ತುಮಕೂರು : ತುಮಕೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲುರನ್ನ ನೇಮಕವಾಗಿದ್ದಾರೆ. ರಾಜ್ಯಪಾಲರ ಆದೇಶ ಹಿನ್ನೆಲೆ ಇಂದು ನೂತನ ಕುಲಪತಿಗಳು ಅಧಿಕಾರ ಸ್ವೀಕರಿಸಿದರು. ತುಮಕೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳಾಗಿ ಪ್ರೊ.ವೆಂಕಟೇಶ್ವರಲು ನೇಮಕವಾಗಿದ್ದಾರೆ. ಇಂದು ಪ್ರಭಾರ ಕುಲಪತಿ ಕೇಶವರಿಂದ ಅಧಿಕಾರ ಸ್ವೀಕರಿಸಿದ ನೂತನ ಕುಲಪತಿಗಳು, ವಿವಿ ಬಾಗಿಲಿಗೆ ನಮಸ್ಕರಿಸಿ ಬಲಗಾಲಿಟ್ಟು ಒಳಗೆ ಬರುವ ಮೂಲಕ ಕುಲಪತಿ ಕುರ್ಚಿ ಅಲಂಕರಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಪ್ರಾಣಿಶಾಸ್ತç ವಿಭಾಗದಲ್ಲಿ ಪ್ರಾಧ್ಯಪಕರಾಗಿದ್ದ, ವೆಂಕಟೇಶ್ವರಲು ಐದನೇ ಕುಲಪತಿಯಾಗಿ ತುಮಕೂರು ವಿವಿಗೆ ನೇಮಕಗೊಂಡಿದ್ದಾರೆ. ಅಪಾರ ಸಿಬ್ಬಂದಿ ವರ್ಗ, ಪ್ರಾಧ್ಯಪಕ ವರ್ಗ ಅವರಿಗೆ ಹೂವಿನ ಗುಚ್ಚ ನೀಡಿ ಆತ್ಮೀಯತೆಯಿಂದ ಬರಮಾಡಿಕೊಂಡಿತು
ನೂತನ ಕುಲಪತಿಗಳ ಮುಂದೆ ನೆನೆಗುದಿಗೆ ಬಿದ್ದಿರುವ ವಿವಿ ಕ್ಯಾಂಪಸ್, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ, ಅತಿಥಿ ಉಪನ್ಯಾಸಕರ ಸಂಕಷ್ಟ, ಸೇರಿದಂತೆ ಪ್ರಮುಖವಾದ ಸವಾಲುಗಳಿವೆ. ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಹಾಗು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಮೊದಲ ಆದ್ಯತೆ ನೀಡುವು ಮಾತುಗಳನ್ನಾಡಿದರು. ಅಲ್ಲದೆ ತುಮಕೂರು ಜನ ಒಳ್ಳೆಯವರು ಅವರ ನಿರೀಕ್ಷೆಯಂತೆ ಉತ್ತಮ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದರು.
ಈ ಹಿಂದೆ ಇದೇ ವಿವಿಯಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದ, ಪ್ರೊ. ವೆಂಕಟೇಶ್ವರಲು ಅಧಿಕಾರ ಸ್ವೀಕರಿಸಿದ್ದಾರೆ. ವಿವಿಯ ಸಿಬ್ಬಂದಿಗಳು ಹೊಸಬರೇನಲ್ಲ, ಎಲ್ಲರ ಸಹಕಾರದ ಮಂತ್ರ ಜಪಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಯ ಅಭಿವೃದ್ದಿಗೆ ಯಾವ ರೀತಿ ಶ್ರಮಿಸಲಿದ್ದಾರೆ ಕಾದು ನೋಡಬೇಕು.