Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನೈಂಟಿ ಬಿಡಿ ಮನೀಗ್‌ ನಡಿ
    ಸುದ್ದಿ

    ನೈಂಟಿ ಬಿಡಿ ಮನೀಗ್‌ ನಡಿ

    vartha chakraBy vartha chakraAugust 25, 2022Updated:August 25, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿರುವ ನಟ ವೈಜನಾಥ ಬಿರಾದಾರ್‌ ಬರೋಬರಿ 500ಚಿತ್ರಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ’90 ಬಿಡಿ ಮನೀಗ್‌ ನಡಿ’ ಅಭಿನಯಿಸುತ್ತಿದ್ದು ಚಿತ್ರವು ಬಿಡುಗಡೆಗೆ ಸಜ್ಜಾಗಿದೆ.
    ರತ್ನಮಾಲಾ ಬಾದರದಿನ್ನಿ ನಿರ್ಮಿಸಿರುವ ’90 ಬಿಡಿ ಮನೀಗ್‌ ನಡಿ…’ ಸಿನಿಮಾವನ್ನು ಉಮೇಶ್‌ ಬಾದರದಿನ್ನಿ ಮತ್ತು ನಾಗರಾಜ್‌ ಅರೆಹೊಳೆ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವೈಜನಾಥ್‌ ಬಿರಾದಾರ್‌ ಅವರೊಂದಿಗೆ ಕರಿಸುಬ್ಬು, ನೀತಾ, ಪ್ರೀತು ಪೂಜಾ, ಧರ್ಮ, ಪ್ರಶಾಂತ್‌ ಸಿದ್ಧಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
    ಈಗಾಗಲೇ ಸದ್ದಿಲ್ಲದೆ ಬಹುತೇಕ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “90 ಬಿಡಿ ಮನೀಗ್‌ ನಡಿ…’ ಸಿನಿಮಾದ ಟ್ರೇಲರ್‌ ಮತ್ತು ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ ಈ ಹಾಡಿಗೆ ಶಿವು ಬೆರಗಿ ಸಾಹಿತ್ಯ-ಸಂಗೀತವಿದ್ದು, ರವೀಂದ್ರ ಸುರಗಾವಿ ಮತ್ತು ಶಮಿತಾ ಮಲ್ನಾಡ್‌ ಹಾಡಿಗೆ ಧ್ವನಿಯಾಗಿದ್ದಾರೆ. ಭೂಷಣ್‌ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು, ನಟ ಬಿರಾದಾರ್‌ ಹಾಡಿಗೆ ಮಸ್ತ್ ಸೆಪ್ಟ್ ಹಾಕಿದ್ದಾರೆ.
    ಇದೇ ವೇಳೆ ಮಾತನಾಡಿದ ನಟ ವೈಜನಾಥ್‌ ಬಿರಾದಾರ್‌, “ರಂಗಭೂಮಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಾನು ನಂತರ ಸಿನಿಮಾಕ್ಕೆ ಬಂದೆ. ಇಲ್ಲಿಯವರೆಗೆ 500 ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಡಾ. ರಾಜಕುಮಾರ್‌ ಅವರಿಂದ ಹಿಡಿದು ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಉಪೇಂದ್ರ, ದರ್ಶನ್‌ ಹೀಗೆ ಇಂದಿನ ಅನೇಕ ಸ್ಟಾರ್ ಜೊತೆ ಅಭಿನಯಿಸಿದ್ದೇನೆ. ನಾನೊಬ್ಬ ಕಲಾವಿದ, ಕಲಾಸೇವೆ ಮಾಡುವುದು ನನಗೆ ಖುಷಿ ಕೊಡುತ್ತದೆ. ಈ ಸಿನಿಮಾದಲ್ಲೂ ಕೂಡ ಅಗರಬತ್ತಿ ಮಾರುವ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಪಾತ್ರ ಮತ್ತು ನಿರ್ದೇಶಕರು ಬಯಸಿದ್ದರಿಂದ ಹಾಡಿನಲ್ಲಿ ಕಾಣಿಸಿಕೊಳ್ಳಬೇಕಾಯ್ತು. ತುಂಬಾ ಚೆನ್ನಾಗಿ ಸಿನಿಮಾ ಮತ್ತು ಹಾಡುಗಳು ಮೂಡಿಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
    ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರಾದ ಉಮೇಶ್‌ ಬಾದರದಿನ್ನಿ ಮತ್ತು ನಾಗರಾಜ್‌ ಅರೆಹೊಳೆ, “ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಇಡೀ ಸಿನಿಮಾದ ಶೇಕಡಾ 80ರಷ್ಟು ಭಾಗ ಉತ್ತರ ಕರ್ನಾಟಕದ ಸೊಗಡಿನಲ್ಲಿ ನಡೆಯುತ್ತದೆ. ಇಂಥದ್ದೊಂದು ಪಾತ್ರವನ್ನು ಉತ್ತರ ಕರ್ನಾಟಕದ ಮೂಲದ ಕಲಾವಿದರು ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬ ಯೋಚನೆ ನಮ್ಮಲ್ಲಿತ್ತು. ಕೊನೆಗೆ ಈ ಕಥೆಗೆ ಮತ್ತು ಪಾತ್ರಕ್ಕೆ ಬಿರಾದಾರ್‌ ಅವರೇ ಸೂಕ್ತ ಎನಿಸಿ, ಅವರನ್ನೇ ಹೀರೋ ಆಗಿ ಆಯ್ಕೆ ಮಾಡಿಕೊಂಡೆವು. ಸಂಪೂರ್ಣ ಹಾಸ್ಯಭರಿತವಾಗಿರುವ ಜೊತೆಗೆ ಸಸ್ಪೆನ್ಸ್‌ ಇರುವಂಥ ಸಿನಿಮಾ ಇದು’ ಎಂದು ಸಿನಿಮಾದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.
    ’90 ಬಿಡಿ ಮನೀಗ್‌ ನಡಿ…’ ಚಿತ್ರಕ್ಕೆ ಕೃಷ್ಣ ನಾಯ್ಕರ್‌ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವೀರ್‌ ಸಮರ್ಥ್ ಸಂಗೀತವಿದ್ದು, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು.

    Verbattle
    Verbattle
    Verbattle
    Entertainment ಧರ್ಮ ಸಾಹಿತ್ಯ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleನಕಲಿ ಪ್ರಮಾಣಪತ್ರ ಜಾಲ…
    Next Article ಕಾಂಗ್ರೆಸ್ ಸೇರಲು ಸಜ್ಜಾದ ಮಲ್ಲಿಕಾರ್ಜುನ ಖೂಬಾ..
    vartha chakra
    • Website

    Related Posts

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    February 11, 2026

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    February 10, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Glennhof on ರಾಹುಲ್ ಗಾಂಧಿಗೆ ರಾಜಣ್ಣ ಬರೆದ ಪತ್ರದಲ್ಲಿ ಏನಿದೆ ಗೊತ್ತಾ?
    • LinwoodGah on ಜನವರಿ 26ಕ್ಕೆ ಬದಲಾವಣೆ ಮುನ್ಸೂಚನೆ ನೀಡಿದ ಪರಮೇಶ್ವರ್!
    • LeonardReawn on ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೇ ಉದ್ಯೋಗ
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    February 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.