ನಿನ್ನೆ ನಡೆದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಂತಕರು 60 ಬಾರಿ ಇರಿದು ಗುರೂಜಿ ಅವರನ್ನು ಕೊಂದಿದ್ದರು. ಈ ಕುರಿತು ಸ್ಯಾಂಡಲ್ ವುಡ್ ನಾಯಕ, ನಾಯಕಿಯರೂ ಪ್ರತಿಕ್ರಿಯಿಸಿದ್ದಾರೆ. ಹತ್ಯೆಯಿಂದ ಆಘಾತ ಆಗಿದೆ ಎಂದು ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ, ನಟ ನವರಸನಾಯಕ ಜಗ್ಗೇಶ್ ನಿನ್ನೆಯಷ್ಟೇ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹತ್ಯೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ , ‘ನನ್ನ ಆತ್ಮೀಯ ಸ್ನೇಹಿತರು, ನನ್ನ ಅವರ ಒಡನಾಟ ಅಧ್ಯಾತ್ಮಿಕ ಹಾಗು ವಾಸ್ತು ಸಂಬಂಧಿಸಿದ್ದು. ಸದಾ ನನ್ನ ಒಳಿತು ಬಯಸುತ್ತಿದ್ದ ಆತ್ಮ. ನಾವಿಬ್ಬರೂ ಮಾತಿಗೆ ಕೂತರೆ ಗಂಟೆಗಟ್ಟಲೇ. ನನ್ನ ರಾಜ್ಯಸಭಾ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು. ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ. ಇಂದಿನ ಕಾಲದಲ್ಲಿ ಯಾರನ್ನು ನಂಬೋದು’ ಎಂದು ಬರೆದುಕೊಂಡಿದ್ದಾರೆ.
ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ‘ನಮ್ಮ ದೇಶದಲ್ಲಿ ಇಷ್ಟು ಸುಲಭವಾಗಿ ಒಬ್ಬರ ಜೀವ ತಗೆಯಬಹುದಾ? ಎಷ್ಟು ಘೋರ. ಗುರೂಜಿಯಾದರೂ, ಟೈಲರ್ ಆದರೂ ಮೃತರ ಆತ್ಮಕ್ಕೆ ಶಾಂತಿ ಕೋರುವುದೊಂದೇ ನಮ್ಮ ಕೈಲಿರೋದು’ ಎಂದಿದ್ದಾರೆ.
ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಭೀಕರವಾಗಿ ಚಾಕುವಿನಿಂದ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ್ದ ಅವರ ಆಪ್ತ ಶಿಷ್ಯರು ಕೊಲೆ ಮಾಡಿ ಮುಂಬೈಗೆ ಓಡಿಹೋಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೋಲೀಸ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.