Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚಿಕನ್ ಇಲ್ಲದ ಬಿರಿಯಾನಿ ಕೊಟ್ಟ ತಪ್ಪಿಗೆ ಏನಾಯ್ತು ಗೊತ್ತಾ | Chicken Biryani
    Trending

    ಚಿಕನ್ ಇಲ್ಲದ ಬಿರಿಯಾನಿ ಕೊಟ್ಟ ತಪ್ಪಿಗೆ ಏನಾಯ್ತು ಗೊತ್ತಾ | Chicken Biryani

    vartha chakraBy vartha chakraDecember 5, 20231 Comment2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಡಿ.5- ಮಾರುಕಟ್ಟೆ ವ್ಯವಸ್ಥೆಯಲ್ಲಿ ‌ಗ್ರಾಹಕನೇ ಮಹಾರಾಜ. ಗ್ರಾಹಕರ ಹಿತ ಕಾಯುವುದು ಎಲ್ಲಾ ವ್ಯಾಪಾರಿಗಳ ಕರ್ತವ್ಯ. ತಪ್ಪಿದಲ್ಲಿ ಗ್ರಾಹಕ ವ್ಯವಹಾರಗಳ ನ್ಯಾಯಾಲಯ ಸುಮ್ಮನಿರುವುದಿಲ್ಲ.ಅದಕ್ಕೆ ಉದಾಹರಣೆ ಈ ಘಟನೆ.
    ಚಿಕನ್ ಬಿರಿಯಾನಿ (Chicken Biryani) ಕೊಂಡ ಗ್ರಾಹಕನಿಗೆ ಹೋಟೆಲ್ ಕೋಳಿ‌ ಮಾಂಸ ಇಲ್ಲದಿರುವ  ಬಿರಿಯಾನಿ ನೀಡಿದ ತಪ್ಪಿಗಾಗಿ 1000 ರೂ. ಪರಿಹಾರ ಮತ್ತು 150 ರೂ ಗಳ ಬಿರಿಯಾನಿ ಹಣವನ್ನು ಗ್ರಾಹಕನಿಗೆ ನೀಡುವಂತೆ ಹೊಟೇಲ್  ಮಾಲೀಕನಿಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.

    ಕಳೆದ ಏಪ್ರಿಲ್ 2 ರಂದು ಬೆಂಗಳೂರಿನ ನಾಗರಭಾವಿಯ ನಿವಾಸಿ ಕೃಷ್ಣಪ್ಪ ಅವರು ತಮ್ಮ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾಗಿದ್ದರಿಂದ ಐಟಿಐ ಲೇಔಟ್‌ನಲ್ಲಿರುವ ಹೊಟೇಲ್ ಗೆ ಹೋಗಿ‌ 150 ರೂ ಕೊಟ್ಟು ಚಿಕನ್ ಬಿರಿಯಾನಿ ಖರೀದಿಸಿದರು.
    ಆತ ಮನೆಗೆ ಬಂದು ಪಾರ್ಸೆಲ್ ತೆರೆದು ನೋಡಿದಾಗ ಬಿರಿಯಾನಿಯಲ್ಲಿ ಒಂದು ಚೂರು ಮಾಂಸ ಇರಲಿಲ್ಲ.ಕೂಡಲೇ ಕೃಷ್ಣಪ್ಪ ಅಂಗಡಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಿಕನ್ ಬಿರಿಯಾನಿಗೆ ಹಣ ಕೊಟ್ಟರೂ ಮಾಂಸವಿಲ್ಲದ  ಬಿರಿಯಾನಿ ಕೊಡಲಾಗಿದೆ ಎಂದು ತಿಳಿಸಿದರು.
    ಆಗ ಹೊಟೇಲ್​​ ಮಾಲಿಕ,ಏನೋ ಯಡವಟ್ಟಾಗಿದೆ ಚಿಕನ್ ಬಿರಿಯಾನಿಯ ಪಾರ್ಸೆಲ್ ಸಿದ್ಧವಾಗಿದೆ 30 ನಿಮಿಷಗಳಲ್ಲಿ ನಿಮ್ಮ ನಿವಾಸದ ವಿಳಾಸಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.ಇದಕ್ಕಾಗಿ ಕೃಷ್ಣಪ್ಪ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದರು.ಆದರೆ ಚಿಕನ್​ ಬಿರಿಯಾನಿ ಪಾರ್ಸೆಲ್ ಬರಲಿಲ್ಲ.

