ಸೋನಿಯಾ ಗಾಂಧಿ ED ವಿಚಾರಣೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನವರು ನಡೆಸಿದ ಮೌನ ಪ್ರತಿಭಟನೆಯಲ್ಲಿ ನಟಿ ಭಾವನಾ ಭಾಗವಹಿಸಿದ್ದರು. ಭಾವನಾ ಸಭೆಗೆ ಬಂದಂತಹ ಸಂದರ್ಭದಲ್ಲಿ ಅವರಿಗೆ ಕುರ್ಚಿ ಸಿಗದೆ ಹುಡುಕಾಡುತ್ತಿದ್ದಾಗ ಕಾರ್ಯಕರ್ತೆ ಒಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಹೋಗಿ ಕಾಂಗ್ರೆಸ್ ಗೆ ಬಂದ್ರ?ಎನ್ನುವ ಪ್ರಶ್ನೆಯನ್ನು ಕೇಳಿ ಮುಜುಗರ ಮಾಡಿರುವ ಸಂದರ್ಭ ನಿರ್ಮಾಣವಾಗಿದೆ. ಮುಜುಗರಕ್ಕೊಳಗಾದ ಭಾವನಾ ಸಮಾಧಾನದಿಂದ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ಲೊಕ್ಡೌನ್ ಸಮಯದಲ್ಲಿ ನಾನು ಕಾಂಗ್ರೆಸ್ ಸೇರಿದ್ದರಿಂದ ವಿಷಯ ಯಾರಿಗೂ ತಿಳಿದಿರಲಿಲ್ಲ. ಕಾರ್ಯಕರ್ತರು ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನನಗೆ ಕಾಂಗ್ರೆಸ್ ತತ್ವ, ಸಿದ್ಧಾಂತಗಳು ಒಪ್ಪಿಗೆ ಆಗಿವೆ. ಪಕ್ಷಕ್ಕಾಗಿ ನಾನು ದುಡಿಯಲು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಹೋಗಿ ಕಾಂಗ್ರೆಸ್ ಗೆ ಬಂದ್ರ? ನಟಿ ಭಾವನಾಗೆ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತೆ
Previous Articleರಾ ರಾ ರಕ್ಕಮ್ಮಾ ವಿಡಿಯೋ ಸಾಂಗ್ ಟೀಸರ್ ರಿಲೀಸ್
Next Article ಜಮೀರ್ ಅಹ್ಮದ್ ಹೇಳಿಕೆಗೆ ಆರೋಗ್ಯ ಸಚಿವ ಆಕ್ಷೇಪ