Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಎಂಜಿನಿಯರಿಂಗ್ ವೈಫಲ್ಯ Metro ದುರಂತಕ್ಕೆ ಕಾರಣ
    ಸುದ್ದಿ

    ಎಂಜಿನಿಯರಿಂಗ್ ವೈಫಲ್ಯ Metro ದುರಂತಕ್ಕೆ ಕಾರಣ

    vartha chakraBy vartha chakraJanuary 21, 2023Updated:January 21, 2023No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಜ.21- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಚೌಕಟ್ಟು ಬಿದ್ದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ
    ಇಂಜಿನಿಯರಿಂಗ್ ವೈಫಲ್ಯ ಹಾಗೂ ಕಳಪೆ ಕಾಮಗಾರಿ ಕಾರಣ ಎಂದು ತಜ್ಞರ ವರದಿ ತಿಳಿಸಿದೆ.
    ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಎಸ್ಸಿ ತಜ್ಞರ ತಂಡವು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರಿಗೆ ತನಿಖಾ ವರದಿ ಸಲ್ಲಿಸಿದೆ.
    ಕಿಶೋರ್ ಚಂದ್ರ ನೇತೃತ್ವದ ತಜ್ಞರ ತಂಡವು ವರದಿ ಸಲ್ಲಿಸಿದ್ದು, ವರದಿಯಲ್ಲಿ ತಾಯಿ, ಮಗು ಸಾವಿಗೆ ಇಂಜಿನಿಯರ್, ಗುತ್ತಿಗೆದಾರರೇ ಕಾರಣ ಎಂದು ಉಲ್ಲೇಖಿಸಲಾಗಿದೆ.
    ಐಐಎಸ್ಸಿ ತಂಡ ತನಿಖೆಯನ್ನು ಪ್ರಾರಂಭಿಸುವಾಗ, ಕಾಮಗಾರಿಗೆ ಬಳಸಿದ್ದ ಕಂಬಿ, ಮರಳು, ಸಿಮೆಂಟ್ಗಳ ಕ್ವಾಲಿಟಿ ವರದಿ ಅಲ್ಲದೇ ಜಲ್ಲಿ, ಮಣ್ಣು, ಸಿಮೆಂಟ್ಗಳ ಪರೀಕ್ಷಾ ವರದಿಯನ್ನು ಪಡೆಯಲಾಗಿತ್ತು.
    ಪಿಲ್ಲರ್ ನಿರ್ಮಾಣದ ವೇಳೆ ಬಿಎಂಆರ್ ಸಿಎಲ್ 18 ಮೀಟರ್ ಎತ್ತರದ ಕಂಬಿ ಚೌಕಟ್ಟನ್ನು ಕಟ್ಟಿತ್ತು. ಈ ಎತ್ತರದಲ್ಲಿ 6 ಅಂತಸ್ತಿನ ಮನೆ ಕಟ್ಟಬಹುದು, ಅಷ್ಟು ಉದ್ದದ ಕಂಬಿ ಪಿಲ್ಲರ್ ಏಕೆ ಕಟ್ಟಿದರು.? ಇಷ್ಟು ಎತ್ತರದ ಪಿಲ್ಲರ್ ಕಟ್ಟಿದಾಗ, ಮುಂಜಾಗ್ರತಾ ಕ್ರಮವಾಗಿ ಕಂಬಿಯ ಪಿಲ್ಲರ್ ಚೌಕಟ್ಟಿಗೆ ಸರಿಯಾದ ರಕ್ಷಣೆ ನೀಡಬೇಕಿತ್ತು.ರಕ್ಷಣೆ ನೀಡದಿದ್ದದ್ದೇ ಅನಾಹುತಕ್ಕೆ ಕಾರಣವಾಗಿದೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
    ಕೆಲಸಗಾಗರು ಕಂಬಿಯ ಪಿಲ್ಲರ್ ಅನ್ನು ನೇರವಾಗಿ ನಿಲ್ಲಿಸಲು ಸುತ್ತಲೂ ರಕ್ಷಣೆ ನೀಡಬೇಕಿತ್ತು. ಅದು ಕೆಲಸಗಾರರಿಗೆ ಗೊತ್ತಾಗಲ್ಲ, ಗುತ್ತಿಗೆದಾರರೇ ಹಾಗೂ ಇಂಜಿನಿಯರ್ಗಳೇ ಅದನ್ನು ನೋಡಿಕೊಳ್ಳಬೇಕು. ಸದ್ಯಕ್ಕೆ ಗುತ್ತಿಗೆದಾರರೇ ಹಾಗೂ ಇಂಜಿನಿಯರ್ಗಳೇ ಅನಾಹುತಕ್ಕೆ ನೇರ ಹೊಣೆ. ಕಂಟ್ರ್ಯಾಕ್ಟರ್ ಹಾಗೂ ಇಂಜಿನಿಯರ್ಗಳನ್ನೆ ತಪ್ಪಿತಸ್ಥರೆಂದು ವರದಿಯಲ್ಲಿ ಉಲ್ಲೇಖವಾಗಿದೆ.
    ಘಟನೆ ಹಿನ್ನೆಲೆ:
    ಕಳೆದ ಜ.10 ರಂದು ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕಂಬಿ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟಿದ್ದರು. ಮೃತ ತೇಜಸ್ವಿನಿ ಹಾಗೂ ಅವರ ಪತಿ ತಮ್ಮಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್‌ ಅವರ ಬೈಕ್ ಮೇಲೆ ಬಿದ್ದಿತ್ತು. ಅವರ ಕುಟುಂಬದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
    ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ. ಒಂದು ವರ್ಷದ ಮಗು ಮತ್ತು ಲೋಹಿತ್‌ ಕುಮಾರ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

    Verbattle
    Verbattle
    Verbattle
    m ಬೈಕ್
    Share. Facebook Twitter Pinterest LinkedIn Tumblr Email WhatsApp
    Previous Articleಪ್ರತಿಷ್ಟೆಗಾಗಿ ರಸ್ತೆಯ ಮೇಲೆ ನಡೆದ ರಾದ್ಧಾಂತ
    Next Article ಇಂಗ್ಲೆಂಡ್ ನ ಪ್ರಧಾನ ಮಂತ್ರಿ ರಿಷಿ ಸುನಾಕ್’ರಿಗೆ ದಂಡ!
    vartha chakra
    • Website

    Related Posts

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    February 10, 2026

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    February 10, 2026

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    February 10, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    ರಷ್ಯಾ ಅಧ್ಯಕ್ಷ ಪುತಿನ್ ಸುತ್ತ ಲೈಂಗಿಕ ಬ್ಲ್ಯಾಕ್‌ಮೇಲ್ ತಂತ್ರದ ಹುತ್ತ: ಏನಿದು ಹನಿ ಟ್ರ್ಯಾಪ್?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LeonardReawn on CM ಮತ್ತು DCM ಬದಲಾವಣೆ ಚರ್ಚೆಯಲ್ಲಿ ಇವರಿಲ್ಲವಂತೆ.
    • LinwoodGah on ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಗೆ ಮಠಾಧೀಶರ ಅರ್ಜಿ..
    • LinwoodGah on ಜನ ಕನ್ನಡ ನ್ಯೂಸ್ ಚಾನಲ್ ನೋಡ್ತಾ ಇಲ್ಲ
    Latest Kannada News

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    February 10, 2026

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    February 10, 2026

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    February 10, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.