ಮಂಗಳೂರು,ಆ.2- ಸರಣಿ ಕೊಲೆಗಳ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆತಗ್ಗಿಸುವಂತಹ ಹೀನ ಕೃತ್ಯ ನಡೆದಿದ್ದು ಪ್ರಿಯಕರನ ಜೊತೆಗೆ ಬೀಚ್ಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಜುಲೈ 27ರಂದು ಗುಡ್ ಮಾರ್ನಿಂಗ್ ಸುರತ್ಕಲ್ ಬೀಚ್ನಲ್ಲಿ ನಡೆದಿರುವ ಅತ್ಯಾಚಾರದ ಸಂಬಂಧ ಲಾರಿ ಚಾಲಕನನ್ನು ಬಂಧಿಸಲಾಗಿದೆ.
ಅನ್ಯಕೋಮಿನ ಜೋಡಿಯೊಂದು ಬೀಚ್ಗೆ ಸುತ್ತಾಡಲು ಬಂದಿತ್ತು. ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿಯನ್ನು ನೋಡಿದ ಆರೋಪಿ ಲಾರಿ ಚಾಲಕ ಮುನಾಜ್ ಅಹಮದ್ ಹಿಂದೂ ಯುವಕನ ಜೊತೆ ಯಾಕೆ ಸುತ್ತಾಡುತ್ತೀಯ? ಎಂದು ಯುವತಿಯನ್ನು ಪ್ರಶ್ನೆ ಮಾಡಿದ್ದಾನೆ. ಜೊತೆಗೆ ನಿಮ್ಮಿಬ್ಬರ ವಿಡಿಯೋ ಚಿತ್ರೀಕರಿಸಿ, ಮನೆಯವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಅಲ್ಲದೇ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಅಸಹಾಯಕ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಮುನಾಜ್ ಅಹಮದ್ ಮೀನು ಲಾರಿಯಲ್ಲಿ ಡ್ರೈವರ್ ಆಗಿದ್ದು, ಈ ಹಿಂದೆಯೂ ಬೆತ್ತಲೆ ವಿಡಿಯೋ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಸದ್ಯ ಮಂಗಳೂರು ನಗರ ಪೊಲೀಸರು ಅತ್ಯಾಚಾರ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
Previous Articleವಿಜಯ ಸಂಕೇಶ್ವರ ಜೀವನಾಧಾರಿತ ಸಿನೆಮ ವಿಜಯಾನಂದ ಟೀಸರ್
Next Article HDK ಬೆಂಗಾವಲು ವಾಹನ ಅಪಘಾತ..