ಬೆಂಗಳೂರು, ಫೆ.21-
ಮುಂಬರುವ ವಿಧಾನಸಭೆ Electionಯಲ್ಲಿ ಗೆದ್ದು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ತಂತ್ರ ಮಾಡುತ್ತಿರುವ BJP ಇದೀಗ ರಾಜ್ಯ ಸರ್ಕಾರದ ಮೂಲಕ ಹಿಂದುಳಿದ ವರ್ಗಗಳ ಓಲೈಕೆ ಆರಂಭಿಸಿದೆ.
ಕಳೆದೆರಡು ದಿನಗಳ ಹಿಂದಷ್ಟೇ ಹಿಂದುಳಿದ ಸಮುದಾಯವಾದ ಗಾಣಿಗ ಮತ್ತು ಬಿಲ್ಲವ ಅಭಿವೃದ್ಧಿ ನಿಗಮ ಸ್ಥಾಪನೆಯ ಆದೇಶ ಹೊರಡಿಸಿದ್ದು, ಇದೀಗ ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮೇದಾರ, ಬಟ್ಟರ್, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಮೇದಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.
ಟ್ವೀಟ್ ಮೂಲಕ ಈ ವಿಷಯ ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 1ರ ಕ್ರಮ ಸಂಖ್ಯೆ 36 (ಎ) ಯಿಂದ (ಜೆ)ವರೆಗೆ ಬರುವ ಮದರ, ಬಟ್ಟರ್, ಬರ್ನಡ, ಗೌರಿಗ, ಗೌವ್ ರಿಗ, ಗೌರಿ, ಗೌರಿ ಮರಾಠ, ಮೇದರಿ, ಬುರುಡ್ ಜಾತಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-1ರ ಕ್ರಮ ಸಂಖ್ಯೆ:36 (ಎ) ಯಿಂದ (ಜೆ)ವರೆಗೆ ನಮೂದಾಗಿರುವ ಮದರ,ಬಟ್ಕರ್, ಬರ್ನಡ್, ಗೌರಿಗ ಗೌವ್ ರಿಗ, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ‘ಕರ್ನಾಟಕ ಮೇದಾರ ಅಭಿವೃದ್ಧಿ ನಿಗಮ’ (Medara Development Corporation) ವನ್ನು ಸ್ಥಾಪಿಸಿ ಆದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
4 Comments
Как купить аттестат 11 класса с официальным упрощенным обучением в Москве
Продамус промокод promokod-prod.ru .
Сколько стоит диплом высшего и среднего образования и как это происходит?
диплом о среднем образовании купить в москве