ಬೆಂಗಳೂರು,ಡಿ.30-ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳ ಎಲ್ಲಾ ನೌಕರರ ಸೇವೆಯನ್ನು ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿ ತರಲು ರಾಜ್ಯ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ.
ಈ ಅಧಿ ಸೂಚನೆಯ ಪ್ರಕಾರ ಜನವರಿ 1 ರಿಂದ ಜುಲೈ 31, 2023ರವರೆಗೆ ರಸ್ತೆ ಸಾರಿಗೆ ಸಂಸ್ಥೆಯಲ್ಲಿವಎಸ್ಮಾ ಅಡಿಯಲ್ಲಿರಲಿದೆ.
ಈ ಹಿನ್ನೆಲೆಯಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ನಡೆಸಲು ಮುಂದಾಗಿದ್ದ ಸಿಬ್ಬಂದಿಗಳಿಗೆ ಭಾರೀ ಹಿನ್ನಡೆ ಉಂಟಾದಂತಾಗಿದೆ.
ಖಾಯಂ ಆಧಾರದ ಮೇಲೆ ಅಥವಾ ಗುತ್ತಿಗೆ, ತಾತ್ಕಾಲಿಕ, ಹೊರಗುತ್ತಿಗೆ ಆಧಾರದ ಮೇಲೆ ಬಂದಿರುವ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ನಿರಾಕರಿಸಿದರೆ ಅದು ಸಾರ್ವಜನಿಕ ಉಪಯುಕ್ತ ಸೇವೆಗಳ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸಿಬ್ಬಂದಿಗಳ ಮುಷ್ಕರ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುವಂತಾಗುತ್ತದೆ ಎಂದು ಸೂಚನೆಯಲ್ಲಿ ಸರ್ಕಾರ ತಿಳಿಸಿದೆ.
ಕೆಎಸ್‍ಆರ್‍ಟಿಸಿ ತನ್ನ ಎಲ್ಲಾ ವಿಭಾಗಗಳು, ಕಾರ್ಯಾಗಾರಗಳು, ಕಚೇರಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಸರ್ಕಾರದ ಅಸೂಚನೆಯ ಪ್ರತಿಯನ್ನು ಹಾಕಬೇಕು ಮತ್ತು ಅಸೂಚನೆ ಬಗ್ಗೆ ನೌಕರರು ಮತ್ತು ಸಾರಿಗೆ ಸಂಘಟನೆಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದೆ.
6ನೇ ವೇತನ ಆಯೋಗದ ಅನ್ವಯ ಸಾರಿಗೆ ನಿಗಮಕ್ಕೆ ವೇತನ ಹೆಚ್ಚಳ, ವಜಾಗೊಂಡಿರುವ ನೌಕರರ ಮರುಸೇರ್ಪಡೆ, ನೌಕರರ ವಿರುದ್ಧದ ಪೊಲೀಸ್ ದೂರು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ನೌಕರರ ಸಂಘವು ಪ್ರತಿಭಟನೆಗೆ ಮುಂದಾಗಿತ್ತು.
Previous ArticleRahul Gandhi ಯಿಂದ ನಿಯಮ ಉಲ್ಲಂಘನೆ
Next Article ಜಯನಗರದಲ್ಲಿ ವಿವೇಕ್ ಸುಬ್ಬಾರೆಡ್ಡಿ ಫ್ಲೆಕ್ಸ್ ಹಾವಳಿ!