ಬೆಂಗಳೂರು,ಆ.24-ಹಳೆಯ ದ್ವೇಷದಿಂದ ಗುಜರಿ Businessಿಯನ್ನು ಕೊಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಅಣ್ಣಮ್ಮ ಫ್ಯಾಷನ್ ಟೈಲರ್ ಶಾಪ್ ಮುಂಭಾಗ ಕಳೆದ ಆ.17ರಂದು ರಾತ್ರಿ ಆಜ್ಮಲ್ ಖಾನ್ ನನ್ನು ಹಳೆ ದ್ವೇಷದಿಂದ ಚಾಕುವಿನಿಂದ ಇರಿದು ಕೊಲೆಗೈದ ಆನಿಸ್ (26)ಸೈಯದ್ ಅಕ್ಮಲ್ (56)ಹಾಗು ಸೂಸ್ ಸಲ್ಮಾನ್ (25)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಆಜ್ಮಲ್ ಖಾನ್ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡ ರಾಜಗೋಪಾಲನಗರ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಅವರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆಯಲ್ಲಿ ಮೂದಲ ಆರೋಪಿಯು ಈತನು ಹೆಗ್ಗನಹಳ್ಳಿಯ ಮಾರುತಿ ನಗರದ ನಿವಾಸಿಯಾಗಿದ್ದು, ಗುಜರಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದು ಕೊಲೆಯಾದ ಆಜ್ಮಲ್ ಖಾನ್ ಮಾರುತಿನಗರದಲ್ಲಿ ವಾಸವಾಗಿ ಗುಜರಿ ವ್ಯವಹಾರ ಮಾಡಿಕೊಂಡಿದ್ದ
15 ದಿನಗಳ ಹಿಂದೆ ಕೊಲೆಯಾದ ವ್ಯಕ್ತಿ ಹಾಗೂ ಆರೋಪಿಗಳ ನಡುವೆ ಜಗಳವಾಗಿದ್ದು, ಅದೇ ದಿನ ಕೊಲೆ ಮಾಡಿ ಸಾಯಿಸುವುದಾಗಿ ಧಮಕಿ ಹಾಕಿದ್ದು, ಇವರುಗಳ ನಡುವೆ ವೈಷಮ್ಯ ಬೆಳೆದು ಒಬ್ಬರ ಮಲ್ಲೊಬ್ಬರು ದ್ವೇಷ ಸಾಧಿಸಿಕೊಂಡು ಆ.17 ರಂದು ರಾತ್ರಿ 9ರ ವೇಳೆ ಆಂಧ್ರಹಳ್ಳಿ ಮುಖ್ಯರಸ್ತೆಯ ಅಣ್ಣಮ್ಮ ಫ್ಯಾಷನ್ ಟೈಲರ್ ಶಾಪ್ ಮುಂದೆ ಎರಡನೇ ಆರೋಪಿ ಕೊಲೆಯಾದ ಆಜ್ಮಲ್ ಖಾನ್ ಜೊತೆಗೆ ಏಕಾಏಕಿ ಜಗಳ ತೆಗೆದು, ಅವಾಚ್ಯ ಶಬ್ಧಗಳಿಂದ ಬೈದು ಹಿಡಿದು ತಳ್ಳಾಡುವಾಗ ಮೊದಲ ಆರೋಪಿ ಚಾಕುವಿನಿಂದ ತಿವಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ ಎಂದರು.