ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹೌದು, ರವಿಚಂದ್ರನ್ ಸೈಲೆಂಟ್ ಆಗಿ ಮಗನ ಮದುವೆಗೆ ಸಿದ್ಧತೆ ಮಾಡಿದ್ದು ಮುಂದಿನ ತಿಂಗಳೇ ಮದುವೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಆಗಸ್ಟ್ 21 ಹಾಗು 22ರಂದು ಹಸೆಮಣೆ ಏರುತ್ತಿದ್ದಾರೆ. ತಂದೆಯಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆದಿರುವ ಮನೋರಂಜನ್, ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ನೆಲೆಸಿರುವ ವೈದ್ಯಕೀಯ ಕ್ಷೆತ್ರದಲ್ಲಿ ದುಡಿಯುತ್ತಿರುವ ಹುಡುಗಿಯೊಂದಿಗೆ ಮದುವೆ ಫಿಕ್ಸ್ ಆಗಿದೆ.
ಮನೋರಂಜನ್ 2017ರಲ್ಲಿ ಸಾಹೇಬಾ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಬಳಿಕ ಬೃಹಸ್ಪತಿ, ಮುಗಿಲ್ ಪೇಟೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2022ರಲ್ಲಿ ಪ್ರಾರಂಭ ಸಿನಿಮಾ ಮೂಲಕ ಮನೋರಂಜನ್ ಅಭಿಮಾನಿಗಳ ಮುಂದೆ ಬಂದಿದ್ದರು. ಸಿನಿಮಾದಲ್ಲಿ ದೊಡ್ಡ ಮಟ್ಟದ ಬ್ರೇಕ್ ಪಡೆಯಲು ಪ್ರಯತ್ನಿಸುತ್ತಿದ್ದ ಮನೋರಂಜನ್ ಇದೀಗ ವೈಯಕ್ತಿಕ ಜೀವನದ ಕಡೆ ಗಮನ ಹರಿಸಿದ್ದಾರೆ. ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಸದ್ಯ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ವಿಕ್ರಮ್ ನಟನೆಯ ತ್ರಿವಿಕ್ರಮ ಸಿನಿಮಾ ರಿಲೀಸ್ ಆಗಿದೆ.
ರವಿಚಂದ್ರನ್ 2019ರಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದು ಈಗ ಮಗನ ಮದುವೆ ಸಿದ್ಧತೆ ನಡೆಸಿದ್ದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.