ಇಸ್ರೇಲ್ ದೇಶದ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಆ ದೇಶದ ಪ್ರಧಾನಿಯಾಗಿ ಅಚ್ಚರಿ ಮೂಡಿಸುತ್ತಿದ್ದಾರೆ.
ಏಳು ವರ್ಷಗಳಲ್ಲಿ ಅತ್ಯಂತ ಹೆಚ್ಚು ಮತದಾನ ನಡೆದ ಇತ್ತೀಚಿನ ಚುನಾವಣೆಯ ಭಾಗಶಃ ಫಲಿತಾಂಶಗಳು ಹೊರಬಂದಿದ್ದು 120-ಆಸನಗಳ ಇಸ್ರೇಲ್ ನ ಸಂಸತ್ತು ನೆಸ್ಸೆಟ್ ನಲ್ಲಿ ನೆತನ್ಯಾಹು ಅವರ ಲಿಕುಡ್ ಪಕ್ಷದ ನಾಯಕರ ಬಣವು 65 ಸ್ಥಾನಗಳ ಆರಾಮದಾಯಕ ಬಹುಮತವನ್ನು ಗೆಲ್ಲಲು ಸಿದ್ಧವಾಗಿದೆ.
ದೇಶದ ರಾಜಕೀಯ ಮುಖ್ಯವಾಹಿನಿಯಿಂದ ದೂರ ಸರಿದಿದ್ದ ನೆತನ್ಯಾಹು ಅವರಿಗೆ ಇಸ್ರೇಲ್ ಬಲಪಂಥೀಯ ಪಕ್ಷದ ಉದಯದಿಂದ ರಾಜಕೀಯ ಜೀವದಾನ ನೀಡಲಾಗಿದೆ. ಅವರ ಬಲಪಂಥೀಯ ಗುಂಪಿನ ಕೆಲವು ನಾಯಕರು ಉಗ್ರಗಾಮಿಗಳೆಂದು ಅನುಮಾನಿಸಲ್ಪಟ್ಟವರಾಗಿದ್ದರೆ.
ನೆತನ್ಯಾಹು ಈಗ ಬಹಳಷ್ಟು ಧ್ರುವೀಕರಣಗೊಂಡ ಸಮಾಜವನ್ನೊಳಗೊಂಡ ಇಸ್ರೇಲ್ ದೇಶವನ್ನು ಮುನ್ನಡೆಸಲಿದ್ದಾರೆ ಮತ್ತು ಬಹುಶಃ ಇಸ್ರೇಲ್‌ನ ಇತಿಹಾಸದಲ್ಲಿ ಅತ್ಯಂತ ಬಲಪಂಥೀಯ ಸರ್ಕಾರದ ಪ್ರಧಾನಿ ಎಂದು ಕರೆಸಿಕೊಳ್ಳುವ ಸಾಧ್ಯತೆ ಇದೆ.
ಇಸ್ರೇಲ್ ನ ಪ್ರಧಾನಿಯಾಗಿದ್ದಾಗ ನೆತನ್ಯಾಹು ಅವರು ಭಾರತದ ಪ್ರಧಾನಿ ಮೋದಿಯವರ ಪರಮಾಪ್ತ ಎಂದು ಗುರುತಿಸಲ್ಪಟ್ಟಿದ್ದನ್ನು ಇಲ್ಲಿ ಗಮನದಲ್ಲಿಡಬಹುದು.