ಬೆಂಗಳೂರು,ಆ.4-ದೇವನಹಳ್ಳಿಯ ಮಹಿಂದ್ರಾ ಕೋಟಕ್ ಬ್ಯಾಂಕ್ನ ಎಟಿಎಂ ಕಳುವಿಗೆ ವಿಫಲ ಪ್ರಯತ್ನಿಸಿ ಪೊಲೀಸರನ್ನು ಕಂಡು ಹೆದರಿ ಬೊಲೇರೋ ಕಾರಲ್ಲಿ ಕಳ್ಳರು ಪರಾರಿಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಜೂನಿಯರ್ ಕಾಲೇಜು ಮುಂಭಾಗ ಇರುವ ಮಹಿಂದ್ರಾ ಕೋಟಕ್ ಬ್ಯಾಂಕ್ ಎಟಿಎಂನಲ್ಲಿ ಮಧ್ಯರಾತ್ರಿ 12.10 ಕ್ಕೆ ಎಟಿಎಂಗೆ ಕನ್ನ ಹಾಕಲು ಬೊಲೆರೋ ವಾಹನದಲ್ಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂ ಒಡೆದು ಕಳ್ಳತನ ಮಾಡುವ ವೇಳೆ ಅಕ್ಕಪಕ್ಕದ ಮನೆಯವರು ಕೂಗಾಡಿದ್ದಾರೆ. ಪರಾರಿಯಾದ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಭೇಟಿ ಪರಿಶೀಲನೆ ಮಾಡಿದರು. ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleಸೋಪ್ ನಲ್ಲಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದವರ ಸೆರೆ..!!
Next Article ಸಿದ್ದರಾಮಯ್ಯ ಜೀವನ ತೆರೆಗೆ ತರಲು ಸಿದ್ಧತೆ..??