ನವದೆಹಲಿ, ಅ.26- ಮಳೆ ಅಭಾವದಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದ್ದು,ಬೇಡಿಕೆ ಹೆಚ್ಚಾಗಿದೆ. ಇದನ್ನು ನಿಭಾಯಿಸಲು ಕೇಂದ್ರ ಗ್ರಿಡ್ ಮೂಲಕ ಹೊರ ರಾಜ್ಯಗಳಿಂದ ಖರೀದಿಸಲಾಗುತ್ತಿದೆ.ಆತ್ಮಸಾಕ್ಷಿ ಇರುವ ಯಾವ ರಾಜಕಾರಣಿಯೂ ಕೃತಕ ಅಭಾವ ಸೃಷ್ಟಿಸುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಲಭ್ಯವಿರುವ ಮೂಲಗಳಿಂದ ವಿದ್ಯುತ್ ಖರೀದಿಸಿ ಬೇಡಿಕೆ ಪೂರೈಸಲು ಬೇಕಾದ ಕ್ರಮಗಳ ಬಗ್ಗೆ ಕೇಂದ್ರ ನೀತಿ ಆಯೋಗ ಮತ್ತು ಸರ್ಕಾರದ ಅಧಿಕಾರಿಗಳ ಜೊತೆ ಚರ್ಚಿಸಲು ದೆಹಲಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೃತಕ ಅಭಾವ ಸೃಷ್ಟಿಸಿ ವಿದ್ಯುತ್ ಖರೀದಿಯಲ್ಲಿ ಹಣ ಮಾಡಲು ಯತ್ನಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ.ಆತ್ಮಸಾಕ್ಷಿ ಇರುವ ಯಾವ ರಾಜಕಾರಣಿಯೂ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು ರಾಜ್ಯದ ವಿದ್ಯುತ್ ಉತ್ಪಾದನೆ,ಬೇಡಿಕೆ ಮತ್ತು ಪೂರೈಕೆ ಬಗ್ಗೆ ಮುಖ್ಯಮಂತ್ರಿಯಾದಿಯಾಗಿ ನಾವು ಪ್ರತಿದಿನ ಪರಿಸ್ಥಿತಿ ಪರಿಶೀಲನೆ ಮಾಡುತ್ತೇವೆ.ಹೀಗಾಗಿ ಕೃತಕ ಅಭಾವ ಸೃಷ್ಟಿಯ ಮಾತೆಲ್ಲಿ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ವಿದ್ಯುತ್ ಖರೀದಿಸುವುದು ಕೇಂದ್ರ ಗ್ರಿಡ್‍ನಿಂದ. ನಮ್ಮ ಅಧಿಕಾರಿಗಳು ಮುನ್ನಾ ದಿನ ಗ್ರಿಡ್‍ಗೆ ಹೋಗಿ ಬಿಡ್‍ನಲ್ಲಿ ಭಾಗವಹಿಸುತ್ತಾರೆ. ಆ ದಿನದ ದರಕ್ಕೆ ತಕ್ಕಂತೆ ಹರಾಜು ಕೂಗಿ ವಿದ್ಯುತ್ ಖರೀದಿಸುತ್ತೇವೆ. ಕುಮಾರಸ್ವಾಮಿ ಬಯಸಿದರೆ ಗ್ರಿಡ್‍ನಲ್ಲಿ ನಡೆಯುವ ಖರೀದಿ ಪ್ರಕ್ರಿಯೆಯನ್ನು ತೋರಿಸಲು ಕರೆದುಕೊಂಡು ಹೋಗಲು ಸಿದ್ದರಿದ್ದೇವೆ. ಸುಳ್ಳು ಆರೋಪ ಮಾಡಿ ಜನರಲ್ಲಿ ಅನುಮಾನ ಬರುವಂತೆ ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ವಸ್ತು ಸ್ಥಿತಿ ಅರಿವಿಲ್ಲದೆ ಅವರು ಆರೋಪ ಮಾಡಿದ್ದಾರೆ. ನಾನು ಯಾರ ಮೇಲೂ ದೋಷಾರೋಪಣೆ ಮಾಡುವುದಿಲ್ಲ. ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದರು.
