‘ಬಿಗ್ ಬಾಸ್ ಕನ್ನಡ ಒಟಿಟಿ’ ಮೊದಲ ಸೀಸನ್ ನಿನ್ನೆ ಪ್ರಾರಂಭವಾಗಿದೆ. ಆದರೆ ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟು ಕೆಲವೇ ಗಂಟೆಗಳು ಕಳೆಯುತ್ತಿದ್ದಂತೆಯೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಮೊದಲ ವಾರ ಯಾರು ಹೊರಗೆ ಹೋಗಬೇಕು ಎಂಬ ಚರ್ಚೆ ಆರಂಭ ಆಗಿದೆ. ವಾಡಿಕೆಯಂತೆ ಸ್ಪರ್ಧಿಗಳೆಲ್ಲರೂ ಒಂದಷ್ಟು ಹೆಸರನ್ನು ಗೌಪ್ಯವಾಗಿ ಬಿಗ್ ಬಾಸ್ಗೆ ಸೂಚಿಸಿದ್ದಾರೆ. ಆ ಪೈಕಿ ಸೋನು ಶ್ರೀನಿವಾಸ್ ಗೌಡ ಹೆಸರು ಕೂಡ ಇದೆ. ಸೋನು ಶ್ರೀನಿವಾಸ್ ಗೌಡ ಸೇರಿದಂತೆ ಒಟ್ಟು 8 ಜನರು ಮೊದಲ ವಾರವೇ ನಾಮಿನೇಟ್ ಆಗಿದ್ದಾರೆ. ಸ್ಫೂರ್ತಿ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯಾ, ನಂದಿನಿ, ಜಶ್ವಂತ್, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ಅವರ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಈ ಪೈಕಿ ಯಾರು ಬಿಗ್ ಬಾಸ್ ಮನೆಯಿಂದ ಮೊದಲು ಹೊರಬರುತ್ತಾರೆ ಎಂದು ತಿಳಿಯಲು ವೀಕೆಂಡ್ ಎಪಿಸೋಡ್ ನೋಡಬೇಕು.
Previous ArticleKRG STUDIOಗೆ ಭೇಟಿ ನೀಡಿದ ಸ್ಯಾಂಡಲ್ ವುಡ್ ಕ್ವೀನ್
Next Article ಎಲ್ರ ಕಾಲೆಳೆಯತ್ತೆ ಕಾಲ: ಚಂದನ್ ಶೆಟ್ಟಿ ಹೊಸ ಹಾಡು ರಿಲೀಸ್