Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Modiಗೆ ಅಮೆರಿಕಾದಲ್ಲಿ ಸ್ವಾಗತದ ಸವಿ ಪ್ರತಿಭಟನೆಯ ಬಿಸಿ
    ಅಂತಾರಾಷ್ಟ್ರೀಯ

    Modiಗೆ ಅಮೆರಿಕಾದಲ್ಲಿ ಸ್ವಾಗತದ ಸವಿ ಪ್ರತಿಭಟನೆಯ ಬಿಸಿ

    vartha chakraBy vartha chakraJune 23, 2023No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಅಮೆರಿಕಾ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರಿಗೆ ಅಮೆರಿಕಾದ ಅಧ್ಯಕ್ಷರು ಕೆಲವೇ ಜಾಗತಿಕ ನಾಯಕರಿಗಾಗಿ ಮೀಸಲಿಟ್ಟ ಅಭೂತಪೂರ್ವವೆಂದೇ ಬಣ್ಣಿಸಲಾಗಿರುವ ಅದ್ದೂರಿ ಸ್ವಾಗತವನ್ನು ನೀಡಿದ್ದಾರೆ. ಅಮೆರಿಕಾದಲ್ಲಿ ಮೋದಿಯವರನ್ನು ವಿಶೇಷ ಆದರಾತಿಥ್ಯಗಳೊಂದಿಗೆ ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತಿದೆ. ಆದರೆ ಮೋದಿಯವರ ಭೇಟಿ ನಿರ್ಧರಿಸಲಾದಂದಿನಿಂದಲೇ ನಿರೀಕ್ಷಿಸಲ್ಪಟ್ಟಂತೆ ಮೋದಿಯವರ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದಿವೆ. ಆ ಪ್ರತಿಭಟನೆಗಳು ಅನಿವಾಸಿ ಭಾರತೀಯರು, ಮುಸಲ್ಮಾನರು ಮಣಿಪುರಿಗಳು ಮತ್ತು ಅಮೆರಿಕನ್ನರಿಂದಲೂ ಆಯೋಜಿಸಲ್ಪಟ್ಟಿವೆ.

    ಮೋದಿಯವರನ್ನು ಕಟುವಾಗಿ ಟೀಕಿಸಿರುವ ಈ ಪ್ರತಿಭಟನಾಕಾರರು ಮೋದಿಯವರ ರಾಜಕೀಯ ಇತಿಹಾಸ ಮತ್ತು ಅವರ ಬಲಪಂಥೀಯ ಸರ್ಕಾರದ ನಡವಳಿಕೆಗಳನ್ನೂ ಪ್ರಶ್ನಿಸಿವೆ. ಅನೇಕ ಪ್ರತಿಭಟನಾಕಾರರು ಮೋದಿಯವರನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರು ಕಟುವಾಗಿ ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ. ಮೋದಿ ಭೇಟಿಯ ಸಂದರ್ಭದಲ್ಲಿ ಅಮೆರಿಕಾದ ನ್ಯೂ ಯಾರ್ಕ್ ನಗರದಲ್ಲಿ ಟ್ರಕ್ ಗಳ ಮೇಲೆ ಅಳವಡಿಸಿದ ಡಿಜಿಟಲ್ ಪರದೆಗಳಲ್ಲಿ ಮೋದಿಯವರ ವಿರುದ್ಧ ಘೋಷವಾಕ್ಯಗಳೊಂದಿಗೆ ಅವರ ಸರ್ಕಾರವನ್ನೂ ಟೀಕಿಸಲಾಗಿತ್ತು. ಈ ಟ್ರಕ್ ಗಳು ನ್ಯೂಯಾರ್ಕ್ ನಗರದಲ್ಲೆಲ್ಲ ಓಡಾಡಿ ಜನರ ಗಮನ ಸೆಳೆದಿವೆ.

    ಹಾಗೇ ಅಮೆರಿಕಾದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮೋದಿಯವರು ಪಾಲ್ಗೊಳ್ಳುವಾಗ ಅದನ್ನು ಬಹಿಷ್ಕರಿಸಲು ನಾಲ್ಕು ಮಂದಿ ಸಂಸತ್ ಸದಸ್ಯರು ನಿರ್ಧರಿಸಿದ್ದಾರೆ. ಶಾಸನ ಸಭೆಯ ಸದಸ್ಯರಾದ ಇಲ್ಹಾನ್ ಒಮರ್, ರಶೀದಾ ತ್ಲ್ಯಾಯ್ಬ್, ಅಲೆಕ್ಸಾಂಡ್ರಿಯಾ ಕಾರ್ಟೆಜ್ ಮತ್ತು ಕೋರಿ ಬುಷ್ ಮೋದಿಯವರು ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಬಾರದು ಎಂದಿದ್ದಾರೆ. ಹಾಗೇ ಅನೇಕ ಪತ್ರಕರ್ತರು ಚಿಂತಕರು ಮತ್ತು ಸಮಾಜಿಕ ಕಾರ್ಯಕರ್ತರೂ ಕೂಡ ಈ ಪ್ರತಿಭಟನೆಯ ಭಾಗಿಯಾಗಿದ್ದಾರೆ.

    ಅನೇಕ ಪ್ರತಿಭಟನಾಕಾರರು ತಾವು ಹಿಂದೂ ವಿರೋಧಿಗಳಲ್ಲ ಮತ್ತು ಭಾರತ ವಿರೋಧಿಗಳೂ ಅಲ್ಲ ನಾವು ಬರಿ ಮೋದಿಯವರ ವಿರೋಧಿಗಳು ಎಂದು ತಮ್ಮ ಪ್ರತಿಭಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಮುಖವಾಗಿ ಭಾರತೀಯ ಪ್ರಧಾನ ಮಂತ್ರಿಯವರನ್ನು#crimeministerofindia ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಜೋಡಿಸಿ ಟೀಕಿಸುತ್ತಿದ್ದಾರೆ. ಇವೆಲ್ಲ ನಡೆಯುತ್ತಿದ್ದರೂ ಮೋದಿಯವರು ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಅಡೆತಡೆಯಿಲ್ಲದೆ ನಿರ್ವಹಿಸಿ ತಮ್ಮ ಅಮೆರಿಕಾ ಭೇಟಿಯನ್ನು ಯಶಸ್ವಿ ಗೊಳಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ.

    Verbattle
    Verbattle
    Verbattle
    crime india m mi modi ನರೇಂದ್ರ ಮೋದಿ ರಾಜಕೀಯ ಸಂಸತ್
    Share. Facebook Twitter Pinterest LinkedIn Tumblr Email WhatsApp
    Previous Articleನೇಮಕಾತಿ ಪರೀಕ್ಷೆಯಿಂದ ಇವರೆಲ್ಲ ಶಾಶ್ವತವಾಗಿ ಡಿಬಾರ್
    Next Article ಪುಟಿನ್ ಗೆ ಸವಾಲೆಸೆದ ವಾಗ್ನರ್ ಮುಖ್ಯಸ್ಥ
    vartha chakra
    • Website

    Related Posts

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಪಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ: ಏನಿದು ಹೊಸ ವಿವಾದ?

    February 13, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    February 12, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah on ವಲಸಿಗರ ನಡುವೆ ಜಿದ್ದಾಜಿದ್ದಿನ ಪೈಪೋಟಿ (ಚಿತ್ರದುರ್ಗ ಲೋಕಸಭಾ ಕ್ಷೇತ್ರ) | Chitradurga
    • LinwoodGah on ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • LinwoodGah on ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಪೊಲೀಸ್ ಹುಡುಕಾಟ
    Latest Kannada News

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    February 14, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.