ಮಾಡಿರುವ ಆರೋಪದ ಮೇಲೆ ಅಜಯ್ ಹಾಗು ರವಿಶಂಕರ್ ಅನ್ನು ಬಂಧಿಸಲಾಗಿದೆ.
ಆರೋಪಿಗಳಾದ ರವಿಶಂಕರ್ ಹಾಗು ಅಜಯ್, ಆಶಾ ಯೋಗೇಶ್ ಅವರು ಜೀವನ ಪರ್ಯಂತ ತೆರಿಗೆ ಮಾಡಿಸಿಕೊಡುವುದಾಗಿ 1,37,529 ರೂಪಾಯಿ ಪಡೆದು ತೆರಿಗೆ ಕಟ್ಟದೆ ವಂಚಿಸಿರುತ್ತಾರೆ.
ಆರೋಪಿತರ ವಂಚನೆ ಬಗ್ಗೆ ಮಹಿಳೆ ಆಶಾ ಯೋಗೇಶ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಇಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಆರಂಭಿಸಿದ್ದಾರೆ.
Previous Articleಮಕ್ಕಳ ಬಗ್ಗೆ ಆತಂಕಬೇಡ: ಡಿಕೆಶಿ ಪುತ್ರಿ ಪೋಷಕರಿಗೆ ಮನವಿ
Next Article ಸುಖಾಸುಮ್ಮನೆ ವಾಹನ ತಪಾಸಣೆ ಬೇಡ..!