ಮಳಲಿಯಲ್ಲಿ ಮಸೀದಿ ರಿಪೇರಿ ಮಾಡೋವಾಗ ದೇವರುಗಳು ಸಿಕ್ಕಿವೆ.ಈ ಬಗ್ಗೆ ತಾಂಬೂಲ ಪ್ರಶ್ನೆ ಕೇಳಲಾಗಿದೆ ಇದು ಅವರವರ ನಂಬಿಕೆ ಇದನ್ನು ಯಾರೂ ಪ್ರಶ್ನಿಸಬಾರದು ಎಂದು ಮಾಜಿ ಮಂತ್ರಿ ಈಶ್ವರಪ್ಪ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸೇರಿದಂತೆ ಹಲವರು ಈ ಹಿಂದೆ ರಾಮಮಂದಿರ ಬಗ್ಗೆ ಟೀಕೆ ಮಾಡಿದರು. ಇವತ್ತಲ್ಲ ನಾಳೆ ಭವ್ಯ ರಾಮಮಂದಿರ ನಿರ್ಮಾಣವಾಗುತ್ತೆ. ಅದೇ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ದೇವೇಗೌಡರು ರಾಮಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ ಎಂದರು.
ಕುಮಾರಸ್ವಾಮಿ ಅವರ ತಂದೆ ದೇವೇಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಹೆಚ್ಚು ಟೀಕೆ ಮಾಡೋಕೆ ಹೋಗಲ್ಲ. ದೇವೇಗೌಡರು ಮತ್ತು ಯಡಿಯೂರಪ್ಪ ಅವರು ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ದೇವೇಗೌಡರ ವಂಶ ನನಗೂ ಒಂದು ಆದರ್ಶ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನು ಎಲ್ಲಾ ಕುಟುಂಬದವರು ಇಟ್ಟುಕೊಳ್ಳಬೇಕು. ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದರೆ ನಾನು ಟೀಕೆ ಮಾಡಲ್ಲ. ಮಸೀದಿ ರಿಪೇರಿ ಮಾಡೋವಾಗ ದೇವರುಗಳು ಸಿಕ್ಕಿವೆ. ಅದೇ ಚರ್ಚೆ ನಡೆಯುತ್ತಿದೆ ಎಂದರು.
Previous Articleಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಬಲಿ..
Next Article ಚಿನ್ಮಯಿ ಆಸ್ಪತ್ರೆ ಮಾಲೀಕ ಇನ್ನಿಲ್ಲ