ಬೆಂಗಳೂರು, ಸೆ.25- ವಿದೇಶಿ ಯೂಟ್ಯೂಬರ್ ಓರ್ವ ನಮ್ಮ ಮೆಟ್ರೋ (Namma Metro) ಪ್ರಯಾಣದ ವೇಳೆ ಟಿಕೆಟ್ ತೆಗೆದುಕೊಳ್ಳದೆ ಗೇಟ್ ಹಾರಿ ಪ್ರಯಾಣಿಸಿದ್ದು, ಈ ಬಗ್ಗೆ ಖುದ್ದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಗೆ ಪಾಟೀಲಿಗೆ ಗುರಿಯಾಗಿದ್ದಾನೆ.
ಸೈಪ್ರಸ್ ದೇಶದ ಫಿಡಿಯಾಸ್ ಪನಾಯೊಟೌ ಎಂಬ ಯೂಟ್ಯೂಬರ್ ನಗರದ ಮೆಟ್ರೋದಲ್ಲಿ ಟಿಕೆಟ್ ತೆಗೆದುಕೊಳ್ಳದೆ ಗೇಟ್ ಹಾರಿ ಪ್ರಯಾಣಿಸಿದ್ದಾನೆ. ಅಲ್ಲದೇ ಟಿಕೆಟ್ ಇಲ್ಲದೆ ಮೆಟ್ರೋದಲ್ಲಿ ಹೇಗೆ ಪ್ರಯಾಣ ಮಾಡುವುದು ಎಂಬುದನ್ನು ಹೇಳಿಕೊಡುತ್ತೇನೆ ಎಂದು ವಿಡಿಯೋ ಕೂಡಾ ಮಾಡಿದ್ದಾನೆ.
ನಗರದ ಮೆಟ್ರೋ ನಿಲ್ದಾಣಗಳಲ್ಲಿನ ಆಗಮನ ಮತ್ತು ನಿರ್ಗಮನ ಗೇಟ್‌ಗಳಲ್ಲಿ ಈತ ಟಿಕೆಟ್ ಪಡೆಯದೇ ಗೇಟ್ ದಾಟಿ ಪ್ರವೇಶ ಪಡೆದು, ಮೆಟ್ರೋ ಪ್ರಯಾಣ ಮಾಡಿ ಮತ್ತೊಂದು ನಿಲ್ದಾಣದಲ್ಲಿ ಇಳಿದು ನಿರ್ಗಮನ ಗೇಟ್‌ನಲ್ಲಿ ಮತ್ತೆ ಗೇಟ್ ದಾಟಿ ಹೊರ ಬಂದಿದ್ದಾನೆ. ಇದನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಕೂಡಾ ಮಾಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹದ್ದೇ ಕೆಲ ಆಟೋಟೋಪದ ಮೂಲಕ ಫಿಡಿಯಾಸ್ ಅನೇಕ ಫಾಲೋವರ್ಸ್ ಹೊಂದಿದ್ದು, ವಿದೇಶಿ ಪ್ರಜೆಯ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಟಿಕೆಟ್ ಪಡೆಯದೇ ಅನೈತಿಕವಾಗಿ ಪ್ರಯಾಣ ಮಾಡಿರುವುದಕ್ಕೆ ಆತನ ವಿರುದ್ಧ ದೂರು ದಾಖಲಿಸಲು ನಮ್ಮ ಮೆಟ್ರೋ ನಿಗಮ ಮುಂದಾಗಿದೆ.


1 Comment
Mostbet traz para vocГЄ o melhor do entretenimento com recompensas Г altura – BГґnus App , Mostbet: mais emoГ§ГЈo, mais jogos, mais recompensas para vocГЄ .