ಕೂಡಗಿ ಸ್ಥಾವರದ ಐದು ಸ್ಥಾವರದಲ್ಲಿ ಮೂರಲ್ಲಿ ಮಾತ್ರ ಉತ್ಪಾದನೆಯಾಗುತ್ತಿದೆ. ಅವುಗಳು ಕೇಂದ್ರ ಸರ್ಕಾರ ನಿಯಂತ್ರಣದಲ್ಲಿವೆ, ರಾಜ್ಯ ಸರ್ಕಾರಕ್ಕೆ ಸಂಬಂಧಿಸಿಲ್ಲ. ಅಲ್ಲಿ ಉತ್ಪಾದನೆಯಾಗುವ 2400 ಮೆಗಾವ್ಯಾಟ್‍ನಲ್ಲಿ ರಾಜ್ಯಕ್ಕೆ 1250 ಮೇಗಾವ್ಯಾಟ್ ಮಂಜೂರಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ 150 ಮೆಗಾವ್ಯಾಟ್ ವಿದ್ಯುತ್ ನೀಡಲು ಮುಂದಾಗಿತ್ತು. ಅದನ್ನು ಆಗಿನ ಸರ್ಕಾರ ಖರೀದಿಸದೆ, ದೆಹಲಿಗೆ ಬಿಟ್ಟುಕೊಟ್ಟಿದೆ. ಆ ಒಪ್ಪಂದ ಅಕ್ಟೋಬರ್ 31ವರೆಗೂ ಚಾಲ್ತಿಯಲ್ಲಿತ್ತು, ಈಗ 150 ಮೆಗಾವ್ಯಾಟ್ ರಾಜ್ಯಕ್ಕೆ ದೊರೆಯಲಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕೊರತೆಯಾಗಿರುವ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ಹಿಮಾಚಲಪ್ರದೇಶ ಹಾಗೂ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು, ಜೊತೆಯಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಇಂಧನ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಶೇ.10ರಷ್ಟು ವಿದೇಶಿ ಕಲ್ಲಿದ್ದಲ್ಲನ್ನು ದೇಶಿಯ ಕಲ್ಲಿದ್ದಲಿಗೆ ಮಿಶ್ರಣ ಮಾಡಿದರೆ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 2 ಮೆಗಾಟನ್ ಕಲ್ಲಿದ್ದಲ್ಲನ್ನು ಮಂಜೂರು ಮಾಡಿದೆ. ದೇಶಿಯ ಕಲ್ಲಿದ್ದಲಿನಲ್ಲಿ ಬೂದಿ ಹೆಚ್ಚಿದೆ ಅದನ್ನು ತೊಳೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನದಿಂದ 600 ಮೆಗಾವ್ಯಾಟ್ ವಿದ್ಯುತ್ ದೊರೆಯುವ ನಿರೀಕ್ಷೆ ಇದೆ.
ಇತ್ತೀಚೆಗೆ ಪವನ ಹಾಗೂ ಸೌರ ಶಕ್ತಿ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ಮತ್ತಷ್ಟು ಸೌರ ಶಕ್ತಿ ವೃದ್ಧಿಸುವ ನಿರೀಕ್ಷೆಗಳಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ 900 ಸಾವಿರ ಉಪಸ್ಥಾವರಗಳಿವೆ, ಅವುಗಳಲ್ಲಿ 200 ಉಪಸ್ಥಾವಗಳಿಗೆ ಕೇಂದ್ರ ಸರ್ಕಾರದ ಕುಸುಮ್-ಬಿ ಯೋಜನೆಯಲ್ಲಿ ಸೌರಶಕ್ತಿ ಉತ್ಪಾದನೆ ಮಾಡಿ, ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ.ಪಾವಗಡದಲ್ಲಿ ಈಗಾಗಲೇ 10 ಸಾವಿರ ಎಕರೆ ಪ್ರದೇಶದಲ್ಲಿ 2300 ಮೇಗಾವ್ಯಾಟ್ ಸೌರ ಶಕ್ತಿ ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಅಲ್ಲಿನ ರೈತರು ಇನ್ನೂ ಹತ್ತು ಸಾವಿರ ಎಕರೆಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಆರು ಸಾವಿರ ಎಕರೆಗೆ ಒಪ್ಪಂದವಾಗಿದೆ. ಹೆಚ್ಚುವರಿಯಾಗಿ 2 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗಲಿದೆ ಎಂದು ವಿವರಿಸಿದರು.
ಜೊತೆಗೆ ಗದಗ, ಕಲಬುರಗಿ, ರಾಯಚೂರಿನಲ್ಲೂ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ. ಪವನ ಶಕ್ತಿ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಪಂಪ್ ಸ್ಟೋರೆಜ್‍ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚತ್ತಿಸ್‍ಗಡದಲ್ಲಿ ವಿದ್ಯುತ್ ಘಟಕ ಸ್ಥಾಪನೆಗೆ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಉತ್ಪಾದನೆಯಾಗುತ್ತಿಲ್ಲ, ವಿದ್ಯುತ್ ಸಿಗುತ್ತಿಲ್ಲ , Election ಬಳಿಕ ಅಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಯಲಹಂಕದಲ್ಲಿನ ಡಿಸೇಲ್ ಘಟಕವನ್ನು ಅನಿಲ ಆಧಾರಿತವಾಗಿ ಘಟಕವನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ 375 ಮೇಗಾ ವ್ಯಾಟ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
7 Comments
Промокоды на все случаи: скидки, подарки, бонусы. http://www.free-promocode.ru .
Виза цифрового кочевника в Испании klaipedatours.ru .
нарколог вывод из запоя ростов нарколог вывод из запоя ростов .
Всё о покупке аттестата о среднем образовании: полезные советы
politictoday.ru/uskorennyiy-diplom-prostoy-put-k-novyim-perspektivam
купить диплом в мичуринске arusak-diploms.ru .
купить диплом врача дерматолога arusak-diploms.ru .
Официальная покупка аттестата о среднем образовании в Москве и других городах