    ದಂಪತಿಗಳು ವಿಧಿ ಇಲ್ಲದೆ ರಾತ್ರಿ ಸಾದಾ ಬಿರಿಯಾನಿಯನ್ನೇ ತಿಂದು ಮಲಗಿದರು.
    ಬಳಿಕ ಕೃಷ್ಣಪ್ಪ ಅವರು ಏಪ್ರಿಲ್ 28 ರಂದು ಹೋಟೆಲ್​ ಮಾಲಿಕನಿಗೆ ತಾನು (ಕೃಷ್ಣಪ್ಪ) ಕಾನೂನು ಮೊರೆ ಹೋಗುವುದಾಗಿ ತಿಳಿಸಿದರೂ  ಹೋಟೆಲ್​ ಮಾಲೀಕ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.
    ಕೊನೆಗೆ  ಕೃಷ್ಣಪ್ಪ ಅವರು ಮೇ ತಿಂಗಳಿನಲ್ಲಿ ಶಾಂತಿನಗರದಲ್ಲಿರುವ  ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋಟೆಲ್​ ಮಾಲಿಕರ ವಿರುದ್ಧ ದೂರು ದಾಖಲಿಸಿ 30 ಸಾವಿರ ರೂ ಪರಿಹಾರ ನೀಡುವಂತೆ ಒತ್ತಾಯಿಸಿದರು.
    ಗ್ರಾಹಕ ಕಾನೂನಿನ ಪ್ರಕಾರ ಈ ಪ್ರಕರಣವನ್ನು ಕೃಷ್ಣಪ್ಪ ಅವರು ತಾವೇ ನ್ಯಾಯಾಲಯದಲ್ಲಿ ವಾದಿಸಿದರು. ಕೋರ್ಟ್ ಹೋಟೆಲ್ ಮಾಲೀಕರಿಗೆ ನೋಟೀಸ್ ನೀಡಿದರೂ ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.

    ನ್ಯಾಯಾಲಯವು ಕೃಷ್ಣಪ್ಪ ವಾದವನ್ನು ಆಲಿಸಿ ಮತ್ತು ನೀಡಿದ ಸಾಕ್ಷಾಧಾರವನ್ನು ಪರಿಶೀಲಿಸಿ ಅಕ್ಟೋಬರ್ 5, 2023 ರಂದು ತೀರ್ಪು ನೀಡಿತು. ಹೋಟೆಲ್ ತಿಳಿದೋ ತಿಳಿಯದೆಯೋ ತಪ್ಪು ಮಾಡಿರುವುದು ಸ್ಪಷ್ಟವಾಗಿದೆ. ಹೋಟೆಲ್​ ಗ್ರಾಹಕರಿಂದ ಚಿಕನ್ ಬಿರಿಯಾನಿಗೆ 150 ರೂ. ಪಡೆದು ತಪ್ಪಾದ ಪಾರ್ಸೆಲ್​ ಅನ್ನು ನೀಡಿದೆ. ಇದು ಅನ್ಯಾಯ. ಅಲ್ಲದೆ ತಮ್ಮ ತಪ್ಪಿನ ಬಗ್ಗೆ ಹೋಟೆಲ್​ಗೆ ಎಚ್ಚರಿಕೆ ನೀಡಿದರೂ ಬದಲಿ ಪಾರ್ಸಲ್​​ ಅನ್ನು ನೀಡದೆ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಹೋಟೆಲ್ ವಿಫಲವಾಗಿದೆ ಎಂದು ಹೇಳಿ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಅದನ್ನು ಗ್ರಾಹಕನಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.

    Verbattle
    Verbattle
    Verbattle
    Bangalore Chicken Biryani Karnataka News Trending ಕಾನೂನು ನ್ಯಾಯ ವ್ಯವಹಾರ Business
    Share. Facebook Twitter Pinterest LinkedIn Tumblr Email WhatsApp
    Previous Articleಪೊಲೀಸರಂತೆ ಮನೆಗೆ ನುಗ್ಗಿ ‌ದರೋಡೆ
    Next Article ಚೈತ್ರಾ ಕುಂದಾಪುರ ಜೈಲಿನಿಂದ ಬಿಡುಗಡೆ | Chaitra Kundapura
    vartha chakra
    • Website

    Related Posts

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    February 13, 2026

    1 Comment

    1. Uzrdml on February 13, 2026 1:49 pm

      mgm sportsbook promo betmgm-play mgm sportsbook promo

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Плей Фортуна казино рабочее зеркало on ಡಿ ಬಾಸ್ ದರ್ಶನ್ ಬಿಡುಗಡೆ ಯಾವಾಗ ಗೊತ್ತಾ.
    • LinwoodGah on ಕನ್ನಡ ನ್ಯೂಸ್ ಚಾನಲ್ ನೋಡೋರು ಇಲ್ಲವಾಗುತ್ತಿದ್ದಾರೆ
    • LinwoodGah on Crypto ವಂಚಕ Arrest.
    Latest Kannada News

